ಸೆಕ್ಯುರಿಟಿ ಏಜೆನ್ಸಿ ವಿರುದ್ಧ ಸಿಡಿದೆದ್ದ ಜೆಡಿಎಸ್…
ಶಿವಮೊಗ್ಗ : ನಗರದ ಸಿಮ್ಸ್ ಮೆಗ್ಗಾನ್ ಬೋಧನಾ ಆಸ್ಪತ್ರೆ ಮತ್ತು ಶಿಕ್ಷಣ ಸಂಸ್ಥೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಏಜೆನ್ಸಿ, (ಕೆಎಸ್‌ಎಫ್ ೯) ಕಾರ್ಪರೇಟ್ ಸರ್ವೀಸ್ಸನ್ನು ನಡೆಸುತ್ತಿರುವವರ ವಿರುದ್ಧ ಕೂಡಲೇ ಕಾನೂನು ಕ್ರಮ ಕೈಗೊಳ್ಳ ಬೇಕು. ಅವರ ಗುತ್ತಿಗೆಯನ್ನು ರದ್ದುಮಾಡಬೇಕು ಮತ್ತು ಗ್ರಾಮಾಂತರ ಶಾಸಕಿ ಶ್ರೀಮತಿ ಶಾರದಾ ಪೂರ್‍ಯಾನಾಯ್ಕ ಅವರನ್ನು ಅಪಮಾನಿಸಿದ ನೌಕರನನ್ನು ವಜಮಾಡಬೇಕೆಂದು ಆಗ್ರಹಿಸಿ, ಜಿ ಜನತಾದಳ ನೇತೃತ್ವದಲ್ಲಿ ಶಿವಮೊಗ್ಗ ಗ್ರಾಮಾಂತರ ಘಟಕದ ವತಿಯಿಂದ ಮೆಗ್ಗಾನ್ ಮುಂಭಾಗ ಬೃಹತ್ ಪ್ರತಿಭಟನೆ ನಡೆಸಿ, ಸಿಮ್ಸ್ ನಿರ್ದೇಶಕರಿಗೆ ಮನವಿ ಸಲ್ಲಿಸಲಾಯಿತು.

ಮೆಗ್ಗಾನ್ ಆಸ್ಪತ್ರೆ ಮತ್ತು ಸಿಮ್ಸ್ ಸಂಸ್ಥೆಯಲ್ಲಿ ಆಸ್ಪತ್ರೆಯ ರಕ್ಷಣೆಗಾಗಿ ಹೊರಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಲು ಕೆಎಸ್‌ಎಫ್ ೯ ಸಂಸ್ಥೆಗೆ ಟೆಂಡರ್ ನೀಡಲಾಗಿದ್ದು ಶಿವಮೊಗ್ಗ ಜಿಗೆ ಸತೀಶ್ ಎಂಬ ವ್ಯವಸ್ಥಾಪಕರನ್ನು ನೇಮಕ ಮಾಡಲಾಗಿದೆ. ಸೆ.೨೭ರ ಮಧ್ಯಾಹ್ನ ಶಾಸಕಿ ಶಾರದಾ ಪೂರ್‍ಯಾನಾಯ್ಕ ಅವರು ಸತೀಶ್‌ರವರಿಗೆ ಕರೆಮಾಡಿ, ಸೆಕ್ಯೂರಿಟಿ ಗಾರ್ಡ್‌ಗಳಿಗೆ ಅನಾವಶ್ಯಕವಾಗಿ ತೊಂದರೆ ಕೊಡುತ್ತಿರುವ ಬಗ್ಗೆ ವಿಚಾರಿಸಿದಾಗ ಅವರು ಶಾಸಕಿ ಎಂದು ಗೌರವ ಕೊಡದೆ ಏರುಧ್ವನಿಯಲ್ಲಿ ಏಕವಚನದಲ್ಲಿ ಮಾತನಾಡಿದ್ದ ಲ್ಲದೇ, ಅನಾವಶ್ಯಕವಾಗಿ ಜತಿ ನಿಂದನೆ ಮಾಡಿರುವುದರಿಂದ ಸದರಿ ಏಜೆನ್ಸಿ ಹಾಗೂ ಅದರ ವ್ಯವಸ್ಥಾಪಕರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಸಿಮ್ಸ್‌ನಿಂದ ಅವರ ಗುತ್ತಿಗೆಯನ್ನು ರದ್ದುಪಡಿಸ ಬೇಕು ಅಲ್ಲಿಯವರೆಗೆ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದರು.

ಈ ವೇಳೆ ಸ್ಥಳಕ್ಕೆ ಆಗಮಿಸಿದ ಸಿಮ್ಸ್ ನಿರ್ದೇಶಕ ಡಾ|| ವಿರೂಪಾಕ್ಷಪ್ಪ, ಜಿ ಸರ್ಜನ್ ಸಿದ್ಧನಗೌಡ ಪಾಟೀಲ್‌ರವರು, ಸಮಸ್ಯೆ ನಮ್ಮ ಗಮನಕ್ಕೆ ಬಂದಿದೆ. ಸತೀಶ್ ಅವರು ಹಾಸನಕ್ಕೆ ಕಾರ್ಯನಿಮಿತ್ತ ಹೋಗಿzರೆ. ಅವರು ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ನಂತರ ಈ ಬಗ್ಗೆ ಸಿಮ್ಸ್‌ನಿಂದ ಲಿಖಿತ ಪತ್ರ ಪಡೆದ ಮೇಲೆ ಹೋರಾಟವನ್ನು ತಾತ್ಕಾಲಿಕವಾಗಿ ನಿಲ್ಲಿಸಿದ ಜೆಡಿಎಸ್ ಮುಖಂಡರು, ಜಿ ರಕ್ಷಣಾಧಿಕಾರಿಗಳಿಗೆ ಕೂಡ ಸತೀಶ್ ಹಾಗೂ ಗುತ್ತಿಗೆ ಕಂಪನಿ ಮೇಲೆ ಜತಿ ನಿಂದನೆ ದೂರನ್ನು ದಾಖಲಿಸುವುದಾಗಿ ಜೆಡಿಎಸ್ ತಿಳಿಸಿ, ಅಲ್ಲಿಂದ ನೇರವಾಗಿ ಮೆರವಣಿಗೆ ಮೂಲಕ ಎಸ್‌ಪಿ ಕಛೇರಿಗೆ ತೆರಳಿದ ಜೆಡಿಎಸ್ ಮುಖಂಡರು ಜಿಲ್ಲಾ ರಕ್ಷಣಾಧಿಕಾರಿಗಳಿಗೆ ದೂರು ನೀಡಿದರು.

ಜೆಡಿಎಸ್ ಜಿಧ್ಯಕ್ಷ ಕಡಿದಾಳ್ ಗೋಪಾಲ್, ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್, ಜಿಲ್ಲಾ ಕಾರ್‍ಯಾಧ್ಯಕ್ಷ ದಾದಾಪೀರ್, ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ತ್ಯಾಗರಾಜ್, ರಾಜ್ಯ ಕಾರ್ಯದರ್ಶಿ ರಾಕೇಶ್‌ಡಿಸೋಜ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಗೀತಾ ಸತೀಶ್, ರೈತ ಘಟಕದ ಅಧ್ಯಕ್ಷ ದಾನೇಶಪ್ಪ, ಪ್ರಮುಖರಾದ ಗಂಧದ ಮನೆ ನರಸಿಂಹ, ಕಾಂತ್‌ರಾಜ್, ಎಸ್.ಎಲ್. ನಿಖಿಲ್, ಮಧು, ಪ್ರೇಮ್ ಕುಮಾರ್, ಸಂಗಯ್ಯ, ಮಹೇಶ್ ಸೇರಿದಂತೆ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.

