ಸಮೀಕ್ಷೆ: ಲಿಂಗಾಯಿತ ಅಥವಾ ವೀರಶೈವ ಎಂದು ನಮೂದಿಸಿ…
ಶಿವಮೊಗ್ಗ : ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ವೀರಶೈವ ಲಿಂಗಾಯಿತರು ಧರ್ಮದ ಕಾಲಂ ನಲ್ಲಿ ವೀರಶೈವ ಲಿಂಗಾಯಿತರು ಅಥವಾ ಹಿಂದೂ ಎಂದು ಬರೆಯಿಸಬಹುದು. ಆದರೆ ಜಾತಿಯ ಕಾಲಂನಲ್ಲಿ ೯ರಲ್ಲಿ ಲಿಂಗಾಯಿತ ಅಥವಾ ವೀರಶೈವ ಎಂದು ಕಡ್ಡಾಯವಾಗಿ ನಮೂದಿಸ ಬೇಕು ಎಂದು ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾ ಸಭಾದ ಜಿ ಘಟಕದ ಅಧ್ಯಕ್ಷ ರುದ್ರಮುನಿ ಸಜ್ಜನ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ.೨೨ ರಂದು ಜತಿಗಣತಿ ನಡೆಯುತ್ತಿದೆ ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಮೊದಲಿ ನಿಂದಲೂ ವೀರಶೈವ ಲಿಂಗಾಯಿತ ಪ್ರತ್ಯೇಕ ಧರ್ಮಕ್ಕೆ ಅಧಿಕೃತ ಮಾನ್ಯತೆ ದೊರಕಬೇಕು ಎಂದು ಪ್ರತಿಪಾದಿಸುತ್ತಲೇ ಬಂದಿದೆ. ಮಾನ್ಯತೆ ಸಿಗುವತನಕ ಹೋರಾಟ ಮಾಡುತ್ತೇವೆ. ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಜತಿ ಮತ್ತು ಉಪಜತಿಗಳಿಗೆ ಪ್ರಾಮುಖ್ಯತೆ ಇದೆಯೇ ಹೊರತು, ಧರ್ಮಕ್ಕಲ್ಲ ಮೀಸಲಾತಿಯನ್ನು ಧರ್ಮಾಧಾರಿತವಾಗಿ ನೀಡಲು ಸಂವಿಧಾನದಲ್ಲಿ ಅವಕಾಶವಿಲ್ಲ. ಹಾಗಾಗಿ ನಮ್ಮ ಸಮುದಾಯ ಜತಿ ಮತ್ತು ಉಪಜತಿಗಳಿಗೆ ಹೆಚ್ಚಿನ ಮಹತ್ವ ನೀಡಬೇಕು ಎಂದರು.

ಗಣತಿಯ ಸಂದರ್ಭದಲ್ಲಿ ಅನುಬಂಧ ೧ರ ಕಾಲಂ ೮ರಲ್ಲಿ ಧರ್ಮದ ಕಾಲಂನಲ್ಲಿ ಸಂಕೇತ ಸಂಖ್ಯೆ ೧೧ರಲ್ಲಿ ನೀಡಿರುವ ಇತರೆ ಕಾಲಂನಲ್ಲಿ ವೀರಶೈವ ಲಿಂಗಾಯಿತ ಅಥವಾ ತಮ್ಮ ವಿವೇಚನೆಯಂತೆ ನಮೂದಿಸಬೇಕು. ಆದರೆ ಜತಿ ಕಾಲಂ ೯ರಲ್ಲಿ ಲಿಂಗಾಯಿತ ಸಮುದಾಯಕ್ಕೆ ಕೊಟ್ಟ ಸಂಕೇತ ಸಂಖ್ಯೆ ಎ-೦೮೩೨, ಅಥವಾ ವೀರಶೈವ ಸಮುದಾಯಕ್ಕೆ ನೀಡಿರುವ ಸಂಖ್ಯೆ ಎ-೧೫೨೨ ಎಂದು ನೀಡಬೇಕು ಎಂದರು.
ಪ್ರಮುಖರಾದ ಎನ್.ಎಸ್. ಕುಮಾರ್, ಮಲ್ಲಿಕಾರ್ಜುನ ಕಾನೂರ್, ಅನಿಲ್ ಪಟೇಲ್, ಪುಷ್ಪಾ ಹಾಲಪ್ಪ, ಸುಧಾ, ಗೀತ, ಗಿರೀಶ್ ಎನ್.ಜಿ., ಸಚ್ಚಿನ್ ಪೂಜರ್, ಮೋಹನ್‌ಕುಮಾರ್, ತೇಜಸ್ವಿ, ವಿಕ್ರಂ, ಹಾಲಪ್ಪ ಮುಂತಾದವರಿದ್ದರು.


