ಜಿಲ್ಲಾ ಸುದ್ದಿತಾಜಾ ಸುದ್ದಿದೇಶವಿದೇಶ

ಅ.1: ಕೂಡಲಿಯ ಶಾರದಾಪೀಠದಲ್ಲಿ ಲೋಕಕಲ್ಯಾಣಾರ್ಥ ಶತಚಂಡಿ ಯಾಗ…

Share Below Link

ಕೂಡಲಿ : ಇತಿಹಾಸ ಪ್ರಸಿದ್ಧ ಶಿವಮೊಗ್ಗ ತಾಲ್ಲೂಕಿನಲ್ಲಿರುವ ಕೂಡಲಿಯ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಕೂಡಲಿ ಶೃಂಗೇರಿ ದಕ್ಷಿಣಾಮ್ನಾಯ ಮೂಲ ಶ್ರೀ ಶಾರದಾ ಪೀಠಮ್‌ನಲ್ಲಿ ನವರಾತ್ರಿ ಪ್ರಯುಕ್ತ ಲೋಕಲ್ಯಾಣಾರ್ಥಕ್ಕಾಗಿ ಶತಚಂಡಿಯಾಗ ಆಯೋಜಿಸಿದೆ.
ಶ್ರೀಮಠದ ೭೧ನೇ ಪೀಠಾಧಿಪತಿಗಳಾದ ಶ್ರೀ ವಿದ್ಯಾಭಿನವ ವಿದ್ಯಾರಣ್ಯ ಭಾರತಿ ಸ್ವಾಮಿಗಳ ಸಾನ್ನಿಧ್ಯದಲ್ಲಿ ನವರಾತ್ರಿ ಪ್ರಯುಕ್ತ ಪ್ರತಿದಿನ ವಿವಿಧ ಹೋಮಗಳು ನಡೆಯುತ್ತಿದ್ದು, ಅ.೧ರಂದು ಶತಚಂಡಿಯಾಗ ನೆರವೇರಲಿದೆ.
ಶತಚಂಡಿಯಾಗವನ್ನು ಮತ್ತೂರಿನ ವಿದ್ವಾನ್ ಶ್ರೀ ಪ್ರದೀಪ್ ಅವಧಾನಿ ನೇತೃತ್ವದಲ್ಲಿ ನಡೆಸುತ್ತಿದ್ದು, ಭಕ್ತಾದಿಗಳು ಈ ಯಾಗದಲ್ಲಿ ಪಾಲ್ಗೊಂಡು, ಜಗದ್ಗುರುಗಳ ಮತ್ತು ಶ್ರೀ ಶಾರದಾ ಪರಮೇಶ್ವರಿ ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ಶ್ರೀಮಠದ ಪ್ರಕಟಣೆ ತಿಳಿಸಿದ್ದು, ಮಾಹಿತಿಗಾಗಿ ೯೧೬೪೧೮ ೫೨೨೫, ೯೪೮೦೫೪೪೨೨೫, ೯೮೪೪೫೭೦೪೦೪ ಸಂಪರ್ಕಿಸಲು ಶ್ರೀಮಠ ಪ್ರಕಟಣೆಯಲ್ಲಿ ಕೋರಿದೆ.