ಜಿಲ್ಲಾ ಸುದ್ದಿತಾಜಾ ಸುದ್ದಿ

ಮಕ್ಕಳಲ್ಲಿರುವ ಸರಿ-ತಪ್ಪುಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು ಅಗತ್ಯ…

Share Below Link

ಸೊರಬ : ತಾಲೂಕಿನ ಆನವಟ್ಟಿ ಕೋಟಿಪುರ ಎವರಾನ್ ಇಂಟರ್ ನ್ಯಾಷನಲ್ ರೆಸಿಡೆನ್ಷಿಯಲ್ ಸ್ಕೂಲ್ ಆವರಣ ದಲ್ಲಿ ದಸರಾ ರಜೆ ಪ್ರಯುಕ್ತ ಆಯೋಜಿಸಿದ್ದ ಸ್ಪೂರ್ತಿ ಕಾರ್ಯಕ್ರಮದ ಜರುಗಿತು.


ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಾರ್ತಿಕ್ ಸಾಹುಕಾರ್ ಅವರು ಪ್ರತಿಯೊಂದು ಮಗುವಿನಲ್ಲೂ ವಿಶೇಷ ಶಕ್ತಿ ಇರುತ್ತದೆ. ಆ ವಿಶೇಷ ಶಕ್ತಿಯನ್ನು ಹೊರ ತೆಗೆಯುವ ಅವಕಾಶ ಅಧ್ಯಾಪಕ ವೃಂದದವರಿಗೆ ಹಾಗೂ ಪೋಷಕರಿಗೆ ಇರುತ್ತದೆ ಎಂದರು.
ಯಾವ ಮಗುವೂ ಸಹ ಹುಟ್ಟುತ್ತಲೇ ದಡ್ಡದಾಗಿರುವುದಿಲ್ಲ. ಅವರು ಬೆಳೆಯುವ ವಾತಾವರಣ ಹಾಗೂ ಸಹವಾಸ ಅವರಿಗೆ ಸಿಗುವ ಅವಕಾಶಗಳು ಇವೆಲ್ಲದವರ ಮೇಲೆ ಅವರ ಬುದ್ಧಿವಂತಿಕೆ ನಿರ್ಧಾರ ವಾಗಿರುತ್ತದೆ ಎಂದರಲ್ಲದೇ, ಹಿರಿಯರು ಹೇಳುವ ಹಾಗೆ ಸಜ್ಜನರ ಸಹವಾಸ ಜೇನುತುಪ್ಪ ಸವಿದಂತೆ ಹಾಗೆ ದುರ್ಜನರ ಸಹವಾಸ ಜೇನು ಕಡಿದ ಹಾಗೆ ಎಂಬಂತೆ ಮಕ್ಕಳಿಗೆ ಒಳ್ಳೆಯತನ ಒಳ್ಳೆಯ ಗುಣವನ್ನು ನಾವು ಬೆಳೆಸಿದರೆ ಖಂಡಿತ ಅವರೂ ಒಳ್ಳೆಯ ನಾಗರಿಕರಾಗಿ ಸಮಾಜದಲ್ಲಿ ಗುರುತಿಸಿಕೊಳ್ಳುತ್ತಾರೆ. ಮಕ್ಕಳಲ್ಲಿರುವ ತಪ್ಪುಗಳನ್ನು ಕಂಡುಹಿಡಿಯುವ ಮೊದಲು ಒಳ್ಳೆಯ ಗುಣಗಳನ್ನು ಗುರುತಿಸಿ ಅವರಿಗೆ ಪ್ರೋತ್ಸಾಹವನ್ನು ನೀಡಿದರೆ ಹೆಚ್ಚಿನ ಕೆಲಸವನ್ನು ಮಾಡಲು ಮಕ್ಕಳು ಆಸಕ್ತಿಯನ್ನು ತೋರಿಸುತ್ತಾರೆ ಎಂದರು.


ಎವರಾನ್ ಸ್ಕೂಲ್‌ನ ಅಧ್ಯಾಪಕಿ ಕಾವ್ಯ ಮಾತನಾಡಿ ಮಕ್ಕಳ ಬೆಳವಣಿಗೆಗೆ ಪೋಷಕರ ಸಹಕಾರ ಅತ್ಯಗತ್ಯ. ಅಧ್ಯಾಪಕ ವೃಂದದವರು ಹೇಳಿದ ಹೋಂ ವರ್ಕ್ ಅನ್ನು ಸರಿಯಾಗಿ ಮಾಡಿ ಕಳುಹಿಸಿದರೆ ಮಕ್ಕಳ ಹೆಚ್ಚಿನ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಎಂದರು.
ಅಧ್ಯಾಪಕಿ ನೇಹಾ ಮಾತನಾಡಿ, ಮಕ್ಕಳು ಹೆಚ್ಚಿಗೆ ನಿರಾಶದಾಯಕ ಮಾತುಗಳಿಗೆ ಬೆಲೆ ಕೊಡದೆ ಸ್ಪೂರ್ತಿದಾಯಕವಾಗಿ ಜೀವನವನ್ನು ತೆಗೆದುಕೊಳ್ಳಲು ಪ್ರಾರಂಭಿಸಿದರೆ ಸಾಧನೆ ಎಂಬುದು ಕಷ್ಟ ಸಾಧ್ಯವಲ್ಲ. ಯಾವ ಕೆಲಸವನ್ನು ಆಗಲಿ ಇಷ್ಟಪಟ್ಟು ಮಾಡಿದಾಗ ಅದರಲ್ಲಿ ಯಶಸ್ಸು ಸಿಗುತ್ತದೆ ಎಂದರು.


ಅಧ್ಯಾಪಕಿ ಗೀತಾ ಮಾತನಾಡಿ ಈ ರೀತಿಯಾದ ವಿಶೇಷ ಶಿಬಿರಗಳು ಮಕ್ಕಳಿಗೆ ಅವಶ್ಯಕತೆ ಇದ್ದು ತರಗತಿಗಳಲ್ಲಿ ಕಮ್ಮಿ ಮಕ್ಕಳಿzಗ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುವ ಅವಕಾಶಗಳು ಜಸ್ತಿ ಇರುತ್ತದೆ. ಪ್ರತಿಯೊಂದು ಮಗುವಿಗೂ ಗಮನ ಹರಿಸಲು ಅವಕಾಶವಿರುತ್ತದೆ. ಪ್ರಪಂಚದಲ್ಲಿ ದಡ್ಡ ಮಕ್ಕಳಿರುವುದಿಲ್ಲ. ದಡ್ಡ ಮಕ್ಕಳನ್ನು ನಮ್ಮ ಸಮಾಜದಲ್ಲಿ ಸೃಷ್ಟಿ ಮಾಡುತ್ತೇವೆ. ಎಲ್ಲ ಮಕ್ಕಳಿಗೂ ಸಮಾನ ಅವಕಾಶ ಸಿಕ್ಕಾಗ ಅತ್ಯಂತ ಸಾಧನೆ ಮಾಡುವ ಮಕ್ಕಳಲ್ಲಿ ಪ್ರತಿ ಮಗುವಿರುತ್ತದೆ ಮುಂದೆ ಇರುತ್ತದೆ ಎಂದು ಹೇಳಿದರು.
ಶ್ರೀಮತಿ ಚರಿತ ಕಾರ್ತಿಕ್ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಎಲ್ಲಪ್ಪ ಕೆ. ಕೆ., ಬಸವರಾಜ್, ಶಿಫಾನ್ ,ಕಾಂತಪ್ಪ , ದಿವ್ಯ , ಶೃತಿ, ಕಿರಣ್, ಸ್ಪಂದನ, ಸೌಮ್ಯ, ಅಂಜಲಿ, ರೇವತಿ, ಛಾಯಾ , ಭೂಮಿಕ, ಜ್ಯೋತಿ, ರೇಖಾ, ಎಲ್ಲಮ್ಮ, ಮಧುರ , ವೀಣಾ, ನಾಹಿದ, ವಿದ್ಯಾ ಮುಂತಾದವರು ಉಪಸ್ಥಿತರಿದ್ದರು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಯಿತು.