ಜಿಲ್ಲಾ ಸುದ್ದಿತಾಜಾ ಸುದ್ದಿ

ಶಿಕ್ಷಣದಿಂದ ಮಾತ್ರ ತಳ ಸಮುದಾಯ ಸದೃಢಗೊಳ್ಳಲು ಸಾಧ್ಯ…

Share Below Link

ಶಿಕಾರಿಪುರ : ಶಿಕ್ಷಣದಿಂದ ಮಾತ್ರ ತಳ ಸಮುದಾಯ ಸದೃಢಗೊಳ್ಳಲು ಸಾಧ್ಯ. ಈ ದಿಸೆಯಲ್ಲಿ ಸಮುದಾಯದ ಪ್ರತಿಯೊಬ್ಬರೂ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ಛಲ ಬೆಳೆಸಿಕೊಂಡು ಯಶಸ್ಸು ಸಾಧಿಸಿದಲ್ಲಿ ಎಲ್ಲ ವರ್ಗದ ಜನತೆ ಅಭಿವೃದ್ದಿಗೆ ಸಹಕರಿಸಲು ಸಾದ್ಯ ಎಂದು ಜಿ.ಪಂ ಉಪಕಾರ್ಯದರ್ಶಿ (ಅಭಿವೃದ್ದಿ) ಅನ್ನಪೂರ್ಣ ಎನ್ ಮುದುಕಮ್ಮ ನವರ್ ಕೆ.ಎ.ಎಸ್ ( ಹಿರಿಯ ಶ್ರೇಣಿ ) ತಿಳಿಸಿದರು.


ಪಟ್ಟಣದ ಗುರುಭವನದಲ್ಲಿ ಕರ್ನಾಟಕ ರಾಜ್ಯ ಪರಿಶಿಷ್ಟ ಪಂಗಡಗಳ ನೌಕರರ ಸಂಘ(ರಿ) ತಾ. ಘಟಕದ ವತಿಯಿಂದ ನಡೆದ ೭ನೇ ವರ್ಷದ ವಾರ್ಷಿಕ ಮಹಾಸಭೆ, ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ಹಾಗೂ ನಿವೃತ್ತ ನೌಕರರಿಗೆ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪರಿಶಿಷ್ಟ ಪಂಗಡಗಳ ನೌಕರರ ಸಂಘ ಪ್ರತಿಭಾ ಪುರಸ್ಕಾರ ಸತತವಾಗಿ ಹಮ್ಮಿಕೊಳ್ಳುವ ಮೂಲಕ ಪ್ರತಿಭಾನ್ವಿತ ವಿದ್ಯಾರ್ಥಿಗಳ ವಿಶೇಷ ಸಾಧನೆಯನ್ನು ಸಮಾಜಕ್ಕೆ ಪರಿಚಯಿಸುವ ಜತೆಗೆ ಉಳಿದ ಮಕ್ಕಳಿಗೆ ಮಾರ್ಗದರ್ಶನ, ಸ್ಪೂರ್ತಿದಾಯಕವಾಗಲಿ ಎಂಬ ಸದುzಶ ಹೊಂದಿದ್ದು ಇದರೊಂದಿಗೆ ಸಾಧಕರಿಗೆ ಹೆಚ್ಚಿನ ಸಾಧನೆಗೆ ಪ್ರೋತ್ಸಾಹಿಸುವ ಹಿನ್ನಲೆಯನ್ನು ಹೊಂದಿದೆ ಎಂದು ತಿಳಿಸಿ, ಈ ದಿಸೆಯಲ್ಲಿ ನೌಕರರ ಸಂಘದ ಬಗ್ಗೆ ಪ್ರತಿಭಾನ್ವಿತರು ಕೃತಜ್ಞತೆ ಹೊಂದಿ ಭವಿಷ್ಯದಲ್ಲಿ ಉನ್ನತ ಉದ್ಯೋಗದ ಮೂಲಕ ಸಮಾಜದ ಋಣ ತೀರಿಸುವ ಸಂಕಲ್ಪ ಕೈಗೊಳ್ಳುವಂತೆ ಸಲಹೆ ನೀಡಿದರು.
ಸದೃಡ ಬದುಕು ಕಟ್ಟಿಕೊಳ್ಳುವ ಜತೆಗೆ ಸಮಾಜದಲ್ಲಿ ವಿಶೇಷವಾಗಿ ಗುರುತಿಸಿಕೊಳ್ಳಲು ಪ್ರತಿಯೊಬ್ಬ ರಿಗೂ ಶಿಕ್ಷಣ ಅತ್ಯಗತ್ಯವಾಗಿದ್ದು, ಇತ್ತೀಚಿನ ಶಿಕ್ಷಣ ಹೆಚ್ಚು ಅಂಕಗಳಿಕೆಗೆ ಮಾತ್ರ ಸೀಮಿತವಾಗಿದೆ ಎಂದ ಅವರು, ಹೆಚ್ಚು ಅಂಕಗಳಿಕೆಗೆ ಮಾತ್ರ ಗುರಿಯಾಗದೆ ಐಎಎಸ್,ಕೆಎಎಸ್ ಮತ್ತಿತರ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿ ಯಶಸ್ಸು ಗಳಿಸಿ ತಳಸಮುದಾಯದವರು ಉನ್ನತ ಅಧಿಕಾರಿಯಾದಲ್ಲಿ ಎಲ್ಲ ವರ್ಗದ ಜನತೆ ಸದೃಢ ಬದುಕು ಕಟ್ಟಿಕೊಳ್ಳಲು ಸಹಕರಿಸಲು ಸಾಧ್ಯ ಕಠಿಣ ಶ್ರಮ ದಿಂದ ಮಾತ್ರ ನಿರ್ದಿಷ್ಟ ಗುರಿ ತಲುಪಲು ಸಾದ್ಯ ಸುಲಭದಲ್ಲಿ ಯಶಸ್ಸು ದೊರೆಯುವುದಿಲ್ಲ ಎಂದು ತಿಳಿಸಿದರು.


ವಾಲ್ಮೀಕಿ ನಾಯಕ ಸಮುದಾಯದ ಇತಿಹಾಸ ಮತ್ತು ವರ್ತಮಾನದ ಬಗ್ಗೆ ಉಪನ್ಯಾಸಕ ನೀಡಿದ ಸ.ಪ್ರ.ದ ಕಾಲೇಜಿನ ಸಹಾಯಕ ಪ್ರಾದ್ಯಾಪಕ ಸತೀಶ ನಾಯಕ, ವಾಲ್ಮೀಕಿ ಕಳ್ಳ, ದರೋಡೆಕೋರ ಎಂಬ ಕಟ್ಟುಕತೆ ವ್ಯಾಪಕವಾಗಿದ್ದು ಇತಿಹಾಸದಲ್ಲಿ ಮರೆಮಾಚಲಾದ ಹಲವು ಸತ್ಯ ಸಂಗತಿಗಳ ಬಗ್ಗೆ ಸಮುದಾಯ ತಿಳಿದುಕೊಳ್ಳುವ ಪ್ರಯತ್ನ ಅತ್ಯಗತ್ಯವಾಗಿದೆ ಎಂದು ತಿಳಿಸಿದರು.
ಪ್ರಥಮ ಸ್ವಾತಂತ್ರಾ ಸಂಗ್ರಾಮಕ್ಕೆ ಮುನ್ನಾ ೧೮೪೯ರಲ್ಲಿ ಚಿತ್ರದುರ್ಗದಲ್ಲಿ ಬೇಡರ ಸಂಸ್ಥಾನ ಬ್ರಿಟೀಷರ ವಿರುದ್ದ ಹೋರಾಟ ವನ್ನು ಆರಂಭಿಸಿದ ಬಗ್ಗೆ ಖುದ್ದು ಕರ್ನಲ್ ಡಾಬ್ಸ್ ಎಂಬ ಬ್ರಿಟೀಷ್ ಅಧಿಕಾರಿ ದಾಖಲಿಸಿzನೆ ಎಂದ ಅವರು, ಬ್ರಿಟೀಷರ ವಿರುದ್ದ ಸುರಪುರದ ರಾಜ ವೆಂಕಟಪ್ಪ ನಾಯಕರ ಹೋರಾಟವನ್ನು ದಂಗೆ ಎಂದು ಏಕಕಾಲದಲ್ಲಿ ಕಿತ್ತೂರು ರಾಣಿ ಚನ್ನಮ್ಮಳ ಹೋರಾಟವನ್ನು ಸ್ವಾತಂತ್ರ ಹೋರಾಟ ಎಂದು ಇತಿಹಾಸದಲ್ಲಿ ದಾಖಲಿಸಿ ವೆಂಕಟಪ್ಪ ನಾಯಕನ ಹೋರಾಟದ ಮಲ್ಯ ಕುಗ್ಗಿಸುವ ಪ್ರಯತ್ನ ಸದ್ದಿಲ್ಲದೆ ನಡೆದಿದೆ ಎಂದು ವಿಷಾಧಿಸಿದರು.
ಡಾ. ಪ್ರಕಾಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾ.ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ್ ಎಂ.ಎಚ್ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಪ್ರಮುಖರಾದ ಹನುಮಂತಪ್ಪ, ಉಮೇಶ್, ಮಂಜುನಾಥ್, ನಾಗೇಶಪ್ಪ, ದೇವರಾಜ್, ಬಸವರಾಜ್ , ಮಮತಾ ಸಾಲಿ, ಸಿದ್ದಪ್ಪ, ರಾಜಪ್ಪ, ಸಂಜೀವ ಸೋಮಪ್ಪ, ಡಾ.ಪಾಂಡುರಂಗ, ತಿಪ್ಪೇಶ್, ಲೋಕೇಶ್ ಮಕರಿ, ಸೋಮಶೇಖರಪ್ಪ, ಸಂಜೀವ್ ಮತ್ತಿತರರು ಉಪಸ್ಥಿತರಿದ್ದರು.