ಜಿಲ್ಲಾ ಸುದ್ದಿತಾಜಾ ಸುದ್ದಿ

ದಸರಾ ಛಾಯಾಚಿತ್ರ ಪ್ರದರ್ಶನ, ಚಿತ್ರಕಲಾ ಪ್ರದರ್ಶನ ಮತ್ತು ಗೊಂಬೆ ಪ್ರದರ್ಶನ ಉದ್ಘಾಟನೆ..

Share Below Link

ಶಿವಮೊಗ್ಗ : ಮೈಸೂರು ದಸರಾ ಬಿಟ್ಟರೆ ಶಿವಮೊಗ್ಗ ದಸರಾ ಎರಡನೇ ವೈವಿಧ್ಯಮಯ ಅತಿ ದೊಡ್ಡ ದಸರಾವಾಗಿದ್ದು, ಈ ದಸರಾದಲ್ಲಿ ಅಮೂಲ್ಯ ಪ್ರತಿಭೆಗಳು ಮತ್ತು ಕಲಾವಿದರುಗಳಿಗೆ ಸನ್ಮಾನಿಸುತ್ತಿರು ವುದು ಮತ್ತು ಅವರ ಪ್ರತಿಭೆ ಹೊರಹೊಮ್ಮಲು ವೇದಿಕೆ ಕಲ್ಪಿಸುತ್ತಿರುವುದು ವಿಶೇಷ ಎಂದು ಜಿ ಪೊಲೀಸ್ ಅಧೀಕ್ಷಕ ಮಿಥುನ್ ಕುಮಾರ್ ಹೇಳಿzರೆ.
ಅವರು ಇಂದು ನಗರದ ಶಿವಪ್ಪನಾಯಕ ಅರಮನೆಯಲ್ಲಿ ಪಾಲಿಕೆ ವತಿಯಿಂದ ಹಮ್ಮಿ ಕೊಂಡಿದ್ದ ಕಲಾ ದಸರಾ ಛಾಯಾಚಿತ್ರ ಪ್ರದರ್ಶನ, ಚಿತ್ರಕಲಾ ಪ್ರದರ್ಶನ ಮತ್ತು ಗೊಂಬೆ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.
ನಾನು ೪ ವರ್ಷಗಳ ಹಿಂದೆ ದಸರಾದ ಮೊದಲ ದಿನವೇ ಇಲ್ಲಿಗೆ ಕರ್ತವ್ಯಕ್ಕೆ ಹಾಜರಾಗಿz. ಅವತ್ತಿನಿಂದ ಪ್ರತಿವರ್ಷವೂ ದಸರಾ ವಿಜೃಂಭಣೆಯಿಂದ ನಡೆಯುತ್ತಿದೆ. ಇನ್ನಷ್ಟು ಕಲಾವಿದರಿಗೆ ಈ ವೇದಿಕೆ ಯಿಂದ ಪ್ರೋತ್ಸಾಹ ಸಿಗಲಿ ಎಂದು ಅವರು ಹಾರೈಸಿದರು.
ಜಿಧಿಕಾರಿ ಗುರುದತ್ ಹೆಗಡೆ ಮಾತನಾಡಿ, ಶಿವಮೊಗ್ಗದಲ್ಲಿ ಅರ್ಥಪೂರ್ಣ ದಸರಾ ಆಚರಿಸ ಲಾಗುತ್ತಿದೆ. ಇದು ಸಾಂಸ್ಕೃತಿಕ ನಗರಿಯಾಗಿದ್ದು, ಶಿವಮೊಗ್ಗ ಜಿಯನ್ನು ಪ್ರವಾಸಿ ಕೇಂದ್ರ ಮಾಡುವ ದೃಷ್ಟಿಯಿಂದ ಜಿ ಟೂರಿಸಂ ಕೌನ್ಸಿಲ್‌ನಿಂದ ಸೆ. ೨೭ ರಂದು ಕುವೆಂಪು ರಂಗಮಂದಿರ ದಲ್ಲಿ ಟೂರಿಸಂ ಡೇ ಎಂದು ಆಚರಿಸಲಾಗುತ್ತಿದ್ದು, ಜಿಯ ಪ್ರತಿಭಾನ್ವಿತ ಛಾಯಾಗ್ರಾಹಕರಿಂದ ಛಾಯಾಚಿತ್ರ ಪ್ರದರ್ಶನ ಮತ್ತು ಈ ಕುರಿತು ಏರ್ಪಡಿಸಿದ ವಿವಿಧ ಪ್ರವಾಸಿ ತಾಣಗಳ ಛಾಯಾ ಚಿತ್ರಗಳನ್ನು ಕೂಡ ಪ್ರದರ್ಶಿಸಲಾ ಗುವುದು. ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ವಿನಂತಿಸಿದರು.
ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷ ಪಿ.ಎಸ್. ದೀಪು ಮಾತನಾಡಿ, ಶಿವಮೊಗ್ಗದಲ್ಲಿ ಅನೇಕ ಕಲಾವಿದರಿದ್ದು, ನಮಗೊಂದು ಆರ್ಟ್ ಗ್ಯಾಲರಿಗೆ ಶಾಶ್ವತ ವ್ಯವಸ್ಥೆ ಮಾಡಿಕೊಡಬೇಕು ಎಂದು ವಿನಂತಿಸಿದರು.


ಶಾಸಕ ಎಸ್.ಎನ್. ಚನ್ನಬಸಪ್ಪ ಮಾತನಾಡಿ, ಪ್ರತಿ ಬಾರಿ ಕಲಾ ದಸರಾ ಉದ್ಘಾಟನೆಯ ಸಂದರ್ಭದಲ್ಲಿ ಕಲಾವಿದರು ಶಾಶ್ವತ ನೆಲೆ ಬಗ್ಗೆ ಬೇಡಿಕೆ ಇಡುತ್ತಾರೆ. ಈ ವೇದಿಕೆಯಲ್ಲಿ ಜಿಧಿಕಾರಿಗಳು ಇzರೆ. ಅವರೂ ಕೂಡ ಆರ್ಟ್ ಗ್ಯಾಲರಿ ನಿರ್ಮಾಣಕ್ಕೆ ಸಹಕಾರ ನೀಡಲು ಒಪ್ಪಿzರೆ. ಸಂಘದ ವತಿಯಿಂದ ಪ್ರಯತ್ನ ಮುಂದುವರೆ ಸಬೇಕು. ನಮ್ಮ ಸಹಕಾರವಿದೆ ಎಂದರು.
ಅನೇಕ ಸಮಸ್ಯೆಗೆ ಪರಿಹಾರ ಹುಡುಕುವ ಜಿಧಿಕಾರಿಗಳು ನಮಗೆ ಸಿಕ್ಕಿzರೆ. ಆರ್ಟ್ ಗ್ಯಾಲರಿ ಆಗಲೇಬೇಕು. ಅದನ್ನು ಮಾಡೋಣ. ಈ ಬಾರಿ ಕಲಾ ದಸರಾದಲ್ಲಿ ಗೊಂಬೆಗಳನ್ನು ಜೋಡಿಸಿಕೊಂಡಿzವೆ. ಹಿಂದೆ ಮೂರು ದಿನ ದಸರಾ ಮಾಡುತ್ತಿzವು. ಈಗ ಕಳೆದ ಕೆಲವು ವರ್ಷಗಳಿಂದ ೧೪ ಸಮಿತಿ ರಚನೆಯಾಗಿದೆ. ಕ್ರಿಯಾಶೀಲರಾಗಿ ದಸರಾ ಕೆಲಸವನ್ನು ತಮ್ಮ ಮನೆಯ ಹಬ್ಬದಂತೆ ಆಚರಿಸುತ್ತಿzರೆ. ಈ ಹಬ್ಬವನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಕೆಲಸ ನಾವೆಲ್ಲರೂ ಮಾಡಬೇಕು. ಹಿಂದೆ. ರಾಜ ಮಹಾರಾಜರು ಈ ಕಾರ್ಯ ಮಾಡುತ್ತಿದ್ದರು. ಈ ಬಾರಿ ಸರ್ಕಾರ ಈಗಾಗಲೇ ೫೦ ಲಕ್ಷ ರೂ. ಅನುದಾನವನ್ನು ಕ್ಲಿಯರೆನ್ಸ್ ಮಾಡಿದೆ. ಇನ್ನು ಎರಡು ಕೋಟಿ ಹಣವನ್ನು ಜೋಡಿಸಬೇಕಾಗಿದೆ ಎಂದರು.
ವೇದಿಕೆಯಲ್ಲಿ ಶೇಖರ್ ಗೌಳೇರ್, ಅಬ್ದುಲ್ ಮುಜೀಬ್, ಪ್ರಭು, ರಾಧಿಕಾ ಜಗದೀಶ್, ಮುರಳೀಧರ್, ಆಯುಕ್ತ ಮಾಯಣ್ಣಗೌಡ, ಉಪ ಆಯುಕ್ತ ತುಷಾರ್ ಹೊಸೂರ್, ಕಲಾ ದಸರಾ ತಂಡದ ಕಾರ್ಯದರ್ಶಿ ವಸಂತಕುಮಾರಿ ಇದ್ದರು.
ವಿವಿಧ ಕಲಾವಿದರಿಂದ ಗೊಂಚೆ ಪ್ರದರ್ಶನ ಮತ್ತು ಛಾಯಾಚಿತ್ರ ಪ್ರದರ್ಶನ ಆಕರ್ಷಣೀಯವಾಗಿದ್ದು, ಜಿಧಿಕಾರಿಗಳು ಕುಂಚದಿಂದ ಚಿತ್ರ ಬಿಡಿಸುವುದರ ಮೂಲಕ ಈ ಪ್ರದರ್ಶನಕ್ಕೆ ಚಾಲನೆ ನೀಡಿದರು.