ಜಿಲ್ಲಾ ಸುದ್ದಿತಾಜಾ ಸುದ್ದಿ

ಆರ್‌ಎಎಫ್ ಬೆಟಾಲಿಯನ್‌ನಿಂದ ವಿವಿಧೆಡೆ ಸ್ವಚ್ಚತಾ ಕಾರ್ಯ

Share Below Link

ಭದ್ರಾವತಿ : ನಗರದ ಮಿಲ್ಟ್ರಿಕ್ಯಾಂಪಿನಲ್ಲಿರುವ ರ್‍ಯಾಪಿಡ್ ಆಕ್ಷನ್ ಫೋರ್‍ಸ್ (ಆರ್‌ಎಎಫ್) ಬೆಟಾಲಿಯನ್ -೯೭ ಕ್ಷಿಪ್ರ ಕಾರ್ಯಪಡೆಯ ಕಮ್ಯಾಂಡರ್ ಕಮಲೇಶ್ ಕುಮಾರ್ ನೇತೃತ್ವದಲ್ಲಿ ಸೆ.೧೭ ರಿಂದ ಅ.೨ರವರೆಗೆ ನಗರದ ವಿವಿಧ ಸ್ಥಳಗಳಲ್ಲಿ ಸ್ಚಚ್ಚತಾ ಕಾರ್ಯವನ್ನು ಹಮ್ಮಿಕೊಂಡಿದೆ.
ನಗರದ ಪ್ರಧಾನ ಅಂಚೆ ಕಚೇರಿ, ಕಾಗದ ನಗರ ಅಂಚೆ ಕಚೇರಿ, ಕಾಗದ ನಗರ ಪ್ರೌಢಶಾಲೆ, ನ್ಯೂಟೌನ್ ತರಂಗ ಕಿವುಡು ಮತ್ತು ಮೂಕ ಶಾಲೆ, ನ್ಯೂಟೌನ್ ಸಿzರ್ಥ ಅಂಧರ ಕೇಂದ್ರ ಇನ್ನು ಮುಂತಾದ ಸ್ಥಳಗಳ ಆವರಣದ ಸುತ್ತಮುತ್ತಲಿನಲ್ಲಿ ಸ್ವಚ್ಚತಾ ಕಾರ್ಯ ನಡೆಸಿತು. ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಸ್ಚಚ್ಚತಾ ಕಾರ್ಯದ ಅಗತ್ಯತೆ ಹಾಗೂ ಅನಿವಾರ್ಯತೆಯ ಅರಿವು ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಬೆಟಾಲಿಯನ್ ಅಧಿಕಾರಿಗಳು, ಸಿಬ್ಬಂದಿ, ಶಾಲೆಗಳ ಮುಖ್ಯಸ್ಥರು ಶಿಕ್ಷಕರು ಸಿಬ್ಬಂದಿಗಳು ಭಾಗವಹಿಸಿ ಯಶಸ್ಸಿಗೆ ಸಹಕರಿಸಿದರು.