ಆರೋಗ್ಯಜಿಲ್ಲಾ ಸುದ್ದಿತಾಜಾ ಸುದ್ದಿ

ಮಾರಕ ಕಾಯಿಲೆ ಕ್ಯಾನ್ಸರ್ ಕುರಿತು ಜಾಗೃತಿ ಅಗತ್ಯ: ಶಾಸಕ ಚನ್ನಬಸಪ್ಪ

Share Below Link

ಶಿವಮೊಗ್ಗ : ಕ್ಯಾನ್ಸರ್ ನಂತಹ ಮಾರಕ ಕಾಯಿಲೆ ಬಂದ ನಂತರ ಗುಣಪಡಿಸು ವುದಕ್ಕಿಂತ, ಅದು ಬರದಂತೆ ತಡೆಯಲು ಜನರು ವಹಿಸಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಂಗಳೂರು ಕ್ಯಾನ್ಸರ್ ಆಸ್ಪತ್ರೆ ನಡೆಸುತ್ತಿರುವ ಅರಿವು ಆಭಿಯಾನ ಗಮನಾರ್ಹವಾದದ್ದು ಎಂದು ಶಾಸಕ ಎಸ್.ಎನ್ . ಚನ್ನಬಸಪ್ಪ ಅಭಿಪ್ರಾಯಪಟ್ಟರು.


ನಗರದ ಮಥುರಾ ಪ್ಯಾರಾಡೈಸ್ ಹೋಟೆಲ್ ನೆಲ ಮಹಡಿಯಲ್ಲಿ ಎಂಐಒ ಆಸ್ಪತ್ರೆ ಹಾಗೂ ಸಂಜೀವಿನಿ ಕ್ಯಾನ್ಸರ್ ಸೇವಾ ಟ್ರಸ್ಟ್ ವತಿಯಿಂದ ನೂತನ ವಾಗಿ ಅರಂಭಗೊಂಡ ಕ್ಯಾನ್ಸರ್ ಮಾಹಿತಿ ಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು, ಇದೊಂದು ದೇವತಾ ಕಾರ್ಯ. ವಿಜಯದಶಮಿ ಆರಂಭದ ಕ್ಣಣ ದಲ್ಲಿಯೇ ಈ ಕೇಂದ್ರ ಆರಂಭ ವಾಗುತ್ತಿದೆ. ಇದು ಜನರಿಗೆ ಉಪಯುಕ್ತವಾದ ಮಾಹಿತಿ ನೀಡಲು ನಿರಂತರವಾಗಿ ಮುಂದು ವರೆಯುವುದಕ್ಕೆ ಚಾಮುಂಡಿ ತಾಯಿಯ ಆಶೀರ್ವಾದ ಸಿಗಲಿದೆ. ಹಾಗೆಯೇ ಕೇಂದ್ರಕ್ಕೆ ಬೇಕಾದ ಎ ಸಹಕಾರವನ್ನು ನೀಡಲಾಗು ವುದು ಎಂದು ಶಾಸಕರು ಭರವಸೆ ನೀಡಿದರಲ್ಲದೇ, ನಮ್ಮ ದೇಶವು ಸೇವೆಗೆ ಹೆಸರುವಾಸಿ. ಸೇವಾ ಕಾರ್ಯವು ದೇಶದಲ್ಲಿ ಸಾಂಸ್ಕೃತಿಕ ವಾಗಿಯೇ ಬಂದಿದೆ. ದೇಶದ ಜನರ ಆಯುಷ್ಯ ಹೆಚ್ಚಾಗಲಿ ಎಂದು ಪ್ರಧಾನಿ ಮೋದಿ ಅವರು ಆಯುಷ್ಮಾನ್ ಯೋಜನೆಯನ್ನು ಜರಿಗೆ ತಂದಿzರೆ. ಇದು ದೇಶದ ಬಡ ಜನರಿಗೆ ಹೆಚ್ಚು ಅನುಕೂಲ ವಾಗಲಿದೆ ಎಂದರು.


ಎಂಐಒ ಆಸ್ಪತ್ರೆ ಹಾಗೂ ಸಂಜೀವಿನಿ ಕ್ಯಾನ್ಸರ್ ಸೇವಾ ಟ್ರಸ್ಟ್ ನಿರ್ದೇಶಕ ಡಾ. ಸುರೇಶ್ ರಾವ್ ಮಾತನಾಡಿ, ದೇಶದಲ್ಲಿ ಕ್ಯಾನ್ಸರ್ ಇಂದು ಅತ್ಯಂತ ವೇಗವಾಗಿ ಹರಡುತ್ತಿದೆ. ಪ್ರತಿ ನಿಮಿಷಕ್ಕೆ ಮೂರು ಗರ್ಭಕೋಶ ಕ್ಯಾನ್ಸರ್ ಪತ್ತೆಯಾಗುತ್ತಿದೆ. ಅದೇ ರೀತಿ ರಕ್ತ ಕ್ಯಾನ್ಸರ್, ಗಂಟಲು ಕ್ಯಾನ್ಸರ್ ಪ್ರಕರಣಗಳು ಇವೆ. ಕ್ಯಾನ್ಸರ್ ದೇಶವನ್ನು ಮುಳುಗಿಸುತ್ತಿದೆ. ಹಾಗಾಗಿ ಕ್ಯಾನ್ಸರ್ ಬಗ್ಗೆ ಜಗೃತಿ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಜನರಿಗೆ ಜಗೃತಿ ಮೂಡಿಸು ವುದು, ಆಸ್ಪತ್ರೆಯ ಇತರೆ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡುವುದು ಈ ಕೇಂದ್ರದ ಉದ್ದೇಶ ಎಂದರು.
ಬಹುತೇಕರಿಗೆ ಕ್ಯಾನ್ಸರ್ ಬಗೆಗಿನ ಅರಿವಿನ ಕೊರತೆಯಿದೆ. ಕ್ಯಾನ್ಸರ್ ಭೀಕರ ಕಾಯಿಲೆ, ಅದು ಬಂದರೆ ಗುಣ ಮುಖರಾಗು ವುದಿಲ್ಲ ಎಂದು ಬಚ್ಚಿಡುವ ಯತ್ನ ಮಾಡಲಾಗುತ್ತದೆ. ಆದರೆ ನಾಲ್ಕನೇ ಹಂತದಲ್ಲೂ ಚಿಕಿತ್ಸೆ ಯಿಂದ ಪೂರ್ಣ ಪ್ರಮಾಣದಲ್ಲಿ ಗುಣಮುಖವಾದ ಎಂದ ಅವರು, ಅದಕ್ಕೆ ಅವರು ಇತ್ತೀಚಿನ ೨ ಪ್ರಕರ ಣಗಳನ್ನು ಉದಾಹರಿಸಿದರು.
ಕ್ಯಾನ್ಸರ್ ಮಾಹಿತಿ ಕೇಂದ್ರದ ಸಂಯೋಜಕ ಅ.ನಾ. ವಿಜಯೇಂದ್ರ ರಾವ್ ಮಾತ ನಾಡಿ, ಶಿವಮೊಗ್ಗದಲ್ಲಿ ಮಾಹಿತಿ ಕೇಂದ್ರ ಸ್ಥಾಪನೆ ಯಾಗಿದೆ. ಇದರ ಸದುಪಯೋಗ ವನ್ನು ಜಿಯ ಲ್ಲದೆ ಅಕ್ಕಪಕ್ಕದ ಜಿಯವರು ಕೂಡ ಪಡೆಯ ಬೇಕು. ಕ್ಯಾನ್ಸರ್‌ಗೆ ಸಂಬಂಧಿಸಿದಂತೆ ಈಗಾಗಲೇ ಇಡೀ ಜಿಯಲ್ಲಿ ಶಾಲಾ-ಕಾಲೇಜು ಗಳಲ್ಲಿ, ಆಸ್ಪತ್ರೆ ಗಳಲ್ಲಿ ಜಗೃತಿ ಮೂಡಿಸಲಾಗು ತ್ತಿದೆ. ಮಾಹಿತಿ ಕೇಂದ್ರದ ಮೂಲಕ ಈ ಬಗ್ಗೆ ಮತ್ತಷ್ಟು ಅರಿವನ್ನು ವಿಸ್ತರಿಸಲಾಗು ವುದು. ಹಾಗೆಯೇ ಕ್ಯಾನ್ಸರ್‌ಗೆ ಸಂಬಂಧಿಸಿದಂತೆ ೧, ೨, ೩ನೇ ಹಂತದಲ್ಲಿರುವವರೂ ಕೂಡ ಹೆಚ್ಚಿನ ಚಿಕಿತ್ಸೆಗೆ ಈ ಕೇಂದ್ರವನ್ನು ಸಂಪರ್ಕಿಸಬಹುದು ಎಂದರು.
ಇದೇ ವೇಳೆ ಕ್ಯಾನ್ಸರನಿಂದ ಗುಣಮುಖರಾದ ಶಿವಮೊಗ್ಗ ಗ್ಯಾಲ್ಯಾಕ್ಸಿ ಲೈಬ್ರರಿಯ ಮಾಲೀಕ ಶಿವಶಂಕರ್ ಅವರನ್ನು ಸನ್ಮಾನಿಸ ಲಾಯಿತು. ಕಾರ್ಯಕ್ರಮದಲ್ಲಿ ಆಸ್ಪತ್ರೆಯ ವ್ಯವಸ್ಥಾಪಕ ದುರ್ಗಾ ಪ್ರಸಾದ್, ಎಸ್. ಎಸ್. ವಾಗೀಶ್, ಎಂ.ಎನ್. ಸುಂದರರಾಜ್, ಭಾನು, ಆಕಾಶ್ ಸೇರಿದಂತೆ ಮತ್ತಿತರರಿದ್ದರು. ದಿವ್ಯಾಶ್ರೀ ಸ್ವಾಗತಿಸಿದರು.