ಆರೋಗ್ಯಜಿಲ್ಲಾ ಸುದ್ದಿತಾಜಾ ಸುದ್ದಿ

ಒಂದೇ ದಿನದಲ್ಲಿ ೧೧,೭೮೬ ಮಹಿಳೆಯರಿಗೆ ಉಚಿತ ಇಸಿಜಿ ಪರೀಕ್ಷೆ; ರಾಷ್ಟ ಮಟ್ಟದಲ್ಲಿ ಹೊಸ ದಾಖಲೆ ಮಾಡಿದ ನಾರಾಯಣ ಹೆಲ್ತ್

Share Below Link

ಶಿವಮೊಗ್ಗ : ಭಾರತದ ಪ್ರತಿಷ್ಠಿತ ವೈದ್ಯಕೀಯ ಸಂಸ್ಥೆ ಆಗಿರುವ ನಾರಾಯಣ ಹೆಲ್ತ್, ಕೇಂದ್ರ ಸರ್ಕಾರದ ಸ್ವಸ್ಥ ನಾರಿ, ಸಶಕ್ತ ಪರಿವಾರ ಅಭಿಯಾನದ ಭಾಗ ವಾಗಿ ಸೆ.೧೭ರ ನಿನ್ನೆ ಒಂದೇ ದಿನ ದಲ್ಲಿ ತನ್ನ ೨೦ಕ್ಕೂ ಹೆಚ್ಚು ಆಸ್ಪತ್ರೆ ಗಳಲ್ಲಿ ಬರೋಬ್ಬರಿ ೧೧,೭೮೬ ಮಹಿಳೆಯರಿಗೆ ಉಚಿತ ಇಸಿಜಿ ಪರೀಕ್ಷೆಗಳನ್ನು ಯಶಸ್ವಿಯಾಗಿ ನಡೆಸಿ ದಾಖಲೆ ಬರೆದಿದೆ.
ಪ್ರಧಾನಿ ಮೋದಿ ಅವರು ದೇಶದ ಮಹಿಳೆಯರು ಮತ್ತು ಮಕ್ಕಳಿಗೆ ಉತ್ತಮ ವೈದ್ಯಕೀಯ ಸೇವೆ ಒದಗಿಸುವ ಉದ್ದೇಶದಿಂದ ಸೆ. ೧೭ರಂದು ಸ್ವಸ್ಥ ನಾರಿ, ಸಶಕ್ತ ಪರಿವಾರ ಅಭಿಯಾನವನ್ನು ಆರಂಭಿಸಿದರು. ಈ ಯೋಜನೆ ಗೆ ಕೈ ಜೋಡಿಸಿದ ಪ್ರತಿಷ್ಠಿತ ನಾರಾಯಣ ಹೆಲ್ತ್ ಈ ಮೂಲಕ ಕೇಂದ್ರ ಸರ್ಕಾರದ ಯೋಜನೆಗಳ ಜೊತೆ ಖಾಸಗಿ ವೈದ್ಯಕೀಯ ಸಂಸ್ಥೆಗಳು ಕೆಲಸ ಮಾಡಬೇಕಾದ ಮಹತ್ವವನ್ನು ಸಾರಿದೆ.
ನಾರಾಯಣ ಹೆಲ್ತ್ ನ ಈ ಅಭಿಯಾನದಲ್ಲಿ ರಾಜ್ಯದ ವಿವಿಧ ನಗರಗಳ ಮಹಿಳೆಯರು ಅತ್ಯಂತ ಉತ್ಸಾಹದಿಂದ ಭಾಗವಹಿಸಿದ್ದು ವಿಶೇಷವಾಗಿತ್ತು. ನಾರಾಯಣ ಹೆಲ್ತ್ ನ ಆಸ್ಪತ್ರೆಗಳು, ಹಾರ್ಟ್ ಸೆಂಟರ್ ಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳು ಬೆಳಿಗ್ಗೆ ೯ ರಿಂದ ಸಂಜೆ ೫ ರವರೆಗೆ ಕಾರ್ಯ ನಿರ್ವಹಿಸಿದ್ದು, ಎ ವಯಸ್ಸಿನ ಮಹಿಳೆಯರಿಗೆ ಯಾವುದೇ ತೊಡಕು ಉಂಟಾಗದ ರೀತಿಯಲ್ಲಿ ಇಸಿಜಿ ಪರೀಕ್ಷೆಯನ್ನು ನಡೆಸಿದ್ದು ವಿಶೇಷವಾಗಿತ್ತು. ಅದರಲ್ಲೂ ಶಿವಮೊಗ್ಗದ ಸಹ್ಯಾದ್ರಿ ನಾರಾ ಯಣ ಆಸ್ಪತ್ರೆಯಲ್ಲಿ ಒಂದೇ ದಿನದಲ್ಲಿ ಸುಮಾರು ೩೫೦ಕ್ಕೂ ಅಧಿಕ ಸಂಖ್ಯೆಯ ಮಹಿಳೆಯರು ಇಸಿಜಿ ಪರೀಕ್ಷೆಗಳು ಮಾಡಿಸಿಕೊಂಡರು.


ಈ ಕುರಿತು ಮಾತನಾಡಿದ ನಾರಾಯಣ ಹೆಲ್ತ್ ನ ಸಂಸ್ಥಾಪಕ ಮತ್ತು ಅಧ್ಯಕ್ಷರಾದ ಡಾ. ದೇವಿ ಶೆಟ್ಟಿ ಅವರು, ಒಂದೇ ದಿನದಲ್ಲಿ ೧೦,೦೦೦ಕ್ಕೂ ಅಧಿಕ ಸಂಖ್ಯೆಯಲ್ಲಿ ಇಸಿಜಿ ಪರೀಕ್ಷೆ ನಡೆಸಿದ್ದು ನಮಗೆ ಖುಷಿ ಕೊಟ್ಟಿದೆ. ಇದು ಕೇವಲ ಸಂಖ್ಯೆಯಲ್ಲ, ಬದಲಿದೆ ಇದು ಹೃದಯದ ಆರೋಗ್ಯ ಪಾಲಿಸು ವುದು ಮುಖ್ಯ ಎಂದು ಅರಿತು ಆ ನಿಟ್ಟಿನಲ್ಲಿ ಮಹಿಳೆಯರ ಯಶಸ್ಸಿನ ಹೆಜ್ಜೆಯಾಗಿದೆ. ನಾರಾಯಣ ಹೆಲ್ತ್ ನಲ್ಲಿ ನಾವು ರೋಗ ತಡೆ ಗಟ್ಟುವ ಚಿಕಿತ್ಸೆಯೇ ಆರೋಗ್ಯ ವಂತ ರಾಷ್ಟ್ರದ ಅಡಿಪಾಯ ಎಂದು ನಂಬಿದ್ದೇವೆ ಮತ್ತು ಆ ನಂಬಿಕೆಗೆ ಪೂರಕವಾಗಿ ಸ್ವಸ್ಥ ನಾರಿ, ಸಶಕ್ತ ಪರಿವಾರ ಯೋಜನೆ ಮೂಡಿ ಬಂದಿದೆ ಎಂದು ಹೇಳಿದರು.
ನಾರಾಯಣ ಹೆಲ್ತ್ ನ ಗ್ರೂಪ್ ಸಿಇಓ ಡಾ. ಇಮ್ಯಾನು ಯೆಲ್ ರೂಪರ್ಟ್ ಅವರು ಮಾತ ನಾಡಿ,ದೇಶಾದ್ಯಂತ ನಾವು ಅಭೂತಪೂರ್ವ ಪ್ರತಿಕ್ರಿಯೆ ಯನ್ನು ಪಡೆದಿದ್ದೇವೆ. ರೋಗ ತಡೆಗಟ್ಟುವ ಚಿಕಿತ್ಸೆಯ ಕುರಿತು ಜಗೃತಿ ಹೆಚ್ಚುತ್ತಿರು ವುದಕ್ಕೆ ಈ ಅದ್ಭುತ ಪ್ರತಿಕ್ರಿಯೆಯೇ ಸಾಕ್ಷಿಯಾಗಿದೆ. ಈ ಮೂಲಕ ನಾವು ಕೇವಲ ಪ್ರಮುಖ ನಗರಗಳ ಮಹಿಳೆಯರನ್ನು ಮಾತ್ರವೇ ತಲುಪಿಲ್ಲ, ಬದಲಿಗೆ ಚಿಕ್ಕ ಪಟ್ಟಣಗಳ ಮಹಿಳೆಯರೂ ಇಸಿಜಿ ಪರೀಕ್ಷೆ ಮಾಡಿಸಿಕೊಳ್ಳುವಂತೆ ಮಾಡಿದ್ದೇವೆ. ೨೦ಕ್ಕೂ ಹೆಚ್ಚು ಆಸ್ಪತ್ರೆಗಳಲ್ಲಿನ ನಮ್ಮ ತಂಡಗಳು ಈ ಯೋಜನೆಯನ್ನು ಯಶಸ್ವಿಗೊಳಿಸಲು ದಣಿವರಿಯದೆ ಶ್ರಮಿಸಿವೆ. ಈ ಯಶಸ್ಸು ನಾರಾಯಣ ಹೆಲ್ತ್ ನ ಸಾಮರ್ಥ್ಯವನ್ನು ತೋರಿಸಿಕೊಟ್ಟಿದೆ ಎಂದು ಹೇಳಿದರು.
ಭಾರತದಲ್ಲಿ ಹೃದಯ ಸಂಬಂಧಿ ಕಾಯಿಲೆಗಳಿಂದ ಶೇ.೨೫ರಷ್ಟು ಸಾವುಗಳು ಉಂಟಾಗುತ್ತಿದ್ದು, ಇದರಲ್ಲಿ ಬಹುಪಾಲು ಮಹಿಳೆಯರೇ ಇzರೆ. ಗ್ಲೋಬಲ್ ಬರ್ಡನ್ ಆಫ್ ಡಿಸೀಸ್ ಸ್ಟಡಿಯ ಪ್ರಕಾರ ಭಾರತದ ಮಹಿಳೆಯರಲ್ಲಿ ಉಂಟಾಗು ತ್ತಿರುವ ಸಾವಿಗೆ ಹೃದಯ ಕಾಯಿಲೆಯೇ ಪ್ರಮುಖ ಕಾರಣವಾಗಿದೆ. ಶೇ.೧೮ರಷ್ಟು ಮಹಿಳೆಯರು ಹೃದಯ ಸಮಸ್ಯೆಯಿಂದ ಇಹಲೋಕ ತ್ಯಜಿಸುತ್ತಿzರೆ. ಹೀಗಾಗಿ ಮಹಿಳೆಯರ ಆರೋಗ್ಯ ರಕ್ಷಣೆ ಕಡೆಗೆ ಗಮನ ಹರಿಸಿರುವ ನಾರಾಯಣ ಹಾಸ್ಪಿ ಟಲ್ ಈ ಮಹತ್ವದ ಕ್ರಮ ಕೈಗೊಂಡಿದೆ.
ಉಚಿತ ಇಸಿಜಿ ಅಭಿಯಾನವು ನಾರಾ ಯಣ ಹೆಲ್ತ್ ಇತಿಹಾಸದಲ್ಲಿ ಹೊಸ ದಾಖಲೆ ಬರೆದಿದೆ. ೨೦೨೩ರಲ್ಲಿ ಬೆಂಗಳೂರಿನ ನಾರಾ ಯಣ ಹೆಲ್ತ್ ಸಿಟಿಯು ಒಂದೇ ಸ್ಥಳದಲ್ಲಿ ೨೪ ಗಂಟೆಗಳಲ್ಲಿ ೩,೭೯೭ ಇಸಿಜಿಗಳನ್ನು ನಡೆಸಿ ಗಿನ್ನಿಸ್ ವಿಶ್ವ ದಾಖಲೆಯನ್ನು ಸ್ಥಾಪಿಸಿತ್ತು. ಇದೀಗ ನಾರಾಯಣ ಹೆಲ್ತ್ ತನ್ನ ದಾಖಲೆ ಯನ್ನು ತಾನೇ ಮುರಿದು ಹೊಸ ದಾಖಲೆ ಬರೆದಿದೆ.


ನಾರಾಯಣ ಹೆಲ್ತ್ ಕುರಿತು: ಡಾ. ದೇವಿ ಶೆಟ್ಟಿ ಸ್ಥಾಪಿಸಿರುವ ನಾರಾಯಣ ಹೆಲ್ತ್ ಸಂಸ್ಥೆಯ ಕೇಂದ್ರ ಕಚೇರಿ ಬೆಂಗಳೂರಿನಲ್ಲಿದೆ ಮತ್ತು ಈ ಸಂಸ್ಥೆಯು ಜಗತಿಕ ಮಟ್ಟದ ವೈದ್ಯಕೀಯ ಸೇವಾ ಕ್ಷೇತ್ರದಲ್ಲಿ ಪ್ರಮುಖ ಸ್ಥಾನವನ್ನು ಪಡೆದಿದೆ. ಭಾರತದ ಅತಿದೊಡ್ಡ ವೈದ್ಯಕೀಯ ಸೇವೆ ಒದಗಿಸುವ ಸಂಸ್ಥೆಗಳಲ್ಲಿ ಒಂದಾಗಿರುವ ನಾರಾಯಣ ಹೆಲ್ತ್ ಸಂಸ್ಥೆಯು ಭಾರತ ಮತ್ತು ಕೆರಿಬಿಯನ್ ಪ್ರದೇಶಗಳಲ್ಲಿ ಪ್ರಾಥ ಮಿಕ, ದ್ವಿತೀಯ ಹಂತದ ಮತ್ತು ಸೂಪರ್ ಸ್ಪೆಷಾಲಿಟಿ ವೈದ್ಯಕೀಯ ಸೇವೆಗಳನ್ನು ಒದಗಿ ಸುತ್ತಾ ಬಂದಿದ್ದು, ಬಹಳ ಪ್ರಸಿದ್ಧವಾಗಿದೆ. ಸಂಸ್ಥೆಯು ವಿವಿಧ ವೈದ್ಯಕೀಯ ವಿಭಾಗ ಗಳಲ್ಲಿ ಗುಣಮಟ್ಟದ ಕೇಂದ್ರಗಳು ಮತ್ತು ೧೮,೮೨೨ರಷ್ಟು ವೃತ್ತಿ ಪರರ ತಂಡವನ್ನು ಹೊಂದಿದೆ. ಇದರಲ್ಲಿ ೩,೮೬೮ ನುರಿತ ವೈದ್ಯರು ಮತ್ತು ತಜ್ಞರು ಇzರೆ. ಅತ್ಯುತ್ತ ಮ ಸೌಲಭ್ಯ ಮತ್ತು ತಂಡ ಗಳ ಮೂಲಕ ಉತ್ಕೃಷ್ಟ ಮಟ್ಟದ ವೈದ್ಯ ಕೀಯ ಸೇವೆ ಒದಗಿಸುತ್ತಿದೆ. ನಾರಾಯಣ ಒನ್ ಹೆಲ್ತ್ (ಎನ್‌ಎಚ್ ಇಂಟಿಗ್ರೇಟೆಡ್ ಕೇರ್) ಮತ್ತು ನಾರಾಯಣ ಹೆಲ್ತ್ ಇನ್ಶೂರೆನ್ಸ್ ಇವು ನಾರಾಯಣ ಹೆಲ್ತ್ ನ ಅಂಗಸಂಸ್ಥೆಗಳಾಗಿವೆ ಎಂದರಲ್ಲದೆ, ಹೆಚ್ಚಿನ ಮಾಹಿತಿಗಾಗಿ, ಭೇಟಿ ನೀಡಿ: https://www.narayana health.org/ ಸಂಪರ್ಕಿಸಲು ಕೋರಿದರು.