ಜಿಲ್ಲಾ ಸುದ್ದಿತಾಜಾ ಸುದ್ದಿ

ಕನ್ನಡ ಭಾಷೆಯನ್ನು ಪ್ರತಿಯೊಬ್ಬರು ಗೌರವಿಸಿ…

Share Below Link

ನ್ಯಾಮತಿ : ಕರ್ನಾಟಕ ರಾಜ್ಯದಲ್ಲಿ ವಾಸಿಸುವ ಪ್ರತಿಯೊಬ್ಬರು ಕನ್ನಡ ಭಾಷೆಗೆ ಗೌರವ ಕೊಡುವುದರ ಜೊತೆಗೆ ಕಲಿಯಬೇಕು ಎಂದು ಉರ್ದು ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಶಕೀಲ್ ಅಹಮ್ಮದ್ ತಿಳಿಸಿದರು.
ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಪ್ರತಿತಿಂಗಳ ಎರಡನೇ ಶನಿವಾರ ನಡೆಯುವ ಮಾಸಿಕ ಸಾಹಿತ್ಯ ಸೌರಭ ಕಾರ್ಯ ಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕನ್ನಡ ಭಾಷೆಯ ಬಗ್ಗೆ ತಮಗೆ ಆಸಕ್ತಿ ಪ್ರೀತಿ ಇದ್ದದರಿಂದ ಕನ್ನಡ ಭಾಷೆಯನ್ನು ಕಲಿತು ಕನ್ನಡ ಶಿಕ್ಷಕ ನಾಗಿ ಸೇವೆ ಸಲ್ಲಿಸಿದ್ದು, ಈಗಲೂ ಸಹಾ ಹೊನ್ನಾಳಿ ಮತ್ತು ನ್ಯಾಮತಿ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯ ಕ್ರಮಗಳಲ್ಲಿ ಸಕ್ರೀಯ ಪಾಲ್ಗೊಳ್ಳುತ್ತೇನೆ ಎಂದು ಹೇಳಿ ದರು.
ಸಾಹಿತ್ಯ ಪರಿಷತ್ತು ನಡೆಸುತ್ತಿರು ವ ಸೌರಭ ಕಾರ್ಯಕ್ರಮದಿಂದ ಅನೇಕ ಸ್ಥಳೀಯ ಪ್ರತಿಭೆಗಳನ್ನು ಗುರುತಿಸುವ ಕೆಲಸ ಆಗುತ್ತಿರು ವುದು ಶ್ಲಾಘನೀಯ ಎಂದರು.


ಪ್ರಪಂಚದ ಇತರೆ ಭಾಷೆಗ ಳೊಂದಿಗೆ ಕನ್ನಡ ಭಾಷೆಗೆ ತನ್ನದೇ ಆದ ಸ್ಥಾನವಿದೆ. ಕನ್ನಡ ಭಾಷೆಯನ್ನು ಮೊದಲು ಕನ್ನಡಿಗರು ಪ್ರೀತಿಸು ವಂತೆ ಹೇಳುವ ಪರಿಸ್ಥಿತಿ ಬಂದಿ ರುವುದು ವಿಷಾಧನೀಯ ಎಂದು ರಾಜ್ಯ ನಿವೃತ್ತ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎಂಪಿಎಂ ಷಣ್ಮುಖಯ್ಯ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತು ಕಾರ್ಯಕ್ರಮದಲ್ಲಿ ಕಾರ್ಯಕಾರಿ ಸಮಿತಿಯವರು ಸಕ್ರಿಯವಾಗಿ ಪಾಲ್ಗೊಳ್ಳದಿರುವುದರ ಬಗ್ಗೆ ಸನ್ಯಾಸಿ ಕೋಡಮಗ್ಗಿ ಸಮಾಜ ಸೇವಕಿ ಎಸ್.ಸೌಭಾಗ್ಯಮ್ಮ ಬೇಸರ ವ್ಯಕ್ತಪಡಿಸಿದರು.
ಪೋಷಕರು ತಮ್ಮ ತಂದೆ ತಾಯಿಯನ್ನು ಗೌರವಿಸುವುದರ ಮೂಲಕ ತಮ್ಮ ಮಕ್ಕಳಲ್ಲೂ ಆ ಭಾವನೆ ಬರುವಂತೆ ಮಕ್ಕಳನ್ನು ಬೆಳಸಿ ಆದರ್ಶ ಮಕ್ಕಳನ್ನಾಗಿ ಬೆಳಸಿ ಎಂದು ಸದಸ್ಯ ಸೈಯದ್ ಅಪ್ಸರ್ ಪಾಷ ಮನವಿ ಮಾಡಿದರು.
ಕನ್ನಡ ಸಾಹಿತ್ಯ ಪರಿಷತ್ತು ನ್ಯಾಮತಿ ತಾಲ್ಲೂಕು ಘಟಕ ಅಧ್ಯಕ್ಷ ಡಿ.ಎಂ.ಹಾಲಾರಾಧ್ಯ ಅಧ್ಯಕ್ಷತೆ ವಹಿಸಿದ್ದರು.
ಬೆಳಗುತ್ತಿ ಹೋಬಳಿ ಘಟಕದ ಅಧ್ಯಕ್ಷ ಎಂ.ಜಿ.ಕವಿರಾಜ, ಕೋಶಾ ಧ್ಯಕ್ಷ ಎಂ.ಎಸ್.ಜಗದೀಶ, ಸಂಘ ಟನಾ ಕಾರ್ಯದರ್ಶಿ ಸಿ.ಕೆ.ಭೋಜ ರಾಜ, ಕದಳಿ ಮಹಿಳಾ ಸಂಘದ ಅಂಬಿಕಾ ಬಿದರಕಟ್ಟೆ, ಸಂಘಟನಾ ಕಾರ್ಯದರ್ಶಿ ಬಿ.ಆರ್.ಉಷಾ, ಸೊಂಡೂರು ಮಹೇಶ್ವರಪ್ಪ, ಎನ್.ಎಸ್.ಅರುಣಕುಮಾರ, ಗ್ರಂಥಪಾಲಕಿ ಈ ಸುಮಲತಾ, ರೇಖಾ ಗಜನನ, ಬಿದರಕಟ್ಟೆ ಸತೀಶ, ಎಂ.ಜಯದೇವಪ್ಪ, ಆಯುಷ್ಯೆ ವೈದ್ಯೆ ಯೋಗಿತಾ, ಕನ್ನಡ ಉಪನ್ಯಾಸಕಿ ವಿಜಯಮಣಿ, ಬಸವದಳ ಸುಮಾ ಸಾಹಿತ್ಯ ಸೇವೆ ಸಲ್ಲಿಸಿದರು.