ಟಿ.ವಿ.ನಾರಾಯಣ ಶಾಸ್ತ್ರಿ ಅವರ ಜನ್ಮಶತಾಬ್ದಿ ಆಚರಣೆ…
ಶಿವಮೊಗ್ಗ : ಜಿ ವಾಣಿಜ್ಯ ಮತ್ತು ಕೈಗಾರಿಕಾ ಸಂಘದಿಂದ ಕೈಗಾರಿಕೆ ಪಿತಾಮಹ ಟಿ.ವಿ.ನಾರಾಯಣ ಶಾಸ್ತ್ರಿ ಅವರ ಜನ್ಮಶತಾಬ್ದಿ ಆಚರಣೆ ಪ್ರಯುಕ್ತ ಸಾಗರ ರಸ್ತೆಯ ಕೈಗಾರಿಕಾ ವಸಾ ಹತು ಪ್ರವೇಶದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಟಿ.ವಿ.ನಾರಾಯಣ ಶಾಸ್ತ್ರಿ ಅವರ ಪುತ್ತಳಿಗೆ ಮಾಲಾರ್ಪಣೆ ಮಾಡಲಾಯಿತು.

ಕೈಗಾರಿಕೋದ್ಯಮಿ ಬಿ.ಸಿ. ನಂಜುಂಡ ಶೆಟ್ಟಿ ಮಾತನಾಡಿ, ಶಿವಮೊಗ್ಗ ಜಿಯಲ್ಲಿ ಕೈಗಾರಿಕಾ ಕ್ರಾಂತಿಗೆ ಮೂಲ ಕಾರಣಕರ್ತರು ಟಿ.ವಿ.ನಾರಾಯಣಶಾಸ್ತ್ರಿ ಎಂದರು. ಕೈಗಾರಿಕೋದ್ಯಮಿ ಎಸ್.ರುದ್ರೆಗೌಡ ಮಾತನಾಡಿ, ಶಿವಮೊಗ್ಗದಲ್ಲಿ ಫೌಂಡ್ರಿ ಕೈಗಾರಿಕೆಗಳು ಬೆಳೆಯಲು ಅವರ ಶ್ರಮ ಮತ್ತು ಮಾರ್ಗ ದ ರ್ಶನ ಸಹಕಾರಿಯಾಗಿದೆ ಎಂದರು.
ಜಿ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ ಮಾತನಾಡಿ, ನಿಜವಾದ ಕೈಗಾರಿಕಾ ಕ್ರಾಂತಿಯನ್ನು ಟಿ.ವಿ.ನಾರಾಯಣ ಶಾಸ್ತ್ರಿ ಅವರು ಪ್ರಾರಂಭಿಸಿದರು. ಅವರು ಅನೇಕ ಯುವಕರನ್ನು ಸಾಮಾನ್ಯ ಇಂಜಿನಿ ಯರಿಂಗ್, ಆಟೋ ಸರ್ವಿಸ್, ಕೃಷಿ ಉಪಕರಣಗಳು, ಟೈರ್ ರಿಟ್ರೇಡಿಂಗ್, ಟ್ರ್ಯಾಕ್ಟರ್ ಟ್ರೈಲರ್ ನಿರ್ಮಾಣ, ಆಟೋ ಘಟಕಗಳು, ಫೌಂಡ್ರಿ ಘಟಕಗಳನ್ನು ಪ್ರಾರಂಭಿ ಸಲು ಪ್ರೇರೇಪಿಸಿದರು ಎಂದರು.
ಜಿ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್, ಕಾರ್ಯದರ್ಶಿ ಎ.ಎಂ.ಸುರೇಶ್, ಸಹ ಕಾರ್ಯದರ್ಶಿ ಕೆ.ಎಸ್.ಸುಕುಮಾರ್, ಖಜಂಚಿ ಆರ್.ಮನೋಹರ, ನಿರ್ದೇಶಕ ರಾದ ಎಸ್.ಎಸ್.ಉದಯ ಕುಮಾರ್, ಗಣೇಶ ಎಂ.ಅಂಗಡಿ, ಜಿ.ವಿ.ಕಿರಣ ಕುಮಾರ್ , ಕೆ.ಬಿ.ಶಿವಕುಮಾರ್, ರವಿ ಪ್ರಕಾಶ್ ಜೆನ್ನಿ, ಸಾಗರ ಕೈಗಾರಿಕಾ ವಸಾಹತು ಪ್ರದೇಶದ ಅಧ್ಯಕ್ಷ ಉಮೇಶ್ ಶಾಸ್ತ್ರಿ, ಕೈಗಾರಿಕಾ ಉದ್ಯಮಿ ಭೂಪಾಳಂ ಸತ್ಯನಾರಾಯಣ, ಮಾಜಿ ಅಧ್ಯಕ್ಷ ಡಿ.ಎಂ.ಶಂಕ್ರಪ್ಪ, ರಮೇಶ್ ಹೆಗ್ಡೆ, ಜೋಯಿಸ್ ರಾಮಾಚಾರ್, ಅನೇಕ ಕೈಗಾರಿಕೋದ್ಯಮಗಳು ಉಪಸ್ಥಿತರಿದ್ದರು.
