ಮಹಿಳೆಯರು ಸಂಘಟಿತರಾದರೆ ಯಾವ ಸಾಧನೆಯನ್ನೂ ಮಾಡಬಹುದು…
ಸಾಗರ : ಮಹಿಳೆಯರು ಸಂಘಟಿತರಾದರೆ ಯಾವ ಸಾಧನೆಯನ್ನಾದರೂ ಮಾಡಬಹುದು ಎಂಬುದಕ್ಕೆ ಇನ್ನರ್ ವ್ಹೀಲ್ ಸಂಸ್ಥೆ ಉದಾಹರಣೆ ಎಂದು ನಗರಸಭೆ ಅಧ್ಯಕ್ಷೆ ಮೈತ್ರಿ ಪಾಟೀಲ್ ಶ್ಲಾಘಿಸಿದರು.
ಇಲ್ಲಿನ ಶ್ರೀ ರಾಘವೇಶ್ವರ ಸಭಾಭವನದಲ್ಲಿ ಇನ್ನರ್ ವ್ಹೀಲ್ ಕ್ಲಬ್ ಆಫ್ ಸಾಗರ್ ಯೂನಿಕ್ ವತಿಯಿಂದ ಏರ್ಪಡಿಸಿದ್ದ ಇನ್ನರ್ ವ್ಹೀಲ್ ಜಿ-೩೧೮ರ ೫೬ ನೇ ಜಿ ಸಮ್ಮೇಳನ ಉದ್ಘಾಟನಾ ಸಮಾರಂಭ ದಲ್ಲಿ ಅವರು ಮಾತನಾಡಿ, ಇನ್ನರ್ ವ್ಹೀಲ್ ಕ್ಲಬ್ ಅಂತರಾಷ್ಟ್ರೀಯ ಸಂಸ್ಥೆ ಯಾದರೂ ಭಾರತದಲ್ಲಿ ವ್ಯವಸ್ಥಿತ ವಾಗಿ ಕಟ್ಟಲಾಗಿದೆ. ಮಹಿಳೆಯರ ನೇತೃತ್ವದಲ್ಲಿ ಈ ಸಂಸ್ಥೆ ಬೆಳೆದಿರು ವುದು ಹೆಮ್ಮೆಯ ಸಂಗತಿ ಎಂದರು.
ಇನ್ನರ್ ವ್ಹೀಲ್ ಸಂಸ್ಥೆಯ ೮ ಜಿಗಳ ಸುಮಾರು ೪೦೦ ಸದಸ್ಯರು ಇಲ್ಲಿ ಭಾಗವಹಿಸಿzರೆ. ಹತ್ತು ಹಲವಾರು ಸೇವಾ ಕಾರ್ಯಗಳ ಮೂಲಕ ಮಹಿಳೆಯರ ಸಮಗ್ರ ಅಭಿವೃದ್ಧಿಗೆ ಸಂಸ್ಥೆ ಶ್ರಮಿಸುತ್ತಿದೆ. ಮಹಿಳೆಯರು ಯಾವುದರಲ್ಲೂ ಹಿಂದೆ ಬಿದ್ದಿಲ್ಲ. ಗ್ರಾಮ ಪಂಚಾಯಿತಿ ಯಿಂದ ಹಿಡಿದು ರಾಷ್ಟ್ರಪತಿ ದ್ರೌಪದಿ ಮರ್ಮು ವರೆಗೆ ಎಲ್ಲ ರೀತಿಯ ಹುzಗಳನ್ನು ನಿರ್ವಹಿಸುತ್ತಿzರೆ. ಇಂಥ ಸಾಧನೆಗಳಿಗೆ ಇನ್ನರ್ ವ್ಹೀಲ್ ಸಂಸ್ಥೆ ಪ್ರೇರಣೆ ನೀಡುತ್ತಿದೆ. ಮಹಿಳೆಯರನ್ನು ಸಂಘಟಿಸುವುದು ಸುಲಭದ ಕೆಲಸವಲ್ಲ. ಸಂಘಟನೆ ಶಕ್ತಿ ಇದೆ ಎಂಬುದನ್ನು ಅರಿತುಕೊಳ್ಳಬೇಕು ಎಂದರು.

ಇನ್ನರ್ ವ್ಹೀಲ್ ಜಿ-೩೧೮ರ ಜಿ ಅಧ್ಯಕ್ಷೆ ಶಬರಿ ಕಡಿದಾಳ್ ಮಾತನಾಡಿ, ಈ ಕ್ಲಬ್‌ನ ವ್ಯಾಪ್ತಿಯಲ್ಲಿ ಕರ್ನಾಟಕದ ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಶಿವಮೊಗ್ಗ, ಉಡುಪಿ, ದಕ್ಷಿಣ ಕನ್ನಡ, ಚಾಮರಾಜನಗರ ಜಿಗಳನ್ನು ಒಳಗೊಂಡಿದೆ. ಈ ಎಲ್ಲ ಜಿಗಳಿಂದ ಸದಸ್ಯೆಯರು ಈ ಸಮ್ಮೇಳನಕ್ಕೆ ಆಗಮಿಸಿzರೆ. ಸಾಗರ ಸುತ್ತಮುತ್ತಲು ಅನೇಕ ಆಕರ್ಷಣೀಯ ಪ್ರೇಕ್ಷಣೀಯ ಸ್ಥಳಗಳಿವೆ. ಇಲ್ಲಿ ಸಮ್ಮೇಳನ ನಡೆಯುತ್ತಿರುವುದು ಖುಷಿಯ ಸಂಗತಿ ಎಂದರು.
ಇನ್ನರ್ ವ್ಹೀಲ್ ಕ್ಲಬ್ ಆಫ್ ಸಾಗರ್ ಯೂನಿಕ್ ಅಧ್ಯಕ್ಷೆ ರಾಜೇಶ್ವರಿ ಮಹೇಶ್ ಅಂಕದ ಅಧ್ಯಕ್ಷತೆ ವಹಿಸಿದ್ದರು.
ಸಮ್ಮೇಳನ ಸಮಿತಿ ಅಧ್ಯಕ್ಷೆ ಶಶಿಕಲಾ ಅಶ್ವತ್ಥನಾರಾಯಣ, ಜಿ ಕಾರ್ಯದರ್ಶಿ ಉಮಾ ಮಹೇಶ್, ಕ್ಲಬ್ ೩೧೮ ರ ಜಿ ಉಪಾಧ್ಯಕ್ಷೆ ರಜನಿ ಭಟ್, ಪ್ರಮುಖರಾದ ದೀಪಾ ಭಂಡಾರಿ, ವೈಶಾಲಿ ಕುಡವ, ಅನಿತಾ ಸುರೇಶ್, ಸಹನಾ ನಾಗರಾಜ್, ರೇಖಾ ಶಿವಕುಮಾರ್, ಪೂರ್ಣಿಮಾ ಗುರುಪ್ರಸಾದ್, ಸ್ನೇಹಲತಾ ವಿನಯ್, ಡಾ.ರಾಜನಂದಿನಿ ಕಾಗೋಡು ಮತ್ತಿತರರು ಉಪಸ್ಥಿತರಿದ್ದರು.

