ಜಿಲ್ಲಾ ಸುದ್ದಿತಾಜಾ ಸುದ್ದಿ

ಪಡೆದ ಸಾಲವನ್ನು ಸಕಾಲದಲ್ಲಿ ಮರು ಪಾವತಿಸಿ….

Share Below Link

ಹೊನ್ನಾಳಿ : ಸಕಾಲದಲ್ಲಿ ಪಡೆದ ಸಾಲವನ್ನು ಮರು ಪಾವತಿಸುವ ಮೂಲಕ ಸೊಸೈಟಿಯ ಏಳ್ಗೆಗಾಗಿ ಸರ್ವ ಸದಸ್ಯರೂ ಸಹಕರಿಸಬೇಕೆಂದು ಸೊಸೈಟಿಯ ಅಧ್ಯಕ್ಷ ಡಾ.ಎಚ್.ಪಿ. ರಾಜಕುಮಾರ್ ತಿಳಿಸಿದರು.
ಪಟ್ಟಣದ ಹಿರೇಕಲ್ಮಠದ ಶ್ರೀ ಚನ್ನಪ್ಪಸ್ವಾಮಿ ಸಮುದಾಯ ಭವನದಲ್ಲಿ ಹೊನ್ನಾಳಿ ಅರ್ಬನ್ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿಯ ೨೬ನೇ ವರ್ಷದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.


ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲ್ಲೂಕುಗಳ ಸಹಕಾರಿ ಕ್ಷೇತ್ರದಲ್ಲಿ ಸಾಲ ವಸೂಲಾತಿ ಯಲ್ಲೂ ಮುಂಚೂಣಿಯಲ್ಲಿದ್ದು, ತನ್ನದೇ ಆದ ಪ್ರಸಿದ್ದಿ ಪಡೆದಿರುವ ಹೊನ್ನಾಳಿ ಅರ್ಬನ್ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ. ಲಿ., ೨೦೨೪-೨೫ ನೇ ಸಾಲಿಗೆ ರೂ. ೧.೧೧ ಕೋಟಿ ನಿವ್ವಳ ಲಾಭ ಗಳಿಸಿದ್ದು, ಶೇ.೧೨ರಷ್ಟು ಷೇರು ಡಿವಿಡೆಂಟ್ ಘೋಷಣೆ ಮಾಡುವ ಮೂಲಕ ಸದಸ್ಯರ ಹಿತ ಕಾಯುವ ಕೆಲಸವನ್ನು ಮಾಡುತ್ತಿದೆ ಎಂದರು.
ಸೊಸೈಟಿಯ ಎ ಮೂರು ಶಾಖೆಗಳಲ್ಲಿ ಗಣಕೀಕರಣ ಗೊಂಡಿದ್ದು ೨೦೨೪-೨೫ನೇ ಸಾಲಿನಲ್ಲಿ ಒಟ್ಟಾರೆಯಾಗಿ ೧೬೭ ಕೋಟಿ ವ್ಯವಹಾರ ಮಾಡುವ ಮೂಲಕ ಸಾಧನೆ ಮಾಡಿರುವ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದರು.
ಸೊಸೈಟಿಯ ಸದಸ್ಯರು ಅಕಸ್ಮಿಕವಾಗಿ ನಿಧನರಾದಲ್ಲಿ ಸೊಸೈಟಿಯವತಿಯಿಂದ ೫೦೦೦ ರೂ.ಗಳನ್ನು ಕೊಡಲಾಗುತ್ತಿದೆ. ಗುಂಪು ವಿಮಾ ವ್ಯಾಪ್ತಿಗೆ ಬರುವ ಸದಸ್ಯರಿಗೆ ಯಾವುದೇ ಅಫಘಾತ ದಿಂದ ಮರಣ ಹೊಂದಿದರೆ ಒಂದು ಲಕ್ಷ ಹಣ ಅವರ ವಾರಸುದಾರರಿಗೆ ನೀಡಲಾಗುತ್ತಿದೆ ಎಂದರು.
ಎಸ್.ಎಸ್.ಎಲ್.ಸಿ., ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.
ಆಡಳಿತ ಸಲಹೆಗಾರರಾದ ಕುಮಾರ್, ಸಿಇಒ ಎಚ್.ಪಿ. ದಿನೇಶ್, ಸೊಸೈಟಿಯ ಉಪಾಧ್ಯಕ್ಷ ಎಚ್.ವೀರೇಶ್, ನಿರ್ದೇಶಕರಾದ ಎಚ್.ಎಂ. ಅರುಣ್‌ಕುಮಾರ್, ಜಿ.ಆರ್. ಪ್ರಕಾಶ್, ಎಚ್.ಕೆ. ರೂಪ, ಎನ್.ಜಯರಾವ್, ಎಚ್. ಎಂ. ಶಿವಮೂರ್ತಿ, ಬಿ.ಎಚ್. ಉಮೇಶ್, ಡಾ.ಬಿ.ಎಚ್, ರಾಜ ನಾಯ್ಕ್, ಎಚ್.ಬಿ.ಮೋಹನ್, ಸಿ.ಕೆ. ರವಿಕುಮಾರ್, ಕೆ.ಆರ್. ನಾಗರಾಜ್, ಎನ್.ಪ್ರಸಾದ್, ಎನ್. ಎನ್.ನಾಗರತ್ನ, ಡಿ.ಎನ್. ಶಾಂತಲಾ, ಶಾಖಾ ವ್ಯವಸ್ಥಾಪಕ ಆರ್.ಎಚ್.ರಂಗನಾಥ್, ಎಚ್. ಚಂದ್ರಶೇಖರ್ ಇನ್ನಿತರರಿದ್ದರು.