ಜಿಲ್ಲಾ ಸುದ್ದಿತಾಜಾ ಸುದ್ದಿಲೇಖನಗಳುಶಿಕ್ಷಣ

ಶಿಕ್ಷಕಿ ಅನಿತಾ ಸೂರ್ಯ ಅವರ ಚೊಚ್ಚಲ ಕವನ ಸಂಕಲನ ಮನದ ಹನಿಗಳು ಇಂದು ಲೋಕಾರ್ಪಣೆ…

Share Below Link

ಶಿವಮೊಗ್ಗ : ಲೇಖಕಿ, ಸಾಮಾಜಿಕ ಹೋರಾಟಗಾರ್ತಿ ಹಾಗೂ ಶಿಕ್ಷಕಿಯಾಗಿ ವಿದ್ಯಾರ್ಥಿಗಳ ಪ್ರೀತಿಗೆ ಪಾತ್ರರಾಗಿರುವ ಅನಿತಾ ಸೂರ್ಯ ಅವರ ಮೊದಲ ಕವನ ಸಂಕಲನ ಮನದ ಹನಿಗಳು ಸೆ.೧೨ರ ನಾಳೆ ಲೋಕಾರ್ಪಣೆ ಗೊಳ್ಳುತ್ತಿದ್ದು, ಈ ಮೂಲಕ ಅವರು ಸಾಹಿತ್ಯ ಲೋಕಕ್ಕೆ ತಮ್ಮ ಕಾವ್ಯಯಾನವನ್ನು ಅಧಿಕೃತವಾಗಿ ಆರಂಭಿಸುತ್ತಿzರೆ.
ಸೆ.೧೨ರ ನಾಳೆ ಸಂಜೆ ೪ ಗಂಟೆಗೆ ಚಾಲುಕ್ಯ ನಗರದ ಸಾಹಿತ್ಯ ಗ್ರಾಮದಲ್ಲಿ ಜಿ ಕಸಾಪ ಅಧ್ಯಕ್ಷ ಡಿ. ಮಂಜುನಾಥ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಖ್ಯಾತ ಸಾಹಿತಿ ಹಾಗೂ ಪ್ರಕಾಶಕಿ ಅಕ್ಷತಾ ಹುಂಚದಕಟ್ಟೆ ಅವರು ಪುಸ್ತಕ ಬಿಡುಗಡೆ ಮಾಡುವರು. ಪತ್ರಕರ್ತ ಎನ್.ರವಿಕುಮಾರ್ ಅವರು ಪುಸ್ತಕ ಕುರಿತು ಮಾತನಾಡಲಿದ್ದಾರೆ.
ಅನಿತಾ ಸೂರ್ಯ ಅವರು ವೃತ್ತಿಪರವಾಗಿ ಶಿಕ್ಷಕಿಯಾಗಿದ್ದು, ಹಲವು ವರ್ಷಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿzರೆ. ವಿದ್ಯಾರ್ಥಿಗಳಿಗೆ ಕೇವಲ ಪಾಠ ಬೋಧನೆಗಷ್ಟೇ ಸೀಮಿತವಾಗದೆ, ಮಲ್ಯಾಧಾರಿತ ಬದುಕು ಮತ್ತು ಸೃಜನಾತ್ಮಕ ಚಿಂತನೆ ಬೆಳೆಸುವಲ್ಲಿ ವಿಶೇಷ ಒತ್ತು ನೀಡುತ್ತಾ ಬಂದಿzರೆ.
ಸಾಮಾಜಿಕ ಹೋರಾಟಗಾರ್ತಿಯಾಗಿಯೂ ಗುರುತಿಸಿಕೊಂಡಿರುವ ಅವರು ಮಹಿಳಾ ಹಕ್ಕುಗಳು, ಸಮಾನತೆ ಹಾಗೂ ದಲಿತ ಮತ್ತು ಹಿಂದುಳಿದ ವರ್ಗಗಳ ಸಾಮಾಜಿಕ ಕಳಕಳಿ ಕುರಿತಂತೆ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿzರೆ. ಜನಜಾಗೃತಿ ಕಾರ್ಯಕ್ರಮಗಳು, ಚರ್ಚೆಗಳು, ಕನ್ನಡಪರ ಹೋರಾಟ ಹಾಗೂ ಸಾಮಾಜಿಕ ಹೋರಾಟಗಳ ಮೂಲಕ ಸಮಾಜಮುಖಿ ಕಾರ್ಯಗಳಲ್ಲಿ ತಮ್ಮ ಪಾತ್ರವನ್ನು ನಿಭಾಯಿಸುತ್ತಿzರೆ.
ಮನದ ಹನಿಗಳು ಕವನ ಸಂಕಲನದಲ್ಲಿ ಲೇಖಕಿಯ ವೈಯಕ್ತಿಕ ಭಾವನೆಗಳು, ಬದುಕಿನ ಅನುಭವಗಳು ಮತ್ತು ಸಮಾಜದ ಕುರಿತು ಹೊಂದಿರುವ ಆಲೋಚನೆಗಳು ಪ್ರತಿಬಿಂಬಿತ ಗೊಂಡಿವೆ. ಸರಳ ಹಾಗೂ ಮನಮುಟ್ಟುವ ಭಾಷೆಯಲ್ಲಿ ಬರೆದಿರುವ ಈ ಕವನಗಳು ಓದುಗರ ಮನಸ್ಸಿನಲ್ಲಿ ಆಳವಾದ ಸ್ಪಂದನೆ ಮೂಡಿಸುವ ನಿರೀಕ್ಷೆ ಇದೆ.
ಕವಯತ್ರಿಯಾಗಿ ಇದು ಅವರ ಪ್ರಥಮ ಕೃತಿ ಆಗಿದ್ದರೂ, ಶ್ರೀಯುತರು ಈಗಾಗಲೇ ಶಿವಮೊಗ್ಗದಿಂದ ಪ್ರಕಟಗೊಳ್ಳುತ್ತಿರುವ ಹೊಸನಾವಿಕ ಕನ್ನಡ ದಿನಪತ್ರಿಕೆ, ಹೊಸನಾವಿಕ ವೆಬ್ ನ್ಯೂಸ್ ಸೇರಿದಂತೆ ನಗರದ ವಿವಿಧ ಪತ್ರಿಕೆಗಳಲ್ಲಿ ಹಲವು ಕವನ, ಲೇಖನಗಳನ್ನು ಬರೆಯುವ ಮೂಲಕ ಓದುಗರ ಮನಗೆದ್ದಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ಭವಿಷ್ಯದಲ್ಲಿ ಅವರಿಂದ ಇನ್ನಷ್ಟು ಸಾರ್ಥಕ ಕೃತಿಗಳು ಬರಲಿವೆ ಎಂಬ ನಿರೀಕ್ಷೆಯನ್ನು ಸಾಹಿತ್ಯಾಭಿಮಾನಿಗಳು ವ್ಯಕ್ತಪಡಿಸಿzರೆ.
ಇದೇ ಸಂದರ್ಭದಲ್ಲಿ ಶಿಕ್ಷಕರುಗಳಾದ ಸುರೇಶ್ ಮಲ್ಲಿಗೆ ಮನೆ, ನೇತ್ರಾವತಿ, ಲತಾ ರಾಜ್‌ಕುಮಾರ್, ಶೋಭ ಅವರುಗಳನ್ನು ಸನ್ಮಾನಿಸಲಾಗುವುದು.
ಮುಖ್ಯ ಅತಿಥಿಗಳಾಗಿ ಪ್ರಮುಖರಾದ ಡಾ. ಜಿ.ಕೆ. ರಮೇಶ್, ಟಿ.ಕೆ. ರಮೇಶ್‌ಶೆಟ್ಟಿ, ಕೆ.ಪಿ. ಶ್ರೀಪಾಲ್, ಪ್ರೊ| ಸತ್ಯನಾರಾಯಣ, ಎನ್.ಆರ್. ಮಂಜುಳಾ ನಾಗರಾಜ್, ಮಹಾದೇವಿ ಭಾಗವಹಿಸುವರು. ಈ ಕಾರ್ಯಕ್ರಮ ದಲ್ಲಿ ಸಾಹಿತ್ಯಾಭಿಮಾನಿಗಳು, ಲೇಖಕರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು, ಹೋರಾಟಗಾರರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ಕನ್ನಡ ಸಾಹಿತ್ಯವನ್ನು ಪ್ರೋತ್ಸಾಹಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗಳಿಸಿಕೊಡಬೇಕಾಗಿ ಅವರು ವಿನಂತಿಸಿದ್ದಾರೆ.