ಜಿಲ್ಲಾ ಸುದ್ದಿತಾಜಾ ಸುದ್ದಿ

ಸೊರಬ: ನಾಳೆ ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಪೂರ್ವ ಮೆರವಣಿಗೆ…

Share Below Link

ಸೊರಬ : ವಿಶ್ವ ಹಿಂದೂ ಪರಿಷದ್- ಭಜರಂಗದಳ ನೇತೃತ್ವದ ಹಿಂದೂ ಮಹಾಸಭಾ ಗಣಪತಿ ಉತ್ಸವ ಸಮಿತಿಯಿಂದ ಪಟ್ಟಣದ ಕಾನುಕೇರಿ ಬಡಾವಣೆಯಲ್ಲಿ ಪ್ರತಿಷ್ಠಾಪಿತ ಶ್ರೀ ಗಣೇಶ ಮೂರ್ತಿಯ ವಿಸರ್ಜನಾ ಕಾರ್ಯಕ್ರಮ ಸೆ.೧೦ರ ನಾಳೆ ನಡೆಯಲಿದೆ.
ನಾಳೆ ಬೆಳಗ್ಗೆ ೧೧ಕ್ಕೆ ಶ್ರೀ ಸ್ವಾಮಿ ಯ ಸನ್ನಿಧಿಯಿಂದ ಆರಂಭವಾಗುವ ಶೋಭಾಯಾತ್ರೆ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ, ಶ್ರೀ ಸ್ವಾಮಿ ವಿವೇಕಾನಂದ ಭೋದನಾ ಸಂಸ್ಥೆ, ಚಾಮರಾಜ ಪೇಟೆ, ಖಾಸಗಿ ಬಸ್ ನಿಲ್ದಾಣ ವೃತ್ತ ನಂತರ ರಾಜಬೀದಿ ಮಾರ್ಗವಾಗಿ ಶ್ರೀ ವರದಹಸ್ತ ಆಂಜನೇಯ ಸ್ವಾಮಿ ದೇವಸ್ಥಾನ, ಶ್ರೀ ರಂಗನಾಥ ದೇವಸ್ಥಾನದ ವರೆಗೆ ನಡೆಯಲಿದೆ. ಶೋಭಾಯಾತ್ರೆ ಯಲ್ಲಿ ಚಂಡೆ ವಾಧ್ಯ, ಭಜನೆ, ಡೊಳ್ಳು ಸೇರಿದಂತೆ ವಿವಿಧ ವಾಧ್ಯ ಮೇಳಗಳು, ಜನಪದ ಕಲಾತಂಡಗಳು ಪ್ರದರ್ಶನ ನೀಡಲಿವೆ. ನಂತರ ಶ್ರೀ ಗಣೇಶ ಮೂರ್ತಿಯನ್ನು ಪುಣ್ಯನದಿ ದಂಡಾವತಿಯಲ್ಲಿ ವಿಸರ್ಜಿಸಲಾಗು ವುದು.
ಶೋಭಾಯಾತ್ರೆಯಲ್ಲಿ ಸಾವಿರಾರು ಜನ ಭಾಗವಹಿಸುವ ನಿರೀಕ್ಷೆ ಇದೆ. ಹಿಂದೂ ಬಾಂಧವರು, ಸಾರ್ವಜನಿಕರು, ವಿವಿಧ ಸಂಘ- ಸಂಸ್ಥೆಯವರು, ಮಾತೆಯರು ಹೆಚ್ಚಿನ ಸಂಖ್ಯೆಯಲ್ಲಿ ಸ್ವಯಂ ಪ್ರೇರಣೆಯಿಂದ ಭಾಗವಹಿಸುವ ಮೂಲಕ ಶೋಭಾಯಾತ್ರೆಯನ್ನು ಯಶಸ್ವಿಗೊಳಿಸಿಕೊಡಬೇಕು ಎಂದು ಹಿಂದೂ ಮಹಾಸಭಾ ಗಣಪತಿ ಉತ್ಸವ ಸಮಿತಿ ಅಧ್ಯಕ್ಷ ನಿರಂಜನ್ ಕೋರಿzರೆ.