ಹಿಂದೂ ಜಾತಿಗಳನ್ನು ಒಡೆದು ಆಳುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ: ಶಾಸಕ ಚನ್ನಬಸಪ್ಪ
ಶಿವಮೊಗ್ಗ : ಸ್ವಾತಂತ್ರ್ಯ ಬಂದ ಮೇಲೆ ಮತ್ತೊಮ್ಮೆ ಹೊಡೆದಾಡಿಕೊಳ್ಳುವ ನೀತಿಯನ್ನು ಕಾಂಗ್ರೆಸ್ಸಿಗರು ಮಾಡುತ್ತಿದ್ದು, ಹಿಂದೂ ಜಾತಿ ಗಳನ್ನು ಒಡೆಯುವ ಕೆಲಸವನ್ನು ಕಾಂಗ್ರೆಸ್ಸಿಗರು ಮಾಡುತ್ತಿzರೆ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಆರೋಪಿಸಿzರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ಜಾತಿಗಣತಿ ನಡೆಯುತ್ತಿದ್ದು, ಜಾತಿಗಳ ಕಾಲಂನಲ್ಲಿ ಆದಿ ದ್ರಾವಿಡ ಕ್ರಿಶ್ಚಿಯನ್, ಅಕ್ಕಸಾಲಿಗ ಕ್ರಿಶ್ಚಿಯನ್, ಬಂಜಾರ ಕ್ರಿಶ್ಚಿಯನ್, ಮಾದಿಗ ಕ್ರಿಶ್ಚಿಯನ್ ಎಂದು ಹೊಸದಾಗಿ ೪೯ ಕಾಲಂಗಳನ್ನು ಹುಟ್ಟುಹಾಕಿ ಹಿಂದೂ ಜಾತಿಗಳ ಮುಂದೆ ಕ್ರಿಶ್ಚಿಯನ್ ಪದ ಸೇರಿಸಿ ಮತಾಂತರವನ್ನು ರಾಷ್ಟ್ರಾಂತರ ಮಾಡಲಿಕ್ಕೆ ಹೊರಟಿzರೆ. ಇದನ್ನು ಹಿಂದೂ ಸಮಾಜ ಸಹಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಾಗಮಂಗಲ, ಹುಬ್ಬಳ್ಳಿ ಯಾಯಿತು. ಸಾಗರದಲ್ಲಿಯೂ ಗಣಪತಿಗೆ ಕ್ಯಾಕರಿಸಿ ಉಗಿಯುವ ಮಕ್ಕಳ ಮಾನಸಿಕತೆ ನೋಡಿ zಯಿತು. ಮಸೀದಿ ಯೊಳಗಿನಿಂದ ಕಲ್ಲು ಹೊಡೆಯುವ ಗೂಂಡಾಗಳ ಮೇಲೆ ಕ್ರಮ ಕೈಗೊಳ್ಳುವ ಬದಲು, ಅದನ್ನು ಪ್ರತಿಭಟಿಸಿದ ಮಹಿಳೆಯರ ಮೇಲೂ ಲಾಠಿಚಾರ್ಜ್ ಮಾಡಿzಯಿತು, ಭದ್ರಾವತಿ ಕಾಂಗ್ರೆಸ್ ಶಾಸಕರು ನಿನ್ನೆ ಮುಂದಿನ ಜನ್ಮದಲ್ಲಿ ನಾನು ಮುಸ್ಲಿಂನಾಗಿ ಹುಟ್ಟಬೇಕೆಂಬ ಆಶಯ ವ್ಯಕ್ತಪಡಿಸಿzರೆ. ಈದ್ ಮಿಲಾದ್ ಮೆರವಣಿಗೆಯಲ್ಲಿ ಭದ್ರಾವತಿಯಲ್ಲಿ ಈ ದೇಶದ ಅನ್ನ ತಿಂದು, ಸಕಲ ಸೌಲಭ್ಯಗಳನ್ನು ಪಡೆದ ಯುವಕರ ಗುಂಪೊಂದು ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗುತ್ತಾರೆ. ಈ ಕಾಂಗ್ರೆಸ್ ಸರ್ಕಾರ ನಪುಂಸಕ ಸರ್ಕಾರವಾಗಿದೆ. ದೇಶದ್ರೋಹಿ ಗಳ ಮೇಲೆ ಕ್ರಮ ಕೈಗೊಳ್ಳುವ ತಾಕತ್ತು ಕಾಂಗ್ರೆಸ್ ಸರ್ಕಾರಕ್ಕಿಲ್ಲ. ರಾಜ್ಯದಲ್ಲಿ ಮುಸಲ್ಮಾನ್ ಗೂಂಡಾ ರಾಜ್ಯ ಸ್ಥಾಪನೆಗೆ ಕಾಂಗ್ರೆಸ್ ಹೊರಟಿದೆ. ನಾವು ಹಿಂದೂಸ್ತಾನ್ ಉಳಿವಿಗಾಗಿ ಮತ್ತು ಹಿಂದೂಸ್ತಾನ್ ಸಂರಕ್ಷಣೆಗಾಗಿಯೇ ರಾಜಕಾರಣ ಮಾಡುವವರು. ರಾಷ್ಟ್ರದ್ರೋಹಿ ಗಳಿಗೆ ರಕ್ಷಣೆ ಮಾಡುವ ಮನಸ್ಥಿತಿಯನ್ನು ಕಾಂಗ್ರೆಸ್ ಬಿಡಬೇಕು ಎಂದು ಆಗ್ರಹಿಸಿರು.

ಭದ್ರಾವತಿಯಲ್ಲಿ ದೇಶದ್ರೋಹ ಘೋಷಣೆ ಕೂಗಿದ ವರನ್ನು ಇನ್ನೂ ಬಂಧಿಸಿಲ್ಲ. ಹಿಂದೂ ಸಮಾಜ ಏನು ಮಾಡಬೇಕು? ಎಷ್ಟು ಅಪಮಾನ ಸಹಿಸಬೇಕು? ಬೂಕರ್ ಪ್ರಶಸ್ತಿ ಬರಲು ಕಾರಣವಾದ ಅನುವಾದ ಕರನ್ನು ಹೊರಗಿಡುತ್ತೀರಿ. ಅವಳು ಹಿಂದೂ ಹೆಣ್ಣು ಮಗಳು. ಅದಕ್ಕಾಗಿ ಎಂದ ಅವರು, ನ್ಯಾಯ ಕೇಳಿದರೆ ಲಾಠಿಚಾರ್ಜ್ ಮಾಡು ತ್ತೀರಿ, ಗಣಪತಿ ಮೆರವಣಿಗೆಗೆ ಕಲ್ಲು ಹೊಡೆದವರಿಗೆ ಬಿಟ್ಟು ಹಿಂದೂಗಳನ್ನು ಬಂಧಿಸುತ್ತೀರಿ. ಇದು ಕಾಂಗ್ರೆಸ್ ಕೊಡುಗೆ ಕಾಂಗ್ರೆಸ್‌ನಲ್ಲಿ ಒಂದು ಕ್ರಶ್ಚಿಯನ್, ಒಂದು ಮುಸಲ್ಮಾನ್ ಜೀನ್ಸ್ ಇದೆ. ಆದ್ದರಿಂದ ಅವರ ವರ್ಗದ ತೃಪ್ತಿಗಾಗಿ ಹಿಂದೂಗಳ ಮೇಲೆ ದೌರ್ಜನ್ಯ, ಲಾಠಿಚಾರ್ಜ್ ನಡೆಯುತ್ತಿರುತ್ತದೆ ಎಂದು ಆರೋಪಿಸಿದರು.
ಗೃಹಸಚಿವರೇ ನಿಮ್ಮ ಜಾಗ ಕಿತ್ತುಕೊಳ್ಳುವ ಅಥವಾ ಕುತ್ತುಬರುವ ಭೀತಿಯಿಂದ ನೀವು ಒಂದು ವರ್ಗದ ಪರವಾಗಿ ಕೆಲಸ ಮಾಡುತ್ತಿದ್ದೀರಿ. ಎಚ್ಚರಿಕೆಯಿಂದ ಕ್ರಮ ಕೈಗೊಳ್ಳದಿದ್ದರೆ ಹಿಂದೂ ಸಮಾಜ ತಕ್ಕಪಾಠ ಕಲಿಸುತ್ತದೆ ಎಂದರು.
ಡಿಜೆ ಹಾಕಿದವರಿಗೆ ನೋಟೀಸು ನೀಡುವ ನೀವು, ಜಿ ರಕ್ಷಣಾಧಿಕಾರಿಗಳಿಗೆ ತಲ್ವಾರ್ ತೋರಿಸಿದಾಗ ನೋಟೀಸ್ ನೀಡಲಿಲ್ಲವೇಕೆ ಎಂದು ಪ್ರಶ್ನಿಸಿದರು. ಮದರಸದಲ್ಲಿ ಮಕ್ಕಳಿಗೆ ಉತ್ತಮ, ನೈತಿಕ ದೇಶಭಕ್ತಿಯ ಶಿಕ್ಷಣಕೊಡಿ. ಗೋ ಹಂತಕರನ್ನು ಬಂಧಿಸುವು ದನ್ನು ಬಿಟ್ಟು ದೂರು ನೀಡಲು ಹೋದ ಗೋರಕ್ಷಕನನ್ನೇ ಬಂಧಿಸುತ್ತೀರಿ. ಇದು ಯಾವ ನ್ಯಾಯ ಎಂದರು. ನಾನು ಕೂಡ ನಾಳೆ ಮದ್ದೂರಿಗೆ ಹೊರಟಿದ್ದೇನೆ ಎಂದು ತಿಳಿಸಿದರು.
