ಮಾತೃ ವಾತ್ಸಲ್ಯದಲ್ಲಿ ಡಾ.ಗೀತಾರವಿ – ಡಾ.ಅಮೀತ್ ಹೆಗ್ಡೆ ಸೇವೆ ಲಭ್ಯ…
ಶಿವಮೊಗ್ಗ : ನಗರದ ಮಾತೃ ವಾತ್ಸಲ್ಯ ಆಸ್ಪತ್ರೆಯಲ್ಲಿ ಖ್ಯಾತ ಹಿರಿಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರುಗಳಾದ ಡಾ.ಗೀತಾರವಿ ಹಾಗೂ ಡಾ. ಅಮೀತ್ ಹೆಗ್ಡೆಯವರ ಸೇವೆ ದೊರೆಯಲಿದೆ ಎಂದು ಆಸ್ಪತ್ರೆಯ ನಿರ್ದೇಶಕ ಡಾ.ಪೃಥ್ವಿ ಬಿ.ಸಿ. ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಖ್ಯಾತ ಹಿರಿಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರುಗಳಾದ ಡಾ. ಗೀತಾ ರವಿ ಹಾಗೂ ಡಾ. ಅಮಿತಾ ಹೆಗ್ಡೆಯ ವರು ಸುಮಾರು ಮೂವತ್ತೈದು ವರ್ಷಗಳ ಸುದೀರ್ಘ ಅನುಭವ ವನ್ನು ಹೊಂದಿದ್ದು, ೨೦ ವರ್ಷಗಳಿಂದ ನೋವು ರಹಿತ ಹೆರಿಗೆಯಲ್ಲಿ ವಿಶೇಷ ಪರಿಣಿತರಾಗಿರುತ್ತಾರೆ. ಅಲ್ಲದೇ ಬಂಜೆತನ ನಿವಾರಣೆ ಹಾಗೂ ಲ್ಯಾಪ್ರೋಸ್ಕೋಪಿಕ್ ತಜ್ಞ ರಾಗಿ ಸೇವೆ ಸಲ್ಲಿಸಿzರೆ.
ಈ ವೈದ್ಯರುಗಳು ಇದೀಗ ಪೂರ್ಣಾವಧಿಯಾಗಿ ಮಾತೃ ವಾತ್ಸಲ್ಯ ಆಸ್ಪತ್ರೆಯಲ್ಲಿ ಲಭ್ಯ ವಿರುತ್ತಾರೆ. ಹಲವು ಖಾಸಗಿ ವಿಮಾ ಸೌಲಭ್ಯಗಳು ಕೂಡ ಜರಿ ಯಲ್ಲಿದ್ದು, ಅರ್ಹರು ಇದರ ಪ್ರಯೋಜನ ಪಡೆದುಕೊಳ್ಳಬ ಹುದು ಎಂದರು.

ವಿಶೇಷವಾಗಿ ರೋಗಿಗಳಿಗಾಗಿ ರಿಯಾಯಿತಿಯ “ಮಾತೃವಾತ್ಸಲ್ಯ ಆರೋಗ್ಯ ಕಾರ್ಡ್” ಜರಿಗೊಳಿಸಲಾಗಿದ್ದು, ಆಸಕ್ತರು ಆಸ್ಪತ್ರೆಯಲ್ಲಿ ಪಡೆದುಕೊಳ್ಳಬಹುದು ಎಂದು ಮನವಿ ಮಾಡಿದ ಅವರು ಈ ಕಾರ್ಡ್ ಮೂಲಕ ಒಳರೋಗಿ ಹಾಗೂ ಹೆರಿಗೆ ಮತ್ತು ಶಸ್ತ್ರಚಿಕಿತ್ಸೆ ವಿಭಾಗದಲ್ಲಿ ರಿಯಾಯಿತಿ ಪಡೆಯಬಹುದು ಎಂದರು.
ಡಾ. ಗೀತಾ ರವಿ ಹಾಗೂ ಡಾ. ಅಮಿತಾ ಹೆಗ್ಡೆರವರು ತಮ್ಮ ಅನುಭವಗಳನ್ನು ಹಂಚಿಕೊಂಡರು.
ಸುದ್ದಿಗೋಷ್ಟಿಯಲ್ಲಿ ಡಾ. ನಾಗಮಣಿ ಎಂ.ಸಿ. ಹಿರಿಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರು ಉಪಸ್ಥಿತರಿದ್ದರು.

