ಗಣಪತಿ ಮೆರವಣಿಗೆಯ ಮೇಲಿನ ದಾಳಿ ಖಂಡಿಸಿ ನಾಳೆ ಬೃಹತ್ ಪ್ರತಿಭಟನೆ …
ಶಿವಮೊಗ್ಗ : ಕಾಂಗ್ರೆಸ್ ಆಡಳಿತದಲ್ಲಿ ರಾಜ್ಯ ದಲ್ಲಿ ಬಹುಸಂಖ್ಯಾತ ಹಿಂದೂ ಗಳು ಬದುಕುವುದೇ ದುಸ್ತರ ವಾಗಿದೆ. ಮುಸ್ಲಿಂ ಓಲೈಕೆ ಮತ್ತು ತುಷ್ಠೀಕರಣದಿಂದಾಗಿ ಹಿಂದೂ ಗಳು ತಮ್ಮ ಹಬ್ಬಗಳ ಆಚರಣೆ ಗಳನ್ನು ಮಾಡುವುದೇ ಕಷ್ಟವಾ ಗಿದ್ದು, ಅದಕ್ಕೆ ಮದ್ದೂರಿನಲ್ಲಿ ನಡೆದ ಘಟನೆಯೇ ಸಾಕ್ಷಿ ಎಂದು ರಾಷ್ಟ್ರಭಕ್ತರ ಬಳಗ ಕೆ.ಈ. ಕಾಂತೇಶ್ ಹೇಳಿzರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಮದ್ದೂರಿ ನಲ್ಲಿ ಗಣೇಶ ಮೆರವಣಿಗೆಯ ಮೇಲೆ ಕೆಲ ಮುಸ್ಲಿಂ ಪುಂಡರು ದಾಳಿಯನ್ನು ಖಂಡಿಸಿ, ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪನವರ ನೇತೃತ್ವದಲ್ಲಿ ನಾಳೆ ಬೆಳಿಗ್ಗೆ ೧೦.೩೦ಕ್ಕೆ ಡಿಸಿ ಕಛೇರಿ ಆವರಣದಲ್ಲಿ ರಾಷ್ಟ್ರಭಕ್ತರ ಬಳಗದಿಂದ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದರು.

ಹಿಂದೂಗಳು ಗಣೇಶ ಉತ್ಸವ, ಹನುಮ ಜಯಂತಿ ಹಾಗೂ ಇತರ ಧಾರ್ಮಿಕ ಆಚರಣೆಗಳು ಹಾಗೂ ಉತ್ಸವಗಳನ್ನು ನಡೆಸುವುದು ನಿಮ್ಮ ಆಡಳಿತದಲ್ಲಿ ಅಪರಾಧವೇ? ಹಿಂದೂಗಳ ಮೆರವಣಿಗೆಗಳು ಮಸೀದಿಗಳ ಮುಂದೆ ಸಾಗಬಾರ ದೆಂದಾದರೆ, ಮಸೀದಿಗಳು ಪಾಕಿಸ್ತಾನದ ಆಡಳಿತಕ್ಕೆ ಒಳಪಟ್ಟ ಪ್ರದೇಶದಲ್ಲಿದೆಯೇ? ಮಸೀದಿಯ ಒಳಗಡೆ ಕಲ್ಲುಗಳನ್ನು ಶೇಖರಿಸಿಟ್ಟಿರುವಂತೆ ಇನ್ನೂ ಯಾವ ಯಾವ ಮಾರಕಾಸ್ತ್ರ ಗಳನ್ನು, ಬಾಂಬ್ಗಳನ್ನು ಇಟ್ಟಿರಬಹುದೆಂದು ತಪಾಸಣಾ ಮಾಡುವಿರಾ? ಶಾಂತಿಯುತ ವಾಗಿ ಸಾಗುತ್ತಿದ್ದ ಗಣೇಶ ಮೆರವಣಿಗೆಯ ಮೇಲೆ ಕಲ್ಲು ಎಸೆದು, ಗಲಭೆ ಸೃಷ್ಠಿಸಿ, ವಿದ್ಯುತ್ ಕಡಿತಗೊಳಿಸಲು ಕುಮ್ಮಕ್ಕು ನೀಡಿದವರು ಯಾರು? ಎಂದು ಸರ್ಕಾರಕ್ಕೆ ಪ್ರಶ್ನಿಸಿದರು.
ನ್ಯಾಯ ಕೇಳಿ, ಪ್ರತಿಭಟನೆ ನಡೆಸಿದ ಹಿಂದೂಗಳ ಮೇಲೆ ಪೊಲೀಸರು ಮನಸೋ ಇಚ್ಛೆ ಮಹಿಳೆಯರನ್ನೂ ಬಿಡದೆ ಲಾಠಿ ಪ್ರಹಾರ ಮಾಡಲು ನಿರ್ದೇಶನ ನೀಡಿದವರು ಯಾರು? ಪದೇ ಪದೇ ರಾಜ್ಯದಲ್ಲಿ ಈ ರೀತಿ ಗಲಭೆ- ದೊಂಬಿ ಸೃಷ್ಟಿಸುತ್ತಿರುವ ಮುಸ್ಲಿಂ ಗೂಂಡಾಗಳನ್ನು ಕೂಡಲೇ ಬಂಧಿಸಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಬಹುಸಂಖ್ಯಾತ ಹಿಂದೂಗಳ ಆಚರಣೆಗಳಿಗೆ ಮುಂದಿನ ದಿನಗಳಲ್ಲಿ ಮುಸ್ಲಿಂ ಮತಾಂದ ರಿಂದ ಯಾವುದೇ ತೊಂದರೆಗಳು ಆಗದಂತೆ ಕಠಿಣಕ್ರಮ ಕೈಗೊಳ್ಳ ಬೇಕೆಂದು ಅವರು ಆಗ್ರಹಿಸಿದರು.
ಪ್ರಮುಖರಾದ ಈ. ವಿಶ್ವಾಸ್, ಮಹಾಲಿಂಗಯ್ಯ ಶಾಸ್ತ್ರೀ, ಮೋಹನ್ರಾವ್ ಜದವ್, ವೆಂಕಟೇಶ್, ಮುರುಗೇಶ್, ಚಿದಾ ನಂದ, ಕುಬೇರಪ್ಪ, ರುದ್ರೇಶ್, ಶಿವಾಜಿ, ಅ.ಮ. ಪ್ರಕಾಶ್, ರಾಜು, ರುದ್ರಯ್ಯ, ನಾಗರಾಜ್, ಸಾಕ್ರಾ ನಾಯ್ಕ ಉಪಸ್ಥಿತರಿದ್ದರು.

