ಧರ್ಮ ರಕ್ಷಣೆ; ದುಷ್ಟರ ಸಂಹಾರಕ್ಕಾಗಿ ಜನ್ಮ ತಾಳಿದವನೇ ವೀರಭದ್ರ…
ಶಿವಮೊಗ್ಗ : ಧರ್ಮದ ರಕ್ಷಣೆಗಾಗಿ, ದುಷ್ಟರ ಸಂಹಾರಕ್ಕಾಗಿ, ಶಿಷ್ಟರ ರಕ್ಷಣೆಗಾಗಿ ಜನ್ಮ ತಾಳಿದವನೇ ವೀರಭದ್ರ ಎಂದು ಶ್ರೀಮದ್ ಕಾಶೀ eನ ಸಂಹಾಸ ನಾಧೀಶ್ವರ ಶ್ರೀ ಶ್ರೀ ಶ್ರೀ ೧೦೦೮ ಜಗದ್ಗುರು ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್‍ಯ ಭಗವತ್ಪಾದರು ಕಾಶಿಪೀಠ ಇವರು ತಿಳಿಸಿzರೆ.
ಅವರು ಇಂದು ನಗರದ ಚೌಕಿ ಮಠ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯಿಂದ ಹಮ್ಮಿ ಕೊಂಡಿದ್ದ ಶ್ರೀ ವೀರಭದ್ರೇಶ್ವರ ಜಯಂತ್ಯೋತ್ಸವ ಹಾಗೂ ಜನಜಗೃತಿ ಧರ್ಮ ಸಮಾ ರಂಭ ಹಾಗೂ ವೇದಿಕೆಯಿಂದ ಪ್ರಾರಂಭಿಸಿದ ೫ನೇ ವರ್ಷದ ಶ್ರೀ ವೀರಭದ್ರೇಶ್ವರ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಸಂಗೀತಯುಕ್ತ ಇಷ್ಟಲಿಂಗ ಪೂಜೆಯನ್ನು ನೆರವೇರಿಸಿ ಸಮಾರಂಭದ ದಿವ್ಯ ಸಾನಿಧ್ಯವಹಿಸಿ, ಆಶೀರ್ವಚನ ನೀಡಿದರು.

ವಿಶಾಲವಾದ ಚರಿತ್ರೆ ವೀರ ಭದ್ರನಿಗಿದೆ. ದಕ್ಷಬ್ರಹ್ಮ ಕೈಗೊಂಡ ಯಜ್ಞದಲ್ಲಿ ತನ್ನ ಅಳಿಯ ಶಿವನಿಗೆ ಆಹ್ವಾನ ನೀಡದೆ ಅಪಮಾನ ಮಾಡಿದಾಗ, ಶಿವನ ಕ್ರೋಧಕ್ಕೆ ತುತ್ತಾಗಿ ಆತನ ಜಠೆಯಿಂದ ಉದ್ಭವಿ ಸಿದವನೇ ವೀರಭದ್ರ. ಆತ ಜನ್ಮತಾ ಳಿದ ತಕ್ಷಣ, ದುರಂಹಕಾರಿ, ದಕ್ಷಬ್ರಹ್ಮನ ಸಂಹಾರ ಮಾಡುತ್ತಾನೆ. ಆ ವೀರಭದ್ರನೇ ಧರ್ಮದ ರಕ್ಷಣೆಗಾಗಿ ಮಾಡುತ್ತಾ ನಿರಂತರ ವಾಗಿ ಕಲಿಯುಗದಲ್ಲಿ ಪ್ರತ್ಯಕ್ಷ ದೇವ ರಾಗಿ ಪ್ರಕಟವಾಗಿzನೆ ಎಂದರು.
ಕಲಿಯುಗದಲ್ಲಿ ಕಾಣುವ ಪ್ರತ್ಯಕ್ಷ ದೇವರಾದ ವೆಂಕಟರ ಮಣ ಕೂಡ ವೀರಭದ್ರನ ಅವತಾರ ಎಂದು ಆಂಧ್ರ, ಮಹಾರಾಷ್ಟ್ರದ ಕಡೆ ಜನ ನಂಬಿzರೆ ಎಂದರು.
ವೀರಶೈವ ಲಿಂಗಾಯತರು ಎರಡೂ ಒಂದೇ. ಈ ಬಗ್ಗೆ ಸಮಾಜದಲ್ಲಿ ಗೊಂದಲಬೇಡ ಎಂದರು.
ಸಮಾಜದ ಅಧ್ಯಕ್ಷ ಎಸ್.ಎಸ್. ಜ್ಯೋತಿ ಪ್ರಕಾಶ್ ಮಾತನಾಡಿ, ೧೦೦ ವರ್ಷಗಳ ಹಿಂದೆ ಹಾನಗಲ್ ಸ್ವಾಮೀಜಿ ಯವರು ಅಖಿಲ ಭಾರತ ವೀರಶೈವ ಮಹಾ ಸಭಾವನ್ನು ಸ್ಥಾಪಿಸಿದರು. ನಮ್ಮೆಲ್ಲರ ಒಳಿತಿಗಾಗಿ ಈ ಸಮಾಜಕ್ಕೆ ಮಾರ್ಗ ದರ್ಶನ ನೀಡಲು ಅವರು ಹುಟ್ಟು ಹಾಕಿದ ಈ ಸಂಸ್ಥೆಯಲ್ಲಿ ಯಾವುದೇ ಗೊಂದಲಬೇಡ. ಇತ್ತೀಚೆಗೆ ಬಸವ ತತ್ವ, ಲಿಂಗಾಯತ ಎಂದು ಬೇರೆ ಬೇರೆ ಗೊಂದಲ ಮತ್ತು ಒಡಕು ಕೇಳಿ ಬರುತ್ತಿದೆ. ನಮ್ಮ ಮಕ್ಕಳು, ಮೊಮ್ಮಕ್ಕಳು ಸಮಾಜದಲ್ಲಿ ಸ್ಥಾನಮಾನ ಗಳಿಸಬೇಕಾದರೆ ನಾವೆಲ್ಲರೂ ಒಂದಾಗಿರಬೇಕು. ಜನಗಣತಿಗೆ ಬಂದಾಗ ನಾವೆಲ್ಲರೂ ಕೂಡ ವೀರಶೈವ ಲಿಂಗಾಯತ ಎಂದೇ ಬರೆಸಬೇಕು. ಈ ಬಗ್ಗೆ ಗೊಂದಲಕ್ಕೊಳಗಾಗ ಬೇಡಿ ಎಂದು ವಿನಂತಿಸಿದರು.
ಮಾಜಿ ಸಂಸದ ಆಯನೂರು ಮಂಜುನಾಥ್ ಮಾತನಾಡಿ, ವಿಭಿನ್ನವಾದ ೪ ಗಂಟೆಗಳ ಸಂಗೀತಯುಕ್ತ ಇಷ್ಠಲಿಂಗ ಪೂಜೆ ನೆರವೇರಿಸಿ, ಗುರುಗಳು ಶಿವಮೊಗ್ಗದ ಭಕ್ತರನ್ನು ಕೃತಾರ್ಥರ ನ್ನಾಗಿ ಮಾಡಿzರೆ ಎಂದರು.

ತಾವರೆಕೆರೆಯ ಅಭಿನವ ಸಿದ್ಧ ಲಿಂಗ ಶಿವಾಚಾರ್‍ಯ ಸ್ವಾಮಿಗಳು ಮಾತನಾಡಿ, ವೀರಶೈವ ಲಿಂಗಾಯತ ದ್ವಂದ್ವಬೇಡ, ಇವ ನಾರವ ಇವ ನಾರವ ಎಂಬ ಅರ್ಥ ಬರಬೇಕಾದರೆ ನಾವೆಲ್ಲರೂ ಒಂದೇ ಎಂಬ ಭಾವನೆ ಬರಬೇಕು. ಹಿರಿಯರ ಮಾರ್ಗ ದರ್ಶನದಂತೆ ನಡೆಯಬೇಕು. ಯಾರೋ ಕೆಲವರು ಅವರ ಹಿತ ಕ್ಕಾಗಿ ನಾವೇ ದೊಡ್ಡವರು ಎನ್ನುತ್ತಾರೆ. ಆದರೆ ವ್ಯಕ್ತಿ ದೊಡ್ಡವನಲ್ಲ, ಪರಂಪ ರೆಯೇ ದೊಡ್ಡದು. ವೀರಶೈವ ಧರ್ಮ ಪರಂಪರೆ ಅತ್ಯಂತ ಪ್ರಾಚೀ ನವಾಗಿದ್ದು, ಮುಂದಿನ ಪೀಳಿಗೆಗೆ ಆದರ್ಶವಾಗುವಂತೆ ನಾವೆ ಕೊಡುಗೆ ನೀಡಬೇಕು ಎಂದರು.
ಮಳಲಿ ಮಠದ ಗುರು ನಾಗಭೂಷಣ ಶಿವಾಚಾರ್‍ಯ ಸ್ವಾಮಿಗಳು ಮಾತನಾಡಿ, ವೀರಶೈವ ಪದ ಸೈದ್ಧಾಂತಿಕವಾಗಿ ಬಂದಿದ್ದು, ಲಿಂಗಾಯತ ಪದ ರೂಢಿಯಲ್ಲಿರುವುದು ಎರಡೂ ಒಂದೇ ಏಕಾಂತದಲ್ಲಿದ್ದ ಇಷ್ಠಲಿಂಗ ಪೂಜೆಯನ್ನು ಲೋಕಾಂತಕ್ಕೆ ತಂದವರು ರಂಭಾಪುರೀ ಮಠದ ವೀರಗಂಗಾಧರ ಭಗವತ್ಪಾದರು. ಇಂದು ಶ್ರೀ ಕಾಶಿ ಪೀಠದ ಶ್ರೀಗಳು ೪ ಗಂಟೆಗಳ ಸಂಗೀತಯುಕ್ತ ಇಷ್ಠಲಿಂಗ ಮಹಾಪೂಜೆಯನ್ನು ನೋಡುವ ಭಾಗ್ಯವನ್ನು ನಮಗೆ ಕಲ್ಪಿಸಿzರೆ ಎಂದರು.
ಕಾರ್ಯಕ್ರಮದಲ್ಲಿ ಬಿಳಿಕಿ ಮಠದ ಶ್ರೀ ರಾಚೋಟೇಶ್ವರ ಶಿವಾಚಾರ್‍ಯಗಳು, ತೊಗರ್ಸಿ ಮಠದ ಶ್ರೀ ಚನ್ನವೀರ ದೇಶೀ ಕೇಂದ್ರ ಶಿವಾಚಾರ್‍ಯ ಸ್ವಾಮೀಜಿಗಳು, ಕೋಣಂದೂರು ಬೃಹನ್ಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್‍ಯ ಸ್ವಾಮೀಜಿಗಳು ಸಾನಿಧ್ಯವಹಿಸಿದ್ದರು.
ವೇದಿಕೆಯ ಅಧ್ಯಕ್ಷ ಬಿ. ಶಿವರಾಜ್ ಅಧ್ಯಕ್ಷತೆ ವಹಿಸಿದ್ದರು.
ಈ ಸಮಾರಂಭದಲ್ಲಿ ೫೦ ವರ್ಷ ದಾಂಪತ್ಯ ಜೀವನ ನಡೆಸಿದ ದಂಪತಿಗಳು ಹಾಗೂ ನೂತನ ವಧು-ವರರಿಗೆ ಜಗದ್ಗುರುಗಳಿಂದ ಗುರುರಕ್ಷೆ ನೀಡಲಾಯಿತು. ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ ಪ್ರಾಸ್ತಾವಿಕ ವಾಗಿ ಮಾತನಾಡಿದರು.
