ಕರ್ನಾಟಕ ಅತ್ಯುತ್ತಮ ಪ್ರಗತಿ ಕಾಣುತ್ತಿದ್ದರೂ ಆದಾಯ ಹಂಚಿಕೆ ಕೊರತೆಯಿಂದ ಕಷ್ಟಪಡುವಂತಾಗಿದೆ: ಆತಂಕ…
ಶಿವಮೊಗ್ಗ: ದಕ್ಷಿಣಭಾರತದಲ್ಲಿ ಅತ್ಯುತ್ತಮ ಪ್ರಗತಿ ಕಾಣುತ್ತಿದ್ದರು, ಪ್ರಜ ಪ್ರಭುತ್ವ ರಾಷ್ಟ್ರವಾಗಿರುವ ಕಾರಣ ದಿಂದ, ಆದಾಯ ಹಂಚಿಕೆಯ ಕೊರತೆಯಿಂದ ದಕ್ಷಿಣ ರಾಜ್ಯ ಸರ್ಕಾರಗಳು, ತಮ್ಮ ಪ್ರಜೆಗಳಿಗೆ ನ್ಯಾಯ ಒದಗಿಸಲು ಕಷ್ಟಪಡುವ ಪ್ರಮೇ ಯ ಉಂಟಾಗಿದೆ ಎಂದು ಪ್ರೊ: ಕುಮಾರ ಸ್ವಾಮಿ ನುಡಿದರು.
ರಾಷ್ಟ್ರೀಯ ಸಮಸ್ಯೆಗಳನ್ನು ಕೇಂದ್ರ ಸರ್ಕಾರ ನಿರ್ವಹಿಸಿದರೆ, ರಾಜ್ಯ ಸರ್ಕಾರಗಳು ಸ್ಥಳಿಯ ನಾಗರೀಕರ ಸಮಸ್ಯೆ, ಪ್ರಗತಿ ಗಳನ್ನು ಪೂರೈಸುವ ಹೊಣೆಗಾರಿಕೆ ಇದೆ. ತೆರಿಗೆಗಳನ್ನು ಕೇಂದ್ರ ಸರ್ಕಾರಕ್ಕೆ ಆದಾಯ ರೂಪದಲ್ಲಿ ಪಡೆದರೆ, ಸಾಮಾಜಿಕ ನ್ಯಾಯ ಒದಗಿದುವು ದಕ್ಕಾಗಿ ಕೇಂದ್ರ ಸರ್ಕಾರ ೧೯೫೧ ರಲ್ಲಿ ಪ್ರಥಮ ಹಣಕಾಸು ಆಯೋಗ ರಚಿಸಿ ಐದು ವರ್ಷಕ್ಕೊಮ್ಮೆ ಸಮಿತಿ ಹೊಸದಾಗಿ ನಿಯಮ ರೂಪಿಸಿ, ರಾಷ್ಟ್ರೀಯ ನ್ಯಾಯ ಒದಗಿಸುತ್ತೇವೆ ಎನ್ನುತ್ತಾರೆ. ಈಗ ಹದಿನೈದನೆ ಪೈನಾನ್ಸ್ ಕಮಿಷನ್ ಕಾರ್ಯ ನಿರ್ವಹಿಸುತ್ತಿದೆ ಎಂದರು.

ಮೊದಲ ಆಯೋಗ ಆದಾಯ ತೆರಿಗೆಯನ್ನು ಮಾತ್ರ ಹಂಚಿಕೆ ಮಾಡುತ್ತಿದ್ದರು. ಆದರೆ, ಹತ್ತನೆ ಸಮಿತಿ ಕ್ರಾಂತಿಕಾರಕ ನಿರ್ಣಯ ಕೈಗೊಂಡು ಪೂರ್ಣ ತೆರಿಗೆಯಲ್ಲಿ ಹಂಚಿಕೆ ಮಾಡ ಬೇಕೆಂದಿತು. ೧೩ನೇ ಸಮಿತಿ ಶೇ.೩೨ ನೀಡಬೇಕೆಂದರೆ, ೧೪ನೇ ಸಮಿತಿ ಶೇ.೪೨ ಹಂಚಿಕೆ ಮಾಡಬೇಕೆಂದಿತು. ೧೫ನೇ ಸಮಿತಿ ಶೇ.೪೧ ರಾಜ್ಯ ಸರ್ಕಾರಕ್ಕೆ ಶೇ.೧ ಕೇಂದ್ರಾಡಳಿತ ಪ್ರದೇಶಗಳಿಗೆ ನೀಡಲು ಸೂಚಿಸಿದೆ ಎಂದರು.
ಜನಸಂಖ್ಯೆ ಆದಾರದಲ್ಲಿ ಹೆಚ್ಚಿನಪಾಲು ಶೇ.೧೫ ನೀಡುವುದ ರಿಂದ ಉತ್ತರ ರಾಜ್ಯಗಳು ಹೆಚ್ಚು ಪಾಲು ಪಡೆಯುತ್ತವೆ. ಅರಣ್ಯ ಶೇ.೩೩, ಗುಡ್ಡಗಾಡು ಪ್ರದೇಶಕ್ಕೆ ಶೇ.೬೬ ಹೊಂದಿರುವ ರಾಜ್ಯಕ್ಕೆ ಶೇ. ೭.೫ ಪಾಲು ಇದೆ. ತಲಾದಾಯ ಹೆಚ್ಚು ಇದ್ದರೆ ಶೇ.೪೫, ಹೆಚ್ಚು ತೆರಿಗೆ ಸಂಗ್ರ ಹಿಸಿದರೆ ಶೇ.೨.೫ ಮಾತ್ರ ನೀಡಲಾಗುತ್ತದೆ. ಜನಸಂಖ್ಯೆ ನಿಯಂತ್ರಣಕ್ಕೆ ಶೇ.೧೨.೫ ನೀಡುತ್ತಿರುವುದರಿಂದ ಈಗಾಗಲೆ ಜನಸಂಖ್ಯೆ ನಿಯಂತ್ರಣ ಹೊಂದಿರುವ ರಾಜ್ಯಗಳಿಗೆ ಅನ್ಯಾ ಯ ವಾಗುತ್ತಿದೆ. ನಾವು ನೂರು ರೂ. ಸಂಗ್ರಹಿಸಿದ ತೆರಿಗೆಯಲ್ಲಿ ನಮಗೆ ಹಿಂದಿರುಗುವುದು ೩.೬೪ ಪೈಸೆ ಮಾತ್ರ. ಕೈಗಾರಿಕೆ, ವಾಣಿಜ್ಯ, ಜನ ಸಂಖ್ಯೆ, ವ್ಯವಸಾಯ, ಶೈಕ್ಷಣಿಕ ಪ್ರಗತಿ ಗಳಿಸಿದರು ಆದಾಯ ಹಂಚಿಕೆ ಯಲ್ಲಿ ೨೫ ವರ್ಷದಿಂದ ಅನ್ಯಾಯವಾಗುತ್ತಲೇ ಇದೆ. ಮುಂದೆ ರಾಜಕೀಯವಾಗಿಯು ತ್ತೊಂದರೆ ಉಂಟಾಗುತ್ತದೆ. ನಮ್ಮ ದಕ್ಷಿಣ ರಾಜ್ಯ ಗಳು ಒಟ್ಟಿಗೆ ಸೇರಿ ಪ್ರಗತಿಯಿಂದ ಉಂಟಾಗಿರುವ ಅನ್ಯಾಯ ಪ್ರದರ್ಶಿಸಲೆಬೇಕು ಎಂದ ಅವರು, ಕೇಂದ್ರ ಸರ್ಕಾರ ತೆರಿಗೆ ಹೆಚ್ಚಿಸದೆ, ಆರೋಗ್ಯ, ಶಿಕ್ಷಣ, ಹಿಂದುಳಿದವರ್ಗಕ್ಕೆ, ರಸ್ತೆ, ಆದಾಯ ಹೀಗೆ ಮೇಲ್ ತೆರಿಗೆ ಎಂದು ಹೆಚ್ಚಿಸಿ ನೇರವಾಗಿ ತನ್ನ ಆದಾಯ ಹೆಚ್ಚಿಸಿ ಕೊಳ್ಳುತ್ತಿದೆ. ಈ ತೆರಿಗೆ ೨೦೧೧-೧೨ ರಲ್ಲಿ ಶೇ.೧೦, ೯೨ ಸಾವಿರ ಕೋಟಿ ಮಾತ್ರ ಇತ್ತು. ೨೪-೨೫ರಲ್ಲಿ ಶೇ.೨೮ ಮೂರು ಸಾವಿರದ ೬೫ ಲಕ್ಷ ಕೋಟಿಗೆ ಏರಿಕೆ ಯಾಗಿದೆ. ಒಟ್ಟು ಆದಾಯದಲ್ಲಿ ಶೇ.೫೦ ಭಾಗ ಹಂಚಿಕೆ ಯಾಗಲೇಬೇಕು ಹಾಗೂ ಸಮಿತಿಯಲ್ಲಿ ರಾಜ್ಯ ಸರ್ಕಾರಗಳ ಪ್ರತಿನಿಧಿಗಳು ಇರಲೇ ಬೇಕು, ಜನಸಂಖ್ಯೆ ನಿಯಂತ್ರಣಕ್ಕೆ ಶೇ.೨೦ ಆದಾಯ ಹಂಚಿಕೆಯಾಗಬೇಕು ಎಂಬ ಬೇಡಿಕೆ ಹೆಚ್ಚಾಗಿದೆ. ಪ್ರತಿ ರಾಜ್ಯಗಳು ಪ್ರಗತಿ ಹೊಂದಿದರೆ ಮಾತ್ರ ರಾಷ್ಟ್ರ ಪ್ರಗತಿ ಹೊಂದಲು ಸಾಧ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಬಿ.ಎಸ್. ಅಶ್ವತ್ ಅವರು, ಕಳೆದ ಸಾಲಿನಲ್ಲಿ ನಮ್ಮ ಕ್ಲಬ್ ಏಳು ಜಿಮಟ್ಟದ ಸೇವಾ ಪ್ರಶಸ್ತಿಗಳಿಸಲು ಅಧ್ಯಕ್ಷೆ ರೂಪಪುಣ್ಯಕೋಟಿ, ಕಾರ್ಯ ದರ್ಶಿ ಡಾ.ಪ್ರಕೃತಿಮಂಚಾಲೆ ಹಾಗೂ ಆಡಳಿತ ಮಂಡಳಿಗೆ ಅಭಿ ನಂದಿಸಿ, ಈ ಸಾಲಿನಲ್ಲು ಅತ್ಯತ್ತಮ ಕಾರ್ಯಕ್ರಮ ಆಯೋಜಿಸಲಾಗುವು ದೆಂದರು.
ಭಾರದ್ವಾಜ್ ಸ್ವಾಗತಿಸಿ, ಸತ್ಯನಾರಾಯಣ್ ನಿರೂಪಿಸಿದರು. ರೇವಣ ಸಿದ್ದಪ್ಪ ವಂದಿಸಿದರು. ಲಕ್ಷ್ಮೀನಾರಾಯಣ್, ವಿನೋದ್, ಜವಳಿ, ಉಮೇಶ್, ವಾಗೇಶ್, ಉಮಾದೇವಿ ಮುಂತಾದ ಸದಸ್ಯರು ಭಾಗವಹಿಸಿದ್ದರು.

