ಹಿಂದೂ ಗಣಪತಿ ರಾಜಬೀದಿ ಉತ್ಸವ: ಸಿಂಗಾರಗೊಂಡ ಶಿವಮೊಗ್ಗ…
ಶಿವಮೊಗ್ಗ: ನಗರದ ಹಿಂದೂ ಮಹಾಸಭಾ ಗಣಪತಿ ರಾಜಬೀದಿ ಉತ್ಸವ ಸೆ.೬ ರಂದು ನಡೆಯಲಿದೆ. ಇದಕ್ಕಾಗಿ ಸಿದ್ಧತೆ ಆರಂಭವಾಗಿದೆ. ನಗರವನ್ನ ಕೇಸರಿಯ ಬಂಟಿಂಗ್ಸ್ ನಿಂದ ಅಲಂಕಾರಿಸಲಾಗಿದೆ.
ಅಲ್ಲಲ್ಲಿ ಮಹಾದ್ವಾರಗಳನ್ನು ನಿರ್ಮಿಸಲಾಗಿದೆ. ಗಾಂಧಿ ಬಜರ್ ಮುಂಭಾಗ ಪ್ರತಿ ವರ್ಷದಂತೆ ಈ ಬಾರಿಯು ವಿಭಿನ್ನ ಮಹಾದ್ವಾರದ ಪ್ರತಿಮೆ ಸ್ಥಾಪಿಸಲಾಗಿದೆ.
ಪ್ರತಿ ವರ್ಷದಂತೆ ಈ ಬಾರಿಯು ವಿಭಿನ್ನವಾದ ಮಹಾ ದ್ವಾರ ನಿರ್ಮಿಸಲಾಗಿದೆ. ದೇವತೆ ಗಳು ಮತ್ತು ರಾಕ್ಷಸರ ಮಧ್ಯೆ ಅಮೃತಕ್ಕಾಗಿ ಹಾಲಿನ ಸಮುದ್ರ ವನ್ನು ಕಡೆಯುವ ಕತೆಯನ್ನು ಈ ಬಾರಿಯ ಮಹಾದ್ವಾರ ಸ್ಥಾಪಿಸಲಾ ಗಿದೆ.
ಒಂದೆಡೆ ದೇವತೆಗಳು, ಮತ್ತೊಂದೆಡೆ ರಾಕ್ಷಕರು, ಸಮುದ್ರವನ್ನು ಕಡೆಯಲು ಬಳಸಿದ್ದ ಹಾವು, ಈಶ್ವರನು ವಿಷ ಕುಡಿದು ನೀಲಕಂಠನಾದದ್ದನ್ನು ಮಹಾದ್ವಾರ ದಲ್ಲಿ ರೂಪಿಸಲಾಗಿದೆ.
ಜೀವನ್ ಕಲಾಕೇಂದ್ರದ ಕಲಾವಿದರು ಮಹಾದ್ವಾರ ನಿರ್ಮಿಸಿ zರೆ. ಕಳೆದ ರಾತ್ರಿ ಮಹಾದ್ವಾರ ಸ್ಥಾಪಿಸಲಾಗಿದೆ. ಬೆಳಗ್ಗೆಯಿಂದ ದೊಡ್ಡ ಸಂಖ್ಯೆಯ ಜನರು ಗಾಂಧಿ ಬಜರ್ ಮುಂಭಾಗ ಬಂದು ಫೋಟೊ, ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿzರೆ.


