ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಿದ ಕೀರ್ತಿ ನಾಲ್ವಡಿ ಕೃಷ್ಣರಾಜ ಒಡೆಯರ್ರಿಗೆ ಸಲ್ಲುತ್ತದೆ…
ಶಿವಮೊಗ್ಗ : ಅಂದಿನ ಮೈಸೂರು ಸಂಸ್ಥಾನವನ್ನು ಜನಪರ ಸಂಸ್ಥಾನವಾಗಿ ಕಟ್ಟಿ ಪ್ರಜಪ್ರಭುತ್ವದ ವ್ಯವಸ್ಥೆಯನ್ನು ಅಂದೇ ಗಟ್ಟಿಗೊಳಿಸಿದ ಕೀರ್ತಿ ನಾಲ್ವಡಿ ಕೃಷ್ಣರಾಜ್ ಒಡೆಯರ್ ಅವರಿಗೆ ಸಲ್ಲುತ್ತದೆ ಎಂದು ಮಾಜಿ ಶಾಸಕ ಹಾಗೂ ಚಿಂತಕ ವೈ.ಎಸ್.ವಿ. ದತ್ತ ಹೇಳಿದರು.
ಅವರು ಇಂದು ಸಹ್ಯಾದ್ರಿ ಕಲಾ ಕಾಲೇಜು ಇತಿಹಾಸ ವಿಭಾಗ, ಕನ್ನಡ ಸಾಹಿತ್ಯ ಪರಿಷತ್ತು ಜಿ ಸಮಿತಿ ಆಶ್ರಯದಲ್ಲಿ ಸಹ್ಯಾದ್ರಿ ಕಲಾ ಕಾಲೇಜಿನ ಸಭಾಂಗಣದಲ್ಲಿ ಕಾಲೇಜಿನ ಸಂಸ್ಥಾಪನಾ ದಿನಾಚರಣೆಯ ನಿಮಿತ್ತ ಆಯೋ ಜಿಸಿದ್ದ ನಾಲ್ವಡಿ ಕೃಷ್ಣರಾಜ್ ಒಡೆಯರ್ ಸ್ಮರಣೆ ಕಾರ್ಯಕ್ರಮ ದಲ್ಲಿ ಒಡೆಯರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಾಲ್ವಡಿ ಕೃಷ್ಣರಾಜ್ ಒಡೆಯರು ರಾಜರಾಗಿದ್ದರು. ಅರಮನೆಯಲ್ಲಿದ್ದರೂ ಕೂಡ ಜನಸಾಮಾನ್ಯರಿಗಾಗಿಯೇ ಜೀವಿಸಿದವರು. ಪ್ರಜಪ್ರಭುತ್ವದ ಎ ನಿಲುವುಗಳನ್ನು ಮೈಗೂಡಿಸಿ ಕೊಂಡಿದ್ದರು. ಅಪ್ಪಟ ಪ್ರಜಪ್ರಭುತ್ವವಾದಿಯಾಗಿ ಅರಮನೆಯನ್ನೇ ಜನರ ಮನೆಯನ್ನಾಗಿ ಮಾಡಿದವರು. ಜನಪ್ರತಿನಿಧಿ ಸಭೆಗಳನ್ನು ಅಂದೇ ಮಾಡಿದ್ದರು. ಕಂದಾಯ ವ್ಯವಸ್ಥೆಯನ್ನು ಜರಿಗೆ ತಂದವರು. ರಾಜಂಗ-ಕಾರ್ಯಾಂಗದ ಕಲ್ಪನೆ ಮೂಡಿಸಿದವರು ಎಂದರು.

ಅವರ ಕಾಲದಲ್ಲಿಯೇ ಕನ್ನಂಬಾಡಿ ಅಣೆಕಟ್ಟು ಕಟ್ಟಲಾ ಗಿತ್ತು. ಶ್ರೇಷ್ಠ ವಿeನಿ ವಿಶ್ವೇಶ್ವರಯ್ಯನವರ ಸಲಹೆ ಮೇರೆಗೆ ಜನರ ಅನುಕೂಲಕ್ಕಾಗಿ ಈ ನಿರ್ಧಾರ ತೆಗೆದುಕೊಂಡಿದ್ದರು. ಆದರೆ ಅಂದಿನ ಕಾಲದಲ್ಲಿ ೨ ಕೋಟಿ ರೂ. ಹಣ ಬೇಕಾಗಿತ್ತು. ಸಂಸ್ಥಾನದಲ್ಲಿ ಹಣಕಾಸಿನ ಕೊರತೆಯಿತ್ತು. ಆದರೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅರಮನೆ ಯಲ್ಲಿದ್ದ ಎ ಬಂಗಾರವನ್ನು ಮೂಟೆಯಲ್ಲಿ ತುಂಬಿ ಅದನ್ನು ಅಡವಿಟ್ಟು ಅಣೆಕಟ್ಟು ಕಟ್ಟಿದರು. ಇದು ಇಂದು ಜನಪರ ಅಣೆಕಟ್ಟು ಆಗಿರುವುದನ್ನು ಕಾಣಬಹುದಾಗಿದೆ ಎಂದರು.
ಹಾಗೆಯೇ ಭದ್ರಾವತಿಯ ಕಬ್ಬಿಣ ಕಾರ್ಖಾನೆ ಸ್ಥಾಪನೆಗೆ ಕಾರಣರಾದವರು ಮಹಾ ಯುದ್ಧದ ಕಾಲದಲ್ಲಿ ಕಲ್ಲಿದ್ದಲು ಸರಬರಾಜು ಇಲ್ಲದೆ ನಿಂತು ಹೋಗುವ ಸಂದರ್ಭದಲ್ಲೂ ಕೂಡ ಸೌದೆ ಸುಟ್ಟು ಇದ್ದಿಲು ಮಾಡಿ, ಕಾರ್ಖಾನೆ ನಡೆಸಿದವರು. ಅವರ ಕಾಲದಲ್ಲಿ ಅನೇಕ ಜನಪರ ಕಾರ್ಯಕ್ರಮಗಳು ಆಗಿವೆ. ಸಾಹಿತ್ಯ ಪರಿಷತ್ತು, ವಿಶ್ವವಿದ್ಯಾಲಯ ಹಾಗೆಯೇ ಈ ಸಹ್ಯಾದ್ರಿ ಕಾಲೇಜಿನ ಸ್ಥಾಪನೆಗೂ ಕಾರಣರಾಗಿzರೆ ಎಂದರು.
ದಸರಾ ಉದ್ಘಾಟನೆಗೆ ಬಾನುಮುಸ್ತಾಕ್ ಕರೆದಿರುವುದನ್ನು ಇಂದಿನ ೨೧ನೇ ಶತಮಾನದಲ್ಲೂ ಒಪ್ಪುವ ಹೃದಯ ವೈಶಾಲ್ಯತೆ ನಮಗಿಲ್ಲವಾಗಿದೆ. ಸಂವಿಧಾನ ವನ್ನು ಒಪ್ಪಿಕೊಂಡಿರುವ ನಾವೇ ಇದನ್ನು ವಿರೋಧಿಸುತ್ತಿದ್ದೇವೆ. ಆದರೆ ನಾಲ್ವಡಿ ಕೃಷ್ಣರಾಜ ಒಡೆಯರ್ ರಾಜರಾಗಿದ್ದರೂ ಕೂಡ ದಿವಾನರಾಗಿದ್ದ ಸರ್ ಮಿಜ ಇಸ್ಮಾಯಿಲ್ ಅವರನ್ನು ಅಂಬಾರಿಯ ಮೇಲೆ ತಮ್ಮ ಪಕ್ಕದಲ್ಲಿಯೇ ಕೂರಿಸಿಕೊಂಡಿ ದ್ದರು. ಇಂದಿನ ಸಂಕುಚಿತ ಮನಸ್ಸು ಗಳು ಇದನ್ನು ಅರ್ಥಮಾಡಿಕೊಳ್ಳ ಬೇಕಾಗಿದೆ ಎಂದರು.
ಅವರದು ವಿಶಾಲ ಹೃದಯ. ಜತ್ಯಾತೀತ, ಧರ್ಮಾತೀತ ನಿಲುವುಗಳಿದ್ದವು. ಅಂದು ಬ್ರಾಹ್ಮಣ, ಬ್ರಾಹ್ಮಣೇತರ ಚಳುವಳಿಗಳು ನಡೆದವು. ವಿಶ್ವೇಶ್ವರಯ್ಯನವರ ಸಲಹೆಯನ್ನು ಸ್ವೀಕರಿಸದೆ ತಮ್ಮ ಜತ್ಯಾತೀತ ನಿಲುವಿಗೆ ಬದ್ಧರಾಗಿದ್ದವರು. ಮೀಸಲಾತಿಯನ್ನು ಅಂದೇ ಘೋಷಿಸಿದವರು. ಹಾಗಾಗಿಯೇ ಅವರು ಕೇವಲ ರಾಜರಲ್ಲ, ರಾಜರ್ಷಿಯಾದವರು, ಕುವೆಂಪು ಕೂಡ ಅವರನ್ನು ಯುದಿಷ್ಠರ ನೊಂದಿಗೆ ಹೋಲಿಸಿದ್ದರು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಕುವೆಂಪು ವಿವಿ ಕುಲಪತಿ ಪ್ರೊ. ಶರತ್ ಅನಂತ್ಮೂರ್ತಿ ವಹಿಸಿದ್ದರು. ಪ್ರಾಂಶುಪಾಲ ಪ್ರೋ. ಎಸ್. ಸಿರಾಜ್ ಅಹಮದ್ ಆಶಯ ನುಡಿಗಳನ್ನಾಡಿದರು. ಕ.ಸಾ.ಪ. ಜಿಧ್ಯಕ್ಷ ಡಿ. ಮಂಜುನಾಥ್, ವಿದ್ಯಾರ್ಥಿ ಕ್ಷೇಮಾಧಿಕಾರಿ ಡಾ. ಕೆ.ಎನ್. ಮಂಜುನಾಥ್, ಪ್ರೊ. ಶಫಿವು, ಡಾ. ಹೆಚ್.ಪಿ. ಮಂಜುನಾಥ್, ಮಹಾದೇವಸ್ವಾಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
