ಸೆ. ೫: ಓಂ ಶಿವಂ ಸಿನಿಮಾ ರಾಜ್ಯಾದ್ಯಂತ ಬಿಡುಗಡೆ …
ಶಿವಮೊಗ್ಗ : ದೀಪಾ ಫಿಲಮ್ಸ್ ಅಡಿಯಲ್ಲಿ ಕೃಷ್ಣ ಕೆ.ಎನ್. ನಿರ್ಮಿಸಿ ಆಲ್ವಿನ್ ನಿರ್ದೇ ಶನದ ಓಂ ಶಿವಂ ಚಿತ್ರ ಸೆ.೫ರಂದು ಶಿವಮೊಗ್ಗ ಸೇರಿದಂತೆ ರಾಜದ್ಯಂತ ಬಿಡುಗಡೆ ಯಾಗಲಿದೆ ಎಂದು ನಿರ್ದೇಶಕ ಆಲ್ವಿನ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಓಂ ಶಿವಂ ಚಿತ್ರವು ನೈಜ ಕತೆಯನ್ನಾಧರಿಸಿದ ರೊಮ್ಯಾಂಟಿಕ್ ಮತ್ತು ಆಕ್ಷನ್ ಚಿತ್ರವಾಗಿದೆ. ಮಂಡ್ಯ, ಮೈಸೂರು, ಮಂಗಳೂರು ಸುತ್ತಮುತ್ತ ಚಿತ್ರೀಕ ರಣ ನಡೆದಿದ್ದು ಇದೀಗ ಬಿಡುಗಡೆಗೆ ಸಿದ್ಧವಾಗಿದೆ. ಒಚಿಟಿ ಜೀವನ ನಡೆಸುತ್ತಿರುವವರ ಗೋಳು, ಮೊಬೈಲ್ ಬಳಕೆಯ ಸಾಧಕ- ಬಾಧಕಗಳು, ಹನಿಟ್ರ್ಯಾಪ್ ನಂತಹ ಘಟನೆಗಳ ಸುತ್ತ ಕತೆ ಇದೆ. ಇದೊಂದು ಆಕ್ಷನ್ ಚಿತ್ರವಾಗಿದ್ದು, ಕೌತುಕ ಕೂಡ ಇದೆ ಎಂದರು.

ಭಾರ್ಗವ್ ಕೃಷ್ಣ ನಾಯಕ ನಾಗಿ, ವಿರಾನಿಕಾ ಶೆಟ್ಟಿ ನಾಯಕಿ ಯಾಗಿ ನಟಿಸಿರುವ ಈ ಚಿತ್ರದಲ್ಲಿ ರವಿಕಾಳೆ, ರೋಬೋಶಂಕರ್ ಪ್ರಮುಖ ಪಾತ್ರಗಳಲ್ಲಿ ನಟಿಸಿzರೆ. ಕೃಷ್ಣ ಕೆ.ಎನ್. ಚಿತ್ರ ನಿರ್ಮಾಣ ಮಾಡಿzರೆ. ವಿಜಯ್ ಸಂಗೀತ ಸಂಯೋಜನೆ ಮಾಡಿzರೆ. ವೀರೇಶ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಡಾ.ವಿ. ನಾಗೇಂದ್ರ ಪ್ರಸಾದ್, ಕವಿರಾಜ್, ಕೌಸ್ ಪೀರ್ ಹಾಡು ಗಳನ್ನು ಬರೆದಿದ್ದು, ನಾಲ್ಕು ಹಾಡುಗಳು ಇಂಪಾಗಿವೆ. ಮಳವಳ್ಳಿ ಸಾಯಿಕೃಷ್ಣ ಸಂಭಾಷಣೆ ಕೂಡ ಬರೆದಿzರೆ ಎಂದರು.
ಚಿತ್ರದ ಶೀರ್ಷಿಕೆ ಕುರಿತು ಮಾತನಾಡಿದ ಅವರು ಶಿವನು ಆಕ್ಟಿವ್ ಮತ್ತು ಅಗ್ರೆಸಿವ್ ಆಗಿರು ವಂತೆ ನಾಯಕನ ಪಾತ್ರ ಕೂಡ ಹಾಗೆಯೇ ಇರುವುದರಿಂದ ಪಾತ್ರದ ಹೆಸರು ಶಿವ ಆಗಿರುವುದ ರಿಂದ ಈ ಚಿತ್ರಕ್ಕೆ ಓಂ ಶಿವಂ ಎಂದು ಹೆಸರಿಟ್ಟಿದ್ದೇವೆ. ಈ ಚಿತ್ರದಲ್ಲಿ ಪ್ರೀತಿಯೂ ಇದೆ. ಪ್ರೀತಿಯನ್ನು ವ್ಯಕ್ತಪಡಿಸುವ ಬಗೆಯೂ ಇದೆ. ಯುವಕರು ಪ್ರೇಮಕ್ಕಾಗಿ ಯಾವ ಹಂತಕ್ಕೆ ಹೋಗಬಹುದು ಮತ್ತು ಅದರಿಂದ ಸಮಸ್ಯೆಗಳೇನು ಎಂಬೆಲ್ಲ ವಿಶಿಷ್ಟ ದೃಷ್ಟಿಕೋನ ಈ ಸಿನಿಮಾದಲ್ಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ನಾಯಕ ನಟ ಭಾರ್ಗವ್ ಕೃಷ್ಣ, ನಾಯಕಿ ವಿರಾನಿಕಾ ಶೆಟ್ಟಿ, ನಿರ್ಮಾಪಕ ಕೃಷ್ಣ ಕೆ.ಎನ್., ಚಿತ್ರದ ಪ್ರಮುಖ ಪಾತ್ರದ ಚೇತನಾ ಶೆಟ್ಟಿ ಇದ್ದರು.

