ಕೀಳರಿಮೆ ಬಿಟ್ಟು ಜಾತಿ ಸಮೀಕ್ಷೆ ಸಂದರ್ಭದಲ್ಲಿ ಮುಖ್ಯಜಾತಿ ದೀವರು ಎಂದೇ ನಮೂದಿಸಿ…
ಶಿವಮೊಗ್ಗ : ದೀವರು ಜಾತಿ ಸಮೀಕ್ಷೆಯ ಸಂದರ್ಭದಲ್ಲಿ ದೀವರು ಎಂದು ಮುಖ್ಯ ಜಾತಿಯನ್ನಾಗಿ ನಮೂದಿಸಬೇಕು ಎಂದು ದೀವರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಹೆಚ್. ನಾಗರಾಜ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಲತಃ ದೀವರು ರಾಜ್ಯದಲ್ಲಿ ಸುಮಾರು ೧೦ ಲಕ್ಷಕ್ಕೂ ಹೆಚ್ಚು ಜನರಿzರೆ. ಆದರೆ ಬಹುತೇಕ ದೀವರು ಇತಿಹಾಸದ ಅರಿವಿನ ಕೊರತೆ ಯಿಂದ ಅಥವಾ ಕೀಳರಿಮೆ ಯಿಂದ ತಮ್ಮ ಜತಿಯನ್ನು ಈಡಿಗ ಎಂದು ನಮೂದಿಸಿ ಕೊಳ್ಳುತ್ತಿzರೆ. ಇದರಿಂದ ದೀವರು ಎಂಬ ಒಂದು ಪರಂಪರೆ ಕಣ್ಮರೆಯಾಗುವ ಸ್ಥಿತಿಗೆ ಬಂದಿದೆ. ಬಹುತೇಕ ದೀವರು ಸಾಂದರ್ಭಿಕ ವಾಗಿ ಈಡಿಗ ಎಂದು ಮುಖ್ಯ ಜತಿಯನ್ನಾಗಿ ಗುರುತಿಸಿಕೊಂಡಿ zರೆ ಎಂದರು.
ಹಿಂದುಳಿದ ವರ್ಗಗಳ ಆಯೋಗ ತಿಳಿಸಿರುವ ೧೪೦೦ ಜಾತಿಗಳ ಪಟ್ಟಿಯಲ್ಲಿ ದೀವರು ಎಂಬ ಜತಿಯೂ ಇದ್ದು, ಜತಿ ಗಣತಿ ಸಂದರ್ಭದಲ್ಲಿ ಮೂಲ ದೀವರು ಜತಿಯಿಂದ ಈಡಿಗ ಜತಿಗೆ ಜಾತ್ಯಾಂತರ ಹೊಂದಿದವರು ಹಾಗೂ ಈಡಿಗ ಜತಿಯ ಅಡಿಯಲ್ಲಿ ದೀವರು ಎಂದು ಉಪ ಜತಿಯಾಗಿ ಗುರುತಿಸಿಕೊಂಡವರು ತಮ್ಮ ಮೂಲ ಜತಿಯಾದ ದೀವರು ಜತಿಯನ್ನು ದೀವರು ಎಂದೇ ನಮೂದಿಸಬೇಕು ಎಂದು ದೀವರ ಸಮುದಾಯಕ್ಕೆ ಮನವಿ ಮಾಡಿದರು.
ಮೂಲತಃ ದೀವರ ಜತಿ ಯವರಾಗಿ ಈಗ ಈಡಿಗ ಜತಿಯಲ್ಲಿ ಗುರುತಿಸಿಕೊಂಡು ಸರ್ಕಾರಿ ದಾಖಲೆಗಳಲ್ಲಿ ಈಡಿಗ ಎಂದು ನಮೂದಾಗಿರುವ ದೀವರ ಸಮುದಾಯದವರಿಗೆ ಈಡಿಗ ಜತಿಯಿಂದ ಪುನಃ ದೀವರು ಜತಿಗೆ ಜತ್ಯಾಂತರ ಹೊಂದಲು ಸರ್ಕಾರಿ ದಾಖಲೆಗಳಲ್ಲಿ ಈಡಿಗ ಜತಿಗೆ ಬದಲಾಗಿ ದೀವರು ಜತಿಯನ್ನು ನಮೂದಿಸಿಕೊಳ್ಳಲು ಸರ್ಕಾರ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಪ್ರಮುಖರಾದ ಕೆ.ಎಸ್. ಮಂಜಪ್ಪ, ಕುಪ್ಪಯ್ಯ, ಉದಯ ಕುಮಾರ್, ದೇವರಾಜ್, ಬಸವಣ್ಣಪ್ಪ, ಮಹಂತೇಶ್ ಇದ್ದರು.


