ಉದ್ಯೋಗಜಿಲ್ಲಾ ಸುದ್ದಿತಾಜಾ ಸುದ್ದಿ

ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡ ಮಾದರಿ ರೈತ…

Share Below Link

ಚನ್ನಗಿರಿ : ನೀತಿಗೇರೆ ಗ್ರಾಮದ ಶ್ರೀ ರುದ್ರಪ್ಪ ಅವರು ಕೇವಲ ಒಂದು ಎಕರೆ ಜಮೀನಿನಲ್ಲಿ ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಯಶಸ್ವಿಯಾಗಿ ಕೃಷಿ ಕಾರ್ಯ ನಿರ್ವಹಿಸುತ್ತಿzರೆ.
ಅವರು ತಮ್ಮ ಜಮೀನಿನಲ್ಲಿ ವಿವಿಧ ಬೆಳೆಗಳಾದ ಅಡಿಕೆ, ಬಾಳೆಹಣ್ಣು, ವೆಲ್ವೆಟ್ ಬೀನ್ಸ್, ನುಗ್ಗೆ, ಪೇರಲಹಣ್ಣು ಹಾಗೂ ಪಪ್ಪಾಯ ಬೆಳೆಗಳನ್ನು ಬೆಳೆಸಿ, ಬಹುಬೆಳೆ ಪದ್ಧತಿಯ ಮೂಲಕ ಆದಾಯ ಹೆಚ್ಚಿಸಿಕೊಂಡಿದ್ದಾರೆ.
ರುದ್ರಪ್ಪ ಅವರು ಬೆಳೆಗಳ ಜೊತೆಗೆ, ಹೈನುಗಾರಿಕೆಯನ್ನು ಸಹ ಅಳವಡಿಸಿಕೊಂಡು, ಹಾಲಿನ ಉತ್ಪಾದನೆಯ ಮೂಲಕ ಆರ್ಥಿಕವಾಗಿ ಮತ್ತಷ್ಟು ಸದೃಢರಾಗಿzರೆ. ಅವರು ಪ್ರಾಕೃತಿಕ ಕೃಷಿಗೆ ಮಹತ್ವ ನೀಡುತ್ತಾ, ಜೀವಾಮೃತ ತಯಾರಿಸಿ ತಮ್ಮ ಬೆಳೆಗಳಿಗೆ ಬಳಸುತ್ತಾರೆ. ಇದರಿಂದ ಮಣ್ಣಿನ ಆರೋಗ್ಯ ಉತ್ತಮಗೊಂಡಿದ್ದು, ಉತ್ತಮ ಬೆಳೆಯ ಬೆಳವಣಿಗೆ ಕಂಡುಬರುತ್ತಿದೆ.
ರುದ್ರಪ್ಪನವರ ಈ ಯಶಸ್ಸಿನ ಹಿಂದೆ ಕೃಷಿ ಅಧಿಕಾರಿ ಕುಮಾರ್ ಮತ್ತು ಸಹಾಯಕ ತಾಂತ್ರಿಕ ವ್ಯವಸ್ಥಾಪಕಿ ಅನಿತಾ ಎಂ. ಅವರ ಮಾರ್ಗದರ್ಶನ ಹಾಗೂ ತಾಂತ್ರಿಕ ಸಲಹೆಗಳೂ ಪ್ರಮುಖ ಪಾತ್ರವಹಿಸಿವೆ.
ಈ ಮಾದರಿ ರೈತನು ಸಮಗ್ರ ಕೃಷಿಯ ಮೂಲಕ ಕೇವಲ ಒಂದು ಎಕರೆ ಜಮೀನನ್ನೇ ಬಳಸಿಕೊಂಡು ಸುಸ್ಥಿರ ಹಾಗೂ ಆದಾಯದಾಯಕ ಕೃಷಿಯ ದಾರಿ ತೋರಿಸಿzರೆ. ಇವು ಇತರ ರೈತರಿಗೆ ಪ್ರೇರಣೆಯ ಮೂಲವಾಗಲಿದೆ ಎಂದು ಅವರು ಹೇಳಿದ್ದಾರೆ.