ಉದ್ಯೋಗಜಿಲ್ಲಾ ಸುದ್ದಿತಾಜಾ ಸುದ್ದಿ

ರೈತರು ಕೃಷಿಯನ್ನು ಉದ್ಯಮವಾಗಿ ಪರಿಗಣಿಸಿದಾಗ ಮಾತ್ರ ಲಾಭ ಪಡೆಯಲು ಸಾಧ್ಯ …

Share Below Link

ಶಿವಮೊಗ್ಗ: ರೈತರು ಕೃಷಿಯನ್ನು ಕೇವಲ ಭಾವನಾತ್ಮಕವಾಗಿ ನೋಡಿದರೆ ಸಾಲದು, ಅದನ್ನು ಉದ್ಯಮ ವಾಗಿ ಪರಿಗಣಿಸಿದಾಗ ಮಾತ್ರ ಕೃಷಿಯಲ್ಲೂ ಲಾಭ ಪಡೆಯಲು ಸಾಧ್ಯ ಎಂದು ಡಿಸಿ ಗುರುದತ್ತ ಹೆಗಡೆ ಕರೆ ನೀಡಿದರು.
ರೈತ ಉತ್ಪಾದಕ ಕಂಪನಿಗಳ ಒಕ್ಕೂಟಗಳ ಪಾತ್ರ ಕುರಿತು ಜಿ. ಪಂ.ಸಭಾಂಗದಲ್ಲಿ ಇಂದು ಜಿ ಪಂಚಾತಿ, ಸಹೋದಯ ರೈತ ಉತ್ಪಾದಕ ಕಂಪನಿಗಳ ಒಕ್ಕೂಟ ಲಿಟೆಡ್, ಕೃಷಿ ಇಲಾಖೆ ಹಾಗೂ ಚೈತನ್ಯ ರೂರಾಲ್ ಡೆವ ಲಪ್ ಮೆಂಟ್ ಸೊಸೈಟಿ ಸೇರಿ ದಂತೆ ವಿವಿಧ ಸಂಸ್ಥೆಗಳ ಸಂಯು ಕ್ತಾಶ್ರಯದಲ್ಲಿ ಹ್ಮುಕೊಂಡಿದ್ದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾ ಡಿದರು.
ದೇಶದ ಬಹುದೊಡ್ಡ ಸಮೂ ಹಕ್ಕೆ ಕೃಷಿಯೇ ಪ್ರಮುಖ ವೃತ್ತಿ ಯಾಗಿದೆ.ದುರಂತ ಅಂದ್ರೆ ಇಲ್ಲಿಯೇ ಹೆಚ್ಚು ತೊಂದರೆಗಳಿವೆ. ಅನಿಶ್ಚಿತತೆಯಲ್ಲಿ ರೈತರು ಬೆಳೆ ಬೆಳೆಯುತ್ತಿzರೆ. ಬೆಳೆದ ಬೆಳಗೆ ಸರಿ ಯಾದ ಬೆಳೆ ಸಿಗದ ಪರಿಸ್ಥಿತಿಗಳಿವೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳ ಬೇಕೆನ್ನುವ ಪ್ರಯತ್ನ ಹಲವಾರು ವರ್ಷಗಳಿಂದಲೂ ನಡೆದಿದೆ. ಆದರೂ ಅದಕ್ಕೆ ಪರಿಹಾರ ಸಿಗದಂ ತಾಗಿದೆ. ಈ ನ್ನೆಲೆಯಲ್ಲಿ ಕೃಷಿಯನ್ನು ಕೇವಲ ಭಾವನಾತ್ಮಕವಾಗಿ ನೋಡ ದೆ , ಅದನ್ನು ಉದ್ಯಮವಾಗಿ ಪರಿಗ ಣಿಸಬೇಕಿದಾಗ ಮಾತ್ರ ಬೇರೆಯವ ಸಹಾಯಕ್ಕೆ ನೀವು ಕಾಯದೆ, ತಮ್ಮಿಂದ ಇತರರಿಗೆಸಹಾಯ ಮಾ ಡಲು ಸಾಧ್ಯವಾಗಲಿದೆ ಎಂದರು.


ಕೃಷಿ ಉತ್ಪನ್ನಗಳಿಗೆ ಈಗ ಮಾರು ಕಟ್ಟೆ ಸಮಸ್ಯೆ ಇದೆ. ಇದನ್ನು ನಿಭಾಯಿಸಲು ಸರ್ಕಾರ ಹಲವು ರೀತಿ ಪ್ರಯತ್ನ ನಡೆಸುತ್ತಿರುವುದರ ನಡುವೆಯೇ ಸಹಕಾರಿ ಕ್ಷೇತ್ರವೂ ಕೂಡ ಪ್ರಯತ್ನ ನಡೆಸಿದೆ.ಆದರೆ ಸಹಕಾರಿ ಕ್ಷೇತ್ರದಲ್ಲಿ ಒಂದಷ್ಟು ಲೋಪದೋಷಗಳು ಆಗಿದ್ದನ್ನು ನಾವು ನೋಡಿzವೆ. ಇಂತಹ ಸಂದ ರ್ಭದಲ್ಲಿ ರೈತ ಉತ್ಪಾದಕ ಕಂಪನಿಗಳ ಪಾತ್ರ ದೊಡ್ಡದಿದೆ. ಇಲ್ಲಿ ರೈತರಿಗೆ ಸಮರ್ಥವಾಗಿ ನ್ಯಾಯ ಕೊಡಿಸಲು ಸಾಧ್ಯವಾಗಲಿದೆ ಎಂದರು.
ಜಿಯಲ್ಲಿ ರೈತ ಉತ್ಪಾದಕ ಕಂಪನಿಗಳ ಸ್ಥಾಪನೆ ಮತ್ತು ಉತ್ತೇಜ ನಕ್ಕೆ ಸಹೋದಯ ರೈತ ಉತ್ಪಾದಕ ಕಂಪನಿಗಳ ಒಕ್ಕೂಟ ಮತ್ತು ಚೈತನ್ಯ ರೂರಲ್ ಡೆವೆಲಪ್ಮೆಂಟ್ ಸೊಸೈಟಿ ಬಹಳ ಒಳ್ಳೆಯ ಕೆಲಸ ಮಾಡುತ್ತಿವೆ. ಇಂತಹ ಪ್ರಯತ್ನಗಳ ಮೂಲಕ ರೈತರು ಸಂಘಟಿತರಾಗಿ ಕೆಲಸ ಮಾಡಿದರೆ ರೈತರ ಉತ್ಪನ್ನಗಳಿಗೆ ಒಳ್ಳೆಯ ಬೆಲೆ ಪಡೆಯಲು ಸಾಧ್ಯ ವಾಗಲಿದೆ. ಸರ್ಕಾರಿ ವ್ಯವಸ್ಥೆಯಲ್ಲಿ ರೈತ ಉತ್ಪಾದಕ ಕಂಪನಿಗಳಿಗೆ ನೆರವು ಅಗತ್ಯದ್ದರೆ ಅದನ್ನು ಕಲ್ಪಿಸಿಕೊಡಲಾ ಗುವುದು ಎಂದುಭರವಸೆ ನೀಡಿ ದರು.
ಸರ್ಕಾರದ ಸೌಲಭ್ಯಗಳನ್ನು ಹಂಚಿಕೆ ಮಾಡುವಾಗ ಎಸ್ಟಿ ಎಸ್ಟಿಗೆ ಇಷ್ಟು, ಮಳೆಯರಿಗೆ ಇಷ್ಟು, ಎಎಲ್ ಎ, ಎಂಪಿ ಕೋಟಾ ಇಷ್ಟು ಎಂದು ಹಂಚಿಕೆ ಮಾಡುವ. ಪದ್ದತಿ ಹಾಗೆಯೇ ಇದೆ.ಇದರಿಂದ ಎಷ್ಟು ಪ್ರಯೋಜನ ಆಗಿದೆ ಎಂದು ಅಧಿಕಾರಿಗಳು ಸೇರಿ ಯಾರು ಕೂಡ ಅಷ್ಟಾಗಿ ತಲೆಕೆಡಿಸಿಕೊಂಡಿಲ್ಲ, ಇನ್ನಾದ ರೂ ಕೂಡ ಅಧಿಕಾರಿಗಳ ಮನೋ ಭಾವ ಬದಲಾಗ ಬೇಕಿದೆ.ಅವರು ಕೂಡ ಹೊಸತನ್ನು ಕಲಿಯಬೇಕಿದೆ. ಒಬ್ಬರಿಗೆ ಎನ್ನುವ ಬದಲಿಗೆಇಂತಹ ರೈತ ಉತ್ಪಾದಕ ಕಂಪನಿಗಳ ಮೂಲಕ ಸೌಲಭ್ಯ ನೀಡಿದರೆ ದೊಡ್ಡ ರೈತ ಸಮುದಾಯಕ್ಕೆ ಅನುಕೂಲ ವಾಗಲಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕಿದೆ ಎಂದರು.
ಜಿ ಪಂಚಾಯತಿ ಮುಖ್ಯ ಕಾರ್ಯಾ ನಿರ್ವಹಣಾಧಿಕಾರಿ ಎನ್.ಹೇಮಂತ್ ಮಾತನಾಡಿ, ರೈತರ ಉತ್ಪನ್ನಗಳ ಮಾರುಕಟ್ಡೆಗೆ ಕಿಸಾನ್ ಮಾಲ್,ರೈತ ಮಾರ್ಕೆಟ್ ಮಾಡುವ ಪ್ರಸ್ತಾಪ ಇಟ್ಟಿದ್ದೀರಿ, ಇದನ್ನು ಹೇಗೆ ಮಾಡಬೇಕು, ನಿರ್ವಹಣೆ ಹೇಗೆ ಎನ್ನುವುದನ್ನು ಆಲೋಚಿಸಿ ಕ್ರಮ ಕೈಗೊಳ್ಳಲಾ ಗುವುದು ಎಂದರು.
ರೈತ ಉತ್ಪಾದಕ ಕಂಪನಿಗಳ ಒಕ್ಕೂಟದ ತಜ್ಞ ನಿರ್ದೇಶಕ ಭದ್ರೀಶ್ ಮಾತನಾಡಿ, ಜಿಯಲ್ಲಿ ಒಟ್ಟು ೪೯ ಕಂಪನಿಗಳಿವೆ. ಅವುಗಳನ್ನು ಸೇರಿಸಿ ರೈತ ಉತ್ಪಾದಕ ಕಂಪನಿಗಳಒಕ್ಕೂಟ ರಚಿಸಲಾಗಿದೆ. ಇದರ ಮೂಲಕ ರೈತರಿಗೆ ಕೃ ಪರಿ ಕರಗಳನ್ನು ಕಡಿಮೆ ಬೆಲೆಗೆ ತಲುಪಿ ಸುವುದು, ರೈತ ಉತ್ಪನ್ನ ಗಳಿಗೆ ನ್ಯಾಯ ಯುತ ಬೆಲೆ ಸಿಗುವಂತೆ ಮಾಡುವುದು ಇದರ ಉzಶ ವಾಗಿದೆ ಎಂದರು.
ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಎಂ.ಡಾ.ಕಿರಣ್ ಕುಮಾರ್, ನಬಾರ್ಡ್ ಡಿಡಿಎಂ ಶರತ್ ಪಿ. ಗೌಡ, ಪಶು ಸಂಗೋ ಪನಾ ಇಲಾಖೆ ಉಪನಿರ್ದೇಶಕ ಡಾ.ಎ. ಬಾಬುರತ್ನ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ ಸವಿತಾ ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕಿ ಶಿವಕುಮಾರ್, ಸಹೋ ದಯ ರೈತ ಉತ್ಪಾದಕ ಕಂಪನಿಗಳ ಒಕ್ಕೂಟದ ಅಧ್ಯಕ್ಷ ಅನುಪ್. ಬಿ. ಹಾಗೂ ಉಪಾಧ್ಯಕ್ಷ ಸತೀಶ್ ಇದ್ದರು. ಜಿಯ ಧೆಡೆಗಳಿಂದ ಬಂದಿದ್ದ ನೂರಾರು ರೈತರು ಕಾರ್ಯಾಗಾರದಲ್ಲಿ ಪಾಲ್ಗೊಂಡರು.