ದಸರಾ ಗಜಪಡೆ: ತೂಕಪರೀಕ್ಷೆ- ತಾಲೀಮು
ಮೈಸೂರು : ವಿಶ್ವವಿಖ್ಯಾತ ಮೈಸೂರು ದಸರಾ ದಲ್ಲಿ ಪಾಲ್ಗೊಳ್ಳಲು ಎರಡನೇ ತಂಡದಲ್ಲಿ ಬಂದ ಗಜಪಡೆಗೆ ಇಂದು ತೂಕ ಪರೀಕ್ಷೆ ನಡೆಸಲಾಯಿತು. ನಿನ್ನೆಯಷ್ಟೇ ಕಾಡಿನಿಂದ ಅರಮನೆ ಅಂಗಳಕ್ಕೆ ಪ್ರವೇಶ ಮಾಡಿದ ೨ನೇ ತಂಡದ ಐದು ಆನೆಗಳಿಗೆ ಧನ್ವಂತರಿ ರಸ್ತೆಯಲ್ಲಿರುವ ಸಾಯಿರಾಂ ತೂಕಮಾಪನ ಕೇಂದ್ರದಲ್ಲಿ ತೂಕ ಪರಿಶೀಲನೆ ಮಾಡಲಾಯಿತು.
ಹೇಮಾವತಿ-೨೪೪೦ ಕೆಜಿ, ಶ್ರೀಕಂಠ-೫೫೪೦ ಕೆಜಿ, ಸುಗ್ರೀವ- ೫೫೪೫ ಕೆಜಿ, ರೂಪ-೩೩೨೦ ಕೆಜಿ, ಗೋಪಿ-೪೯೯೦ ಕೆಜಿ ತೂಕ ಹೊಂದಿವೆ.ಮೊದಲ ಹಂತದ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಗಜಪಡೆಗಳ ತೂಕ ನೋಡುವುದಾ ದರೆ ಅಭಿಮನ್ಯು ೫೩೬೦ ಕೆಜಿ, ಧನಂಜಯ-೫೩೧೦ ಕೆಜಿ, ಕಾವೇರಿ -೩೦೧೦ ಕೆಜಿ, ಲಕ್ಷ್ಮಿ-೩೭೩೦ ಕೆಜಿ, ಭೀಮ-೫೪೬೫ ಕೆಜಿ, ಏಕಲವ್ಯ- ೫೩೦೫ ಕೆಜಿ, ಮಹೇಂದ್ರ-೫೧೨೦ ಕೆಜಿ, ಕಂಜನ್-೪೮೮೦ ಕೆಜಿ, ಪ್ರಶಾಂತ-೫೧೧೦ ಕೆಜಿ ತೂಗಿವೆ.
ಆನೆಗಳಿಗೆ ಪ್ರತಿನಿತ್ಯ ಪೌಷ್ಟಿಕ ಆಹಾರ ನೀಡಲಾಗುತ್ತಿದ್ದು, ಅಂಬಾರಿ ಸಂದರ್ಭದಲ್ಲಿ ಯಾವುದೇ ಸದ್ದುಗದ್ದಲದಿಂದ ವಿಚಲಿತವಾಗದಂತೆ ತರಬೇತಿ ನೀಡಲಾಗುತ್ತಿದ್ದು, ಬೆಳಿಗ್ಗೆ ಮತ್ತು ಸಂಜೆ ಅರಮನೆಯಿಂದ ಬನ್ನಿಮಂಟ ಪದವರೆಗೂ ತಾಲೀಮು ನಡೆಸಲಾಗುತ್ತಿದೆ.


