ಆರೋಗ್ಯಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಸ್ವಾತಂತ್ರ್ಯ ದಿನಾಚರಣೆಗೂ ಮೀರಿ ಪ್ರಚಾರದ ಬಿಲ್ಡಪ್; ಇಷ್ಟೆಲ್ಲಾ ಬೇಕಿತ್ತಾ ಡಾಕ್ಟ್ರೇ?!

Share Below Link

ಶಿವಮೊಗ್ಗ : ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆ.೧೫ರಂದು ನಗರದ ನೆಹರೂ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಸ್ವಾತಂತ್ರ್ಯ ದಿನಾಚರಣೆ ಕಾರ್‍ಯಕ್ರಮದ ವೇಳೆ ಆರಂಭದಲ್ಲಿ ವಿವಿಧ ಶಾಲೆಗಳ ಮೂವರು ಮಕ್ಕಳು ತಲೆಸುತ್ತು ಬಂದು ಬಿದ್ದಿದ್ದು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ವಿಧಾನ ಪರಿಷತ್ ಸದಸ್ಯ ಡಾ| ಧನಂಜಯ ಸರ್ಜಿ ಅವರಿಂದಾಗಿ ಮಾಧ್ಯಮಗಳಲ್ಲಿ ಭಾರೀ ಸುದ್ದಿಯಾಗಿದೆ.


ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವಿಧಾನ ಪರಿಷತ್ ಶಾಸಕ ಡಾ. ಧನಂಜಯ ಸರ್ಜಿ ಅವರು ತಕ್ಷಣ ಕಾರ್ಯಪ್ರವೃತ್ತರಾಗಿ, ಅಲ್ಲಿಯೇ ಇದ್ದ ಸರ್ಕಾರಿ ಆಂಬುಲೆನ್ಸ್‌ನಲ್ಲಿ ಬಾಲಕಿಯನ್ನ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ನೀಡಿzರೆ. ಈ ವೇಳೆ ಬಾಲಕಿಯನ್ನು ಮಾತನಾಡಿಸಿ ಏನು ತೊಂದರೆ ಇಲ್ಲ ಎಂದು ಆತ್ಮವಿಶ್ವಾಸ ತುಂಬಿzರೆ ಎಂದು ಸರ್ಜಿ ಅವರ ಸಿಬ್ಬಂದಿಯೋರ್ವರು ಸುದ್ದಿ ಟೈಪ್ ಮಾಡಿ ಮಾಧ್ಯಮಗಳಿಗೆ ಕ್ಷಣಮಾತ್ರದಲ್ಲಿ ಬಿಡುಗಡೆ ಗೊಳಿಸಿದ್ದರು.
ಅಷ್ಟೇ ಅಲ್ಲದೇ ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಡಾ| ಸರ್ಜಿ ಅವರು, ಅಸ್ವಸ್ಥಳಾಗಿ ಬಿದ್ದ ಬಾಲಕಿ ಸ್ವಲ್ಪಕಾಲ ಒzಡುತ್ತಿ ದ್ದಳು, ಉಸಿರಾಡುವುದಕ್ಕೂ ಕಷ್ಟವಾಗುತ್ತಿತ್ತು, ಆತಂಕ ಮತ್ತು ಒತ್ತಡದಿಂದ ಗಾಬರಿಯಾಗಿದ್ದಳು, ಹೃದಯಬಡಿತ, ಬಿ.ಪಿ ತಪಾಸಣೆ ಮಾಡಿ, ಸಹಜ ಸ್ಥಿತಿಗೆ ಬಂದ ನಂತರ ಆ ಬಾಲಕಿಯ ಬಳಿ ಮಾತನಾಡಿ ಸಮಾಧಾನ ಮಾಡಿ ಆತ್ಮವಿಶ್ವಾಸ ತುಂಬಿದ್ದೇನೆ ಎಂದು ತಿಳಿಸಿದ್ದು ಕೂಡ ವೈರಲ್ ಆಗಿತ್ತು!
ಎಂಎಲ್‌ಸಿ ಧನಂಜಯ ಸರ್ಜಿ ಅವರು ಓರ್ವ ವೈದ್ಯರಾಗಿ ತಮ್ಮ ಜವಾಬ್ದಾರಿ ನಿರ್ವಹಿಸಿರುವುದಲ್ಲಿ ತಪ್ಪೇನಿಲ್ಲ. ಆದರೆ ಇಷ್ಟು ಸಣ್ಣ ವಿಷಯಕ್ಕೆ ಇಷ್ಟೊಂದು ಬಿಲ್ಡಪ್ ಬೇಕಿತ್ತಾ ಎಂಬುದು ಅಲ್ಲಿ ಉಪಸ್ಥಿತರಿದ್ದ ಸಾರ್ವಜನಿಕರ ಪ್ರಶ್ನೆಯಾಗಿತ್ತು.
ಜಿಲ್ಲಾ ಆರೋಗ್ಯ ಇಲಾಖೆ ಯಿಂದ ಎಂದಿನಂತೆ ಈ ಬಾರಿ ಯೂ ಕಾರ್ಯಕ್ರಮ ಸ್ಥಳದಲ್ಲಿ ಆಂಬುಲೆನ್ಸ್ ವ್ಯವಸ್ಥೆ ಮಾಡಲಾ ಗಿತ್ತು. ಅದರಲ್ಲಿ ವೈದ್ಯಕೀಯ ಸಿಬ್ಬಂ ದಿಗಳು ಕೂಡ ಉಪಸ್ಥಿತರಿದ್ದರು.
ಎಂಎಲ್‌ಸಿ ಡಾ| ಸರ್ಜಿ ಅವರ ಕಾರ್ಯವೈಖರಿಯಿಂದಾದ ಸುದ್ದಿ ಗಮನಿಸಿದರೆ, ಜಿಲ್ಲಾಡಳಿತದಿಂದ ಈ ಕುರಿತು ಯಾವುದೇ ವ್ಯವಸ್ಥೆ ಮಾಡಿರಲಿಲ್ಲವೇ? ಒಂದು ವೇಳೆ ಮಾಡಿದ್ದರೆ ಅಂಬುಲೆನ್ಸ್‌ನಲ್ಲಿ ವೈದ್ಯಕೀಯ ಸಿಬ್ಬಂದಿಗಳಿರಲಿ ಲ್ಲವೇ? ಇದ್ದರೆ ಅವರು ಈ ಮಕ್ಕಳ ಆರೈಕೆ ಮಾಡಲಿಲ್ಲವೇ? ಹಾಗೊಂ ದು ವೇಳೆ ಅಲ್ಲಿನ ಸಿಬ್ಬಂದಿಗಳು ತಮ್ಮ ಕರ್ತವ್ಯ ನಿರ್ವಹಿಸದಿದ್ದಲ್ಲಿ ಅವರ ವಿರುದ್ಧ ಕ್ರಮ ಜರುಗಿಸಬಹು ದಿತ್ತಲ್ಲವೇ? ಅದು ಬಿಟ್ಟು ಕೇವಲ ಪ್ರಚಾರದ ಹಂಬಲದಿಂದ ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದು ಸರಿಯೇ? ಡಾ| ಸರ್ಜಿ ಇಲ್ಲದಿದ್ದರೆ ಏನಾದರೂ ಅನಾಹುತ ನಡೆಯುತ್ತಿತ್ತೇ? ಎಂಬ ಪ್ರಶ್ನೆಗಳು ಮೂಡತೊಡಗಿವೆ.
ಡಾ| ಸರ್ಜಿ ಅವರೇ ಕೇವಲ ಪ್ರಚಾರಕ್ಕಾಗಿ ಈ ರೀತಿ ಮಾಡು ವುದು ಎಷ್ಟು ಸರಿ ? ಅದೇ ವೇದಿಕೆಯಲ್ಲಿ ಸಚಿವರ ಭಾಷಣ ಮುಗಿದ ನಂತರ ಅಭಿನಂದನಾ ಕಾರ್ಯಕ್ರಮ ಕೂಡ ಜರುಗಿತು. ಆ ಸಂದರ್ಭದಲ್ಲಿ ಕೂಡ ಒಂದು ಮಗು ತಲೆ ಸುತ್ತು ಬಂದು ಬಿದ್ದ ಕಾರಣ ಅಲ್ಲಿದ್ದ ಮಕ್ಕಳು ಮತ್ತು ಶಿಕ್ಷಕರು ಸದರಿ ಮಗುವಿನ ಆಕೈಕೆ ಮಾಡಿದರು. ಅದನ್ನು ಗಮನಿಸಿದ ಸಚಿವರು ಪಕ್ಕದಲ್ಲಿದ್ದ ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಗಮನಿಸಲು ಸೂಚಿಸಿದರು. ಆಗ ಅದೇ ವೇದಿಕೆ ಯಲ್ಲಿದ್ದ ಡಾ| ಸರ್ಜಿ ಅವರು ತಮ್ಮ ಅಕ್ಕಪಕ್ಕ ಕುಳಿತಿದ್ದ ಎಂಎಲ್‌ಸಿ ಮತ್ತು ಎಂಎಲ್‌ಎ ಅರೊಂದಿಗೆ ಮಾತಿನಲ್ಲಿ ಮಗ್ನರಾಗಿದ್ದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿದ್ದ ಡಾ| ಸರ್ಜಿ ಅವರಿಗೆ ಅದು ಕಾಣ ಲಿಲ್ಲವೇ?
ಹೌದು, ವಿಧಾನ ಪರಿಷತ್ ಸದಸ್ಯರೂ ಆಗಿರುವ ಡಾ| ಧನಂಜಯ ಸರ್ಜಿ ಅವರ ಆರೋಗ್ಯಪರ ಕಾಳಜಿ ಕುರಿತು ಎರಡು ಮಾತಿಲ್ಲ. ಆದರೆ ಇಷ್ಟು ಸಣ್ಣ ವಿಷಯಕ್ಕೆ ಇಷ್ಟೊಂದು ಬಿಲ್ಡಪ್ ಬೇಕಿತ್ತೇ ಎಂದು ಕ್ರೀಡಾಂಗ ಣದಲ್ಲಿದ್ದ ಕೆಲವರು ಕಿಚಾಯಿಸಿದ್ದು ಕಂಡುಬಂತು.
ಜನಸೇವೆ, ಆರೋಗ್ಯ ಸೇವೆಯ ಹೆಸರಿನಲ್ಲಿ ನಡೆಯುವ ಪ್ರಚಾರಕ್ಕೂ ಒಂದು ಮಿತಿ ಇರಬೇಕೆಂಬ ಅಭಿಪ್ರಾಯ ಸಾರ್ವಜನಿಕರಲ್ಲಿ ಕೇಳಿಬಂದಿತು.
ಈ ಹಿಂದೆ ಮಕ್ಕಳ ವೈದ್ಯ ರಾಗಿದ್ದ ಅವರು ತಮ್ಮ ಆಸ್ಪತ್ರೆ ಯಲ್ಲಿ ನೀಡಿದ್ದ ಸೇವೆಯಿಂದಲೇ ನಗರದಲ್ಲಿ ಪ್ರಖ್ಯಾತರಾದರು. ನಂತರ ಜನಸೇವೆ ಮಾಡಬೇಕೆಂಬ ಉದ್ದೇಶದಿಂದ ಏಕಾಏಕಿ ನಗರದ ಪ್ರಮುಖ ಸರ್ಕ ಲ್‌ಗಳಲ್ಲೆಲ್ಲಾ ಜನಪರ-ಜೀವಪರ ಎಂಬ ಟ್ಯಾಗ್‌ಲೈನ್ ಬಳಸಿ ದೊಡ್ಡ ದೊಡ್ಡ ಫ್ಲಕ್ಸ್‌ಗಳನ್ನು ಹಾಕಿಕೊಂಡು ರಾಜಕೀಯಕ್ಕೆ ಎಂಟ್ರಿಕೊಟ್ಟ ಡಾ| ಸರ್ಜಿ ಅವರು, ಪರ-ವಿರೋಧದ ನಡುವೆ ಬಿಜೆಪಿ ಪ್ರಾಥಮಿಕ ಸದಸ್ಯತ್ವ ಪಡೆದು ನಂತರ ಬಿಜೆಪಿ ನೈರುತ್ಯ ಪದವೀಧರ ಕ್ಷೇತ್ರಕ್ಕೆ ಸ್ಪರ್ಧಿಸಿ ವಿಧಾನ ಪರಿಷತ್‌ಗೆ ಆಯ್ಕೆಯಾಗಿ ದ್ದಾರೆ.
ಈ ಹಿಂದೆ ವೈದ್ಯಕೀಯ ಕ್ಷೇತ್ರ ದಲ್ಲಿ ಸೇವೆ ಸಲ್ಲಿಸಿದಂತೆ ರಾಜಕೀ ಯದಲ್ಲೂ ತಮ್ಮ ಪ್ರಚಾರದ ಹಂಬಲ ಬದಿಗಿಟ್ಟು ನಿಸ್ವಾರ್ಥ ಸೇವೇ ಸಲ್ಲಿಸಲಿ ಎಂದು ಸಾರ್ವ ಜನಿಕರು ಮಾತನಾಡತೊಡಗಿದ್ದಾರೆ.
ಈ ವಿಷಯ ಮಾಧ್ಯಮಗಳಲ್ಲಿ ಈ ಪರಿ ಪ್ರಾಮುಖ್ಯತೆ ನೀಡುವಷ್ಟು ಗಂಭೀರತೆ ಇರಲಿಲ್ಲ. ಈ ಹಿಂದಿನ ವರ್ಷಗಳಲ್ಲೂ ಇಂತಹ ಕಾರ್ಯಕ್ರಮಗಳಲ್ಲಿ ಮಕ್ಕಳು ತಲೆಸುತ್ತು ಬಂದು ಬಿದ್ದ ಘಟನೆಗಳು ಸಾಕಷ್ಟು ನಡೆದಿವೆ. ಎಂದಿನಂತೆ ಪ್ರತಿಬಾರಿಯು ಅಲ್ಲಿದ್ದ ಶಿಕ್ಷಕ-ಶಿಕ್ಷಕಿಯರ, ಕ್ರೀಡಾಂಗಣ ಉಸ್ತುವಾರಿಗಳು ಸೇರಿದಂತೆ ಸಾರ್ವಜನಿಕರು ಕುಸಿದುಬಿದ್ದ ಮಕ್ಕಳನ್ನು ಶುಶ್ರೂಷೆ ಮಾಡಿದ್ದರು. ಆದರೆ ಅವರ ಸೇವೆ ಸುದ್ದಿಯಾಗಿರಲಿಲ್ಲ. ಕುಸಿದು ಬಿದ್ದಿದ್ದ ಮಕ್ಕಳು ತಕ್ಷಣ ಚೇತರಿಸಿಕೊಂಡು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಉದಾಹರಣೆಗಳು ಸಾಕಷ್ಟಿವೆ.