ಆರೋಗ್ಯಉದ್ಯೋಗಜಿಲ್ಲಾ ಸುದ್ದಿತಾಜಾ ಸುದ್ದಿ

ಹೊಸನಾವಿಕ ವರದಿಗೆ ಸ್ಪಂದಿಸಿದ ಡಿಸಿ; ಅವಧಿ ಮುಗಿದಿದ್ದ ಸ್ಟಾನಿಟೈಸರ್ ಬಾಕ್ಸ್ ಶಿಫ್ಟ್; ಪಳ ಪಳ ಹೊಳೆಯುತ್ತಿದೆ ಶೌಚಾಲಯ…!!

Share Below Link

ವಿಶೇಷ ವರದಿ: ರಾಕೇಶ್ ಡಿಸೋಜ-9448343211
ಶಿವಮೊಗ್ಗ (ಹೊಸನಾವಿಕ): ಪತ್ರಿಕೆ ಎಂದರೆ ಕೇವಲ ಮಸಿ ಮತ್ತು ಕಾಗದದ ಮೇಳವಲ್ಲ. ಅದು ಜನಮನದ ಧ್ವನಿ, ಸಮಾಜದ ಕನ್ನಡಿ ಮತ್ತು ಬದಲಾವಣೆಯ ಹಾದಿ ತೋರಿಸುವ ದೀಪಸ್ತಂಭ. ನಿಜವಾದ ಪತ್ರಿಕೋದ್ಯಮ ಎಂದರೆ ಕೇವಲ ಘಟನೆ ಮತ್ತು ಗೋಷ್ಠಿಗಳನ್ನು ವರದಿ ಮಾಡುವುದಲ್ಲ, ಅದು ಸಮಾಜದಲ್ಲಿ ಬದಲಾವಣೆಯನ್ನು ತರಲು ನಿರಂತರ ಹೋರಾಟವಾಗಿದೆ.
ಕೆಲ ದಿನಗಳ ಹಿಂದೆ ಶಿವಮೊಗ್ಗ ಜಿಧಿಕಾರಿಗಳ ಕಚೇರಿಯ ಕಟ್ಟಡದ ಶೌಚಾಲಯದಲ್ಲಿ ಎಂದರಲ್ಲಿ ಕಸದ ರಾಶಿ, ಅವಧಿ ಮುಗಿದ ಸ್ಯಾನಿಟೈಸರ್ ಡಬ್ಬಿಗಳು ಹಾಗೂ ೨೦೨೧ರ ಸೆನ್ಸೆಸ್‌ಗೆ ಬಳಸಿ ಉಳಿದ ಕೈಚೀಲಗಳ ರಾಶಿ ಬಿದ್ದಿರುವ ಅಸಮರ್ಪಕ ಸ್ಥಿತಿ ಹಾಗೂ ಜಿಲ್ಲಾಡಳಿತದ ಅಸಡ್ಡೆಯ ಬಗ್ಗೆ ಹೊಸ ನಾವಿಕ ಕನ್ನಡ ದಿನಪತ್ರಿಕೆ ಮತ್ತು ವೆಬ್‌ಸೈಟ್‌ನಲ್ಲಿ ಚಿತ್ರಸಹಿತ ಸುದ್ದಿ ಪ್ರಕಟಿಸಲಾಗಿತ್ತು. ಈ ಸುದ್ದಿಯು ಪತ್ರಿಕೆಯ ಓದುಗರು ಮತ್ತು ಸಾರ್ವಜನಿಕರಿಂದ ಪ್ರಶಂಸೆಗೆ ಒಳಪಟ್ಟಿತ್ತು ಹಾಗೂ ಸದರಿ ಸುದ್ದಿಯು ಕ್ಷಣಾರ್ಧದಲ್ಲಿ ಜಿಡಳಿತದ ಗಮನವೂ ಸೆಳೆದಿತು. ಸುದ್ದಿ ಓದಿದ ಕ್ಷಣದಿಂದಲೇ, ಜವಾಬ್ದಾರಿ ಹೊತ್ತ ಜಿಲ್ಲಾಡಳಿತ ಎಚ್ಚೆತ್ತುಕೊಂಡಿತು.


ಹೊಸನಾವಿಕ ಪತ್ರಿಕೆಯಲ್ಲಿ ಪ್ರಕಟಗೊಂಡಿದ್ದ ಸುದ್ದಿಗೆ ತಕ್ಷಣವೇ ಸ್ಪಂದಿಸಿದ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು, ಆಡಳಿತ ವಿಭಾಗದ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಚಾಟಿ ಬೀಸಿದರಲ್ಲದೆ ಶಿಸ್ತಿನ ಪಾಠ ಮಾಡಿದ ಪರಿಣಾಮ ಆ ಕ್ಷಣದಿಂದಲೇ ಪರಿಸ್ಥಿತಿ ಬದಲಾಗತೊಡಗಿತು. ಆಡಳಿತ ವಿಭಾಗದ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಹೊಸನಾವಿಕ ಪತ್ರಿಕೆಯನ್ನು ತೋರಿಸಿ ಖಡಕ್ ಎಚ್ಚರಿಕೆ ನೀಡಿದರು.
ತಮ್ಮ ಹೊಣೆಗಾರಿಕೆಯನ್ನು ಅರಿತ ಸಿಬ್ಬಂದಿಗಳು ತಕ್ಷಣವೇ ಕಾರ್ಯ ಪ್ರವೃತ್ತರಾಗಿ, ಶೌಚಾಲಯದೊಳಗೆ ದಾಸ್ತಾನು ಮಾಡಲಾಗಿದ್ದ ಅವಧಿ ಮುಗಿದ ನೂರಾರು ಸ್ಯಾನಿಟೈಸರ್‌ಗಳ ಬಾಕ್ಸ್‌ಗಳನ್ನು ತೆರವು ಗೊಳಿಸಿ, ಒಂದೇ ದಿನದಲ್ಲಿ ಶೌಚಾಲಯವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿದರು. ನೆಲದ ಮೂಲೆಗಳಲ್ಲಿ ಹರಡಿ ಎಲ್ಲೆಂದರಲ್ಲಿ ಬಿದ್ದಿದ್ದ ಅವಧಿ ಮೀರಿದ ಸಾಮಗ್ರಿಗಳು ಮತ್ತು ಶೌಚಾಲಯದ ಕೊಳಕು ಮಾಯವಾಗಿ ಸ್ವಚ್ಛತೆ- ಶಿಸ್ತಿನ ಸಂಕೇತವಾಗಿ ಪರಿವರ್ತಿತವಾಗಿ ಇದೀಗ ಹೊಚ್ಚ ಹಸದರಂತೆ ಹೊಳೆಯುತ್ತಿದೆ ಮತ್ತು ಶೌಚಾಲಯದೊಳಗೆ ಹೊಸ ಚೈತನ್ಯ, ಸ್ವಚ್ಛತೆ ಮತ್ತು ಶಿಸ್ತಿನ ವಾತಾವರಣ ನೆಲೆಸಿದೆ.
ಇದೇ ಪತ್ರಿಕೋದ್ಯಮದ ನಿಜ ವಾದ ಉದ್ದೇಶ. ಸಮಾಜದಲ್ಲಿನ ಅಶಿಸ್ತು- ಭಷ್ಟಾಚಾರದ ವಿರುದ್ಧ ಚಾಟಿ ಬೀಸುವ ಮೂಲಕ ಶಿಸ್ತು, ಜವಾಬ್ದಾರಿ ಮತ್ತು ಸಮಯ ಪ್ರeಯನ್ನು ಬೆಳೆಸು ವುದು ಎಂಬುದಕ್ಕೆ ಜೀವಂತ ಉದಾ ಹರಣೆ. ಹೊಸ ನಾವಿಕ ಪ್ರಕಟಿಸಿದ ಸುದ್ದಿಗೆ ಓದುಗರೂ ಪ್ರಾಮಾಣಿಕವಾಗಿ ಸ್ಪಂದಿಸಿರುವುದು ಹರ್ಷದ ಸಂಗತಿ ಯಾಗಿದ್ದು, ಪತ್ರಿಕೆಯು ಮತ್ತೊಮ್ಮೆ ತನ್ನ ಶಕ್ತಿ ಏನೆಂದು ತೋರಿಸಿದೆ. ಪತ್ರಿಕೆಯ ಒಂದು ಜನಪರ ಕಾಶಜಿಯ ನೈಜ ಸುದ್ದಿ ಜನಪ್ರತಿನಿಧಿಗಳು ಮತ್ತು ಅಧಿಕಾರಿ ಗಳನ್ನು ನಿದ್ರೆಯಿಂದ ಎಬ್ಬಿಸುವ ಮೂಲಕ ಸಾರ್ವಜನಿಕ ಹಿತಕ್ಕಾಗಿ ತಕ್ಷಣದ ಬದಲಾವಣೆ ತರುತ್ತದೆ. ಓದುಗರೂ ತಮ್ಮ ಸುತ್ತಮುತ್ತ ನಡೆ ಯುವ ಅಸಮರ್ಪಕತೆ, ಅಸಮಾಧಾನ ಕಾರಿ ಪರಿಸ್ಥಿತಿ ಹಾಗೂ ಸಾರ್ವಜನಿಕ ಹಿತಾಸಕ್ತಿಯ ವಿಚಾರ ಗಳನ್ನು ಪತ್ರಿಕೆ ಯೊಂದಿಗೆ ಹಂಚಿಕೊಂಡರೆ, ನಮ್ಮ ಸಮಾಜವನ್ನು ಇನ್ನಷ್ಟು ಸ್ವಚ್ಛ, ಜವಾಬ್ದಾರಿ ಯುತ ಹಾಗೂ ಜಗೃತಗೊಳಿಸಬ ಹುದು.
ಹೊಸ ನಾವಿಕ ಪತ್ರಿಕೆ ಓದುಗರ ಸಹಕಾರ,ಜಿಲ್ಲಾಡಳಿತದ ಸ್ಪಂದನೆ ಮತ್ತು ಸಮಯೋಚಿತ ಕ್ರಮ ಇವೆಲ್ಲವೂ ಸೇರಿ ಈ ಯಶಸ್ಸಿನ ಕಥೆಯನ್ನು ರಚಿಸಿವೆ. ಇದೇ ಶಕ್ತಿ, ಇದೇ ನಂಬಿಕೆ ನಮ್ಮ ಪತ್ರಿಕೋದ್ಯಮದ ಪ್ರೇರಣೆ.
ಇದು ಕೇವಲ ಒಂದು ಸ್ವಚ್ಛತಾ ಕಾರ್ಯವಲ್ಲ; ಇದು ಪತ್ರಿಕೋದ್ಯ ಮದ ಶಕ್ತಿಯ ಜೀವಂತ ಉದಾಹರಣೆ. ಜನರ ಕಣ್ಣಿನ ಮುಂದೆ ಅಡಗಿದ ಅಸಮರ್ಪಕತೆ ಬೆಳಕಿಗೆ ಬರಲು ಪತ್ರಿಕೆಯ ನಿರಂತರ ಹೋರಾಟವೇ ಕಾರಣ. ನಮ್ಮ ಧ್ವನಿಗೆ ಸ್ಪಂದಿಸಿ ಬದಲಾವಣೆಯನ್ನು ತಂದ ಜಿಧಿಕಾರಿಗಳ ತ್ವರಿತ ನಿರ್ಧಾರ, ಅಧಿಕಾರಿಗಳ ಚುರುಕು ಮತ್ತು ಸಿಬ್ಬಂದಿಯ ಪರಿಶ್ರಮ ಎಲ್ಲರೂ ಶ್ಲಾಘನೆಗೆ ಅರ್ಹರು.
ಹೊಸ ನಾವಿಕ ಪತ್ರಿಕೆಗೆ ಇದು ಮತ್ತೊಂದು ನೆನಪಿನ ದಿನ. ಜನಪರ ಹೋರಾಟದಲ್ಲಿ ಮತ್ತೊಂದು ಗೆಲುವು. ಓದುಗರ ನಂಬಿಕೆ ಮತ್ತು ಬೆಂಬಲವೇ ನಮಗೆ ಶಕ್ತಿ; ಆ ಶಕ್ತಿಯಿಂದಲೇ ನಾವು ಪ್ರತಿಯೊಂದು ಸಣ್ಣ ಸಣ್ಣ ಸಮಸ್ಯೆಗೂ ಬೆಳಕು ಚೆಲ್ಲುತ್ತೇವೆ, ಬದಲಾವಣೆಯ ಬೀಜ ಬಿತ್ತುತ್ತೇವೆ. ಈ ಘಟನೆ ಪತ್ರಿಕೆಯ ಶಕ್ತಿ ಹಾಗೂ ಜನಮಾಧ್ಯಮದ ಸಾಮಾಜಿಕ ಜವಾಬ್ದಾರಿಯ ಸಾಕ್ಷಿ. ಓದುಗರ ಬೆಂಬಲ ಮತ್ತು ನಂಬಿಕೆ ನಮ್ಮ ಬರವಣಿಗೆಗೆ ಜೀವ ಮತ್ತು ಆಡಳಿತದ ತ್ವರಿತ ಸ್ಪಂದನೆಗೆ ಶ್ಲಾಘನೆ ಸಲ್ಲಿಸಲೇಬೇಕು. ಹೊಸ ನಾವಿಕ ತನ್ನ ಧ್ಯೇಯವಾದ ಜನಪರ ಧ್ವನಿಯನ್ನು ಮುಂದುವರಿಸುತ್ತಲೇ ಇರುತ್ತದೆ.
ಕೊನೆಯ ಮಾತು: ಪ್ರತಿಯೊಬ್ಬ ನಾಗರಿಕನೂ ಕೂಡ ಸಾರ್ವಜನಿಕ ಆಸ್ತಿ-ಪಾಸ್ತಿಗಳ ರಕ್ಷಣೆಗೆ ಮುಂದಾಗಬೇಕು. ಸಾರ್ವಜನಿಕ ಸ್ಥಳಗಳನ್ನು ಸ್ವಚ್ಚವಾಗಿಡುವುದು ಕೇವಲ ಸರ್ಕಾರದ ಕರ್ತವ್ಯವಲ್ಲ. ನಮ್ಮೆಲ್ಲರ ಜವಾಬ್ದಾರಿ ಎಂಬುದನ್ನು ಅರಿಯಬೇಕಿದೆ.
ಅಂತೆಯೇ ಸಾರ್ವಜನಿಕ ಶೌಚಾಲಯಳನ್ನು ಬಳಸಿಕೊಂಡು ಸರಿಯಾಗಿ ನೀರು ಹಾಕದೆ, ಎಲ್ಲೆಂದರಲ್ಲಿ ಉಗಿಯುವುದು, ಮೂತ್ರ ವಿಸರ್ಜನೆಗೆ ಇಟ್ಟಿಗೆ ಬಳಸುವ ಕೆಲವರು ಅದನ್ನು ಅಲ್ಲೇ ಎಸೆಯುವುದು ಖಂಡನಾರ್ಹವಾಗಿದ್ದು, ಈ ರೀತಿ ದುರ್ಬಳಗೆ ಮಾಡಿಕೊಳ್ಳದೇ ಬಳಸಿದ ನಂತರ ಸರಿಯಾಗಿ ನೀರು ಹಾಕಿ ಸ್ವಚ್ಚತೆ ಕಾಪಾಡಿಕೊಳ್ಳಬೇಕು. ಈ ರೀತಿಯ ಯೋಗ್ಯತೆ ಮತ್ತು ಅರ್ಹತೆ ಇರುವವರು ಮಾತ್ರ ಸಾರ್ವಜನಿಕ ಶೌಚಾಲಯ ಬಳಸಿ ಇಲ್ಲದಿದ್ದರೆ ನಿಮ್ಮ ಮನೆಯಲ್ಲಿ ನಿಮ್ಮಿಷ್ಠದಂತೆ ಇರಿ.
ಇದೇ ಜನಮೆಚ್ಚಿನ ಪತ್ರಿಕೆಯ ಶಕ್ತಿ, ಇದೇ ಜನಪ್ರತಿನಿಧಿ ಆಡಳಿತದ ಜವಾಬ್ದಾರಿ, ಇದೇ ಓದುಗರ ಸಹಕಾರದ ಮಲ್ಯ. ಹೊಸ ನಾವಿಕ ತನ್ನ ಧ್ವನಿಯನ್ನು ಮುಂದುವರಿಸುತ್ತಾ, ಜನಪರ ಹಿತಾಸಕ್ತಿಯ ಹೋರಾಟದಲ್ಲಿ ಸದಾ ಮುಂಚೂಣಿಯಲ್ಲಿರುತ್ತದೆ.