ಜಿಲ್ಲಾ ಸುದ್ದಿತಾಜಾ ಸುದ್ದಿ

ಬಸವನಗದ್ದೆ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಉಚಿತ ನೋಟ್‌ಬುಕ್ ವಿತರಿಸುವ ಮೂಲಕ ಸ್ವಾತಂತ್ರ್ಯೋತ್ಸವ ಆಚರಣೆ

Share Below Link

ತೀರ್ಥಹಳ್ಳಿ : ತಾಲೂಕಿನ ಬಸವನಗz ಕಿರಿಯ ಪ್ರಾಥಮಿಕ ಶಾಲೆಯಲ್ಲಿ ೭೯ ನೇ ಸ್ವಾತಂತ್ರ್ಯ ದಿನವನ್ನು ಧ್ವಜರೋ ಹಣ ಮಾಡಿ ಆಚರಿಸಲಾಯಿತು.
ಎಸ್‌ಡಿಎಮ್‌ಸಿ ಅಧ್ಯಕ್ಷ ಅರವಿಂದ್ ಅವರು ಧ್ವಜಾರೋ ಹಣ ನೆರವೇರಿಸಿuದರು. ಸದಸ್ಯ ರಾದ ಕಾವ್ಯ ಸುಬ್ರಮಣ್ಯ, ಚಂದ್ರ, ಶಾರದಾ ರಂಜಿತ, ಮಂಜುನಾಥ, ಹಣಗೆರೆ ಗ್ರಾಮ ಪಂಚಾಯಿತಿ ಸದಸ್ಯರಾದ ಶ್ರೀಮತಿ ಸರೋಜ, ಈಶ್ವರ್, ಹಳೆಯ ವಿಧ್ಯಾರ್ಥಿಗಳ ಸಂಘದ ಅಧ್ಯಕ್ಷ ಸತೀಶ್ ಸೇರಿದಂತೆ ಗ್ರಾಮಸ್ಥರು ಪೋಷಕರು ಭಾಗವಹಿ ಸಿದ್ದು ದೇಶಭಿಮಾನದ ನುಡಿಗಳನ್ನು ಮಕ್ಕಳಿಗೆ ತಿಳಿಸಿದರು. ಮಕ್ಕಳು ಭಾಷಣ ದೇಶಭಕ್ತಿ ಗೀತೆ ಹಾಡಿ ಸ್ಮರಿಸಿದರು.ಶಿಕ್ಷಕಿ ಅನಿತ ಸೂರ್ಯ ಅವರು ಕಾರ್ಯಕ್ರಮ ಆಯೋಜಿಸಿ ಬೆಂಗಳೂರು ವಿಜಯನಗರದ ಮಾರುತಿ ಮೆಡಿಕಲ್ಸ್‌ನ ಮಹೇಂದ್ರ ಮುನ್ನೋತ್ ಅವರು ನೀಡಿದ ನೋಟ್ ಬುಕ್‌ಗಳನ್ನು ಮಕ್ಕಳಿಗೆ ವಿತರಿಸಿದರು.
ಶಿವಮೊಗ್ಗ ತಾಲೂಕಿನ ಹರಕೆರೆ ರಾಮೇನಕೊಪ್ಪ, ಚೋರಡಿ, ತೀರ್ಥಹಳ್ಳಿ ತಾಲೂಕಿನ ಬಸವನಗz, ಕಿಕ್ಕೇರಿ ಶಾಲೆಗಳಿಗೆ ಉಚಿತ ನೋಟ್ ಬುಕ್ ತರಿಸಿ ವಿತರಿಸುವ ಸಾಮಾಜಿಕ ಶೈಕ್ಷಣಿಕ ಕಾರ್ಯವನ್ನು ಮಾಡುತ್ತಿರುವ ಶಿಕ್ಷಕಿ ಶ್ರೀಮತಿ ಅನಿತ ಸೂರ್ಯ ಅವರ ಕಾರ್ಯವನ್ನು ಎಸ್‌ಡಿಎಮ್‌ಸಿ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ಗ್ರಾಮಸ್ಥರು ಶ್ಲಾಘ್ಹಿಸಿದರು.
ಶಿಕ್ಷಕ ಚಂದ್ರನಾಯ್ಕ ಸ್ವಾಗತಿಸಿ ದರು. ಅನಿತಸೂರ್ಯ ಕಾರ್ಯ ಕ್ರಮ ನಿರೂಪಿಸಿ ವಂದಿಸಿದರು.