ಸಾವಿನ ಅಂಚಿನಿಂದ ಮಹಿಳೆಯನ್ನ ಪಾರು ಮಾಡಿದ ವೈದ್ಯರು…
ಶಿವಮೊಗ್ಗ : ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಾ ಸಾವಿನ ಅಂಚಿನಲ್ಲಿದ್ದ ಮಹಿಳೆಗೆ ಸುಧೀರ್ಘ ಶಸ್ತ್ರಚಿಕಿತ್ಸೆ ನಡೆಸಿ ಸಾವಿನ ಅಂಚಿನಿಂದ ಪಾರು ಮಾಡಿದ ದುರ್ಗಿಗುಡಿಯ ಮ್ಯಾಕ್ಸ್ ಆಸ್ಪತ್ರೆಯ ವೈದ್ಯರ ತಂಡ ಯಶಸ್ವಿಯಾಗಿದೆ.

ಸುಮಾರು ೩೫ ವರ್ಷದ ಮಹಿಳೆ ತೀವ್ರವಾದ ಹೊಟ್ಟೆನೋವಿನಿಂದ ಇದ್ದಕ್ಕಿದ್ದಂತೆ ನಿಯಂತ್ರಣಗೊಂಡಿದ್ದು, ಅವರಿಗೆ ಸಹಿಸಲು ಅಸಾಧ್ಯವಾದ ನೋವು ಕಾಣಿಸಿ ಕೊಂಡಿದ್ದರಿಂದ ನಮ್ಮ ಆಸ್ಪತ್ರೆಗೆ ದಾಖಲಾಗಿದ್ದು, ಉದರ ಶಸ್ತ್ರಚಿಕಿತ್ಸಾ ತಜ್ಞರು ಅವರನ್ನು ತಪಾಸಣೆ ಮಾಡಿದಾಗ ಅವರ ದೇಹದ ಅತ್ಯಂತ ಪ್ರಮುಖ ರಕ್ತನಾಳ ಊದಿ ಕೊಂಡು ಒಡೆದು ಹೋಗಿತ್ತು. ಅದರ ಪರಿಣಾಮವಾಗಿ ತೀವ್ರ ಸ್ವರೂಪದ ರಕ್ತಸ್ರಾವದಿಂದ ಜೀವಾ ಪಾಯಕ್ಕೆ ತೊಂದರೆಯಾಗಿತ್ತು ಹಾಗೂ ರೋಗಿಯ ರಕ್ತದೊತ್ತಡ ಕಡಿಮೆಯಾಗುತ್ತಿತ್ತು. ವೈದ್ಯರ ತಂಡ ತುರ್ತುಶಸ್ತ್ರಚಿಕಿತ್ಸೆಯ ನಿರ್ಧಾರ ಕೈಗೊಂಡು, ಮಹಿಳೆಯ ಸಂಬಂಧಿಗಳ ಅನುಮತಿ ಪಡೆದು ತಕ್ಷಣವೇ ರಕ್ತಟ್ರಾನ್ಸೂಷನ್ ಮಾಡಿ ರಕ್ತದ ಒತ್ತಡವನ್ನು ಕಡಿಮೆಮಾಡುವ ಹಾಗೂ ಶಸ್ತ್ರಚಿಕಿತ್ಸೆ ನಡೆಸಿ, ಜೀವ ಉಳಿಸುವ ಹೊಣೆ ಹೊತ್ತು ಸುಮಾರು ೫ ಗಂಟೆಯ ಶಸ್ತ್ರ ಚಿಕಿತ್ಸೆ ಯ ನಂತರ ರೋಗಿ ಅಪಾಯದಿಂದ ಮಹಿಳೆ ಪಾರಾಗಿ ಗುಣಮುಖ ರಾಗಿzರೆ ಎಂದು ಆಸ್ಪತ್ರೆಯ ಹೃದ್ರೋಗ ವಿಭಾಗದ ಡಾ.ಸುಧೀರ್ಭಟ್ ಇಂದು ಪತ್ರಿಕಾಗೋಷ್ಠಿ ಯಲ್ಲಿ ತಿಳಿಸಿದರು.

ರೋಗಿಗೆ ಶಸ್ತ್ರಚಿಕಿತ್ಸೆಯ ನಂತರ ದ ತೀವ್ರ ನಿಗಾ ಅವಶ್ಯಕವಿತ್ತು. ಇನ್ಟೆನ್ಸಿವ್ ಕೇರ್ ತಜ್ಞರ ಉಸ್ತುವಾರಿ ಯಲ್ಲಿ ಅಂತಿಮವಾಗಿ ಈ ಘಟ್ಟವನ್ನು ಸಹ ದಾಟಿ ರೋಗಿ ನಿಶ್ಚಿತ ಮೃತ್ಯುವಿನಿಂದ ಪಾರಾಗಿ ಗುಣಮು ಖರಾದರು. ಸಾಧಾರಣವಾಗಿ ಅಂತಹ ಘಟ್ಟವನ್ನು ಮುಟ್ಟುವ ಮೊದಲು ರೋಗ ಪತ್ತೆಯಾಗದೆ ಅದನ್ನು ಶಸ್ತ್ರಚಿಕಿತ್ಸೆಯಿಂದ ಗುಣ ಮಾಡಬಹುದು. ಈ ಸಂದರ್ಭ ದಲ್ಲಿ ರೋಗಿಗೆ ಯಾವುದೇ ಖಾಯಿಲೆಯ ಲಕ್ಷಣ ಗಮನಕ್ಕೆ ಬಾರದ ಕಾರಣ ಕೊನೆಯ ಹಂತದಲ್ಲಿ ತುರ್ತು ಶಸ್ತ್ರಚಿಕಿತ್ಸೆ ಅವಶ್ಯಕವಾಗಿರುತ್ತದೆ ಎಂದರು.
ಶಸ್ತ್ರಚಿಕಿತ್ಸೆಗೊಳಗಾಗಿ ಗುಣಮುಖರಾದ ಶಿಕ್ಷಕಿ ಶ್ರೀಲಕ್ಷ್ಮೀ ಮಾತನಾಡಿ, ತೀವ್ರತರವಾದ ಹೊಟ್ಟೆನೋವಿನಿಂದಾಗಿ ನಾನು ಬದುಕುತ್ತೇನೆಂಬ ವಿಶ್ವಾಸವನ್ನು ಕಳೆದುಕೊಂಡಿz. ನಾನು ಮ್ಯಾಕ್ಸ್ ಆಸ್ಪತ್ರೆಗೆ ದಾಖಲಾಗಿ ಡಾ.ಸುಧೀಂದ್ರಭಟ್ ಅವರ ತಂಡ ತೀವ್ರ ತಪಾಸಣೆ ನಡೆಸಿ ಕ್ಲಿಷ್ಟಕರವಾಗಿ ಶಸ್ತ್ರಚಿಕಿತ್ಸೆ ಮಾಡಿದ ಪರಿಣಾಮ ಸಾವಿನ ಅಂಚಿನಲ್ಲಿದ್ದ ನಾನು ಪ್ರಾಣ ಉಳಿದಿದೆ. ನನ್ನ ಪ್ರಾಣ ಉಳಿಸಿದ ವೈದ್ಯರ ತಂಡ ಹಾಗೂ ಸಿಬ್ಬಂದಿಗಳಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಆಸ್ಪತ್ರೆ ಯ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕಿ ಲತಾ ನಾಗೇಂದ್ರ, ವೈದ್ಯರಾದ ಡಾ.ವಿನಯಾ ಶ್ರೀನಿವಾಸ್, ಅರವಳಿಕೆ ತಜ್ಞ ಡಾ. ಶ್ರೀನಿವಾಸ್, ಹೃದ್ರೋಗ ಶಸ್ತ್ರಚಿಕಿತ್ಸಾ ತಜ್ಞ ಡಾ.ರಾಕೇಶ್, ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಕೌಶಿಕ್ ಮೊದಲಾದವರು ಉಪಸ್ಥಿತರಿ ದ್ದರು.
