ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯಲೇಖನಗಳು

ಫಿನಿಕ್ಸ್‌ನಂತೆ ಪುಟಿದೆದ್ದು ರಾಜಕೀಯ ಉತ್ತರಾಧಿಕಾರದಿಂದ ಸಮಾಜಮುಖಿ ನಾಯಕತ್ವದತ್ತ ನಿಖಿಲ್ ಕುಮಾರಸ್ವಾಮಿ…

Share Below Link

(ವಿಶೇಷ ಲೇಖನ: ರಾಕೇಶ್ ಡಿಸೋಜ- ಮೊಬೈಲ್ : ೯೪೮೨೪೮೨೧೮೨/ ೯೪೪೮೩೪೩೨೧೧)
ದೇಶದ ರಾಜಕೀಯ ನಕ್ಷೆಯಲ್ಲಿ ತನ್ನದೇ ಆದ ಸ್ಥಾನವನ್ನು ಹೊಂದಿರುವ ಜಾತ್ಯಾತೀತ ಜನತಾದಳ ಪಕ್ಷಕ್ಕೆ ಈಗ ಯುವ ಚೇತನದ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ನಿಖಿಲ್ ಕುಮಾರಸ್ವಾಮಿ ಎಂಬ ಹೆಸರು ಈಗ ಜೆಡಿಎಸ್‌ನ ಭವಿಷ್ಯವೆಂದು ಪ್ರಸಕ್ತ ರಾಜಕೀಯ ವಲಯದಲ್ಲಿ ಪ್ರಸ್ತಾಪವಾಗುತ್ತಿದೆ.


ರಾಜ್ಯದ ಮಣ್ಣಿನ ಮಗ ಖ್ಯಾತಿಯ ರಾಜಕೀಯ ಪಿತಾಮಹ ಹೆಚ್.ಡಿ. ದೇವೇಗೌಡರ ಮೊಮ್ಮಗ, ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರ ಸುಪುತ್ರ ಎಂಬ ಲೇಬಲ್‌ನಿಂದಲೇ ನಿಖಿಲ್ ಕುಮಾರಸ್ವಾಮಿ ಅವರ ಹೆಸರು ರಾಜ್ಯ ರಾಜಕೀಯದಲ್ಲಿ ಪ್ರಸಿದ್ದಿಗೆ ಬಂದಿರುವುದು ನಿಜ.
ಆದರೆ ಪಿತೃಪಾರಂಪರ್ಯಕ್ಕೆ ಸೀಮಿತವಿಲ್ಲದೇ ನಿಖಿಲ್ ಅವರು ತಮ್ಮದೇ ಆದ ರಾಜಕೀಯ ಗುರುತನ್ನು ರೂಪಿಸಲು ಈಗ ಹೊಸ ಯತ್ನವನ್ನು ನಡೆಸುವ ಮೂಲಕ ರಾಜಕೀಯವಾಗಿ ಮೇಲ್ಪಂಕ್ತಿಗೆ ಬಂದು ನಿಂತಿದ್ದು, ತಮ್ಮದೇ ಆದ ಗುರುತಿಗಾಗಿ ಹೆಜ್ಜೆ ಹಾಕುತ್ತಿzರೆ.
ಹಳೆಯ ತಲೆಮಾರಿನ ರಾಜಕೀಯದಿಂದ ಹೊಸ ತಲೆಮಾರಿನ ನವ ಜೈತನ್ಯದತ್ತ ಹೆಜ್ಜೆ ಇಡುವ ಪ್ರಕ್ರಿಯೆಯಲ್ಲಿ ನಿಖಿಲ್ ಕುಮಾರಸ್ವಾಮಿ ರಾಜ್ಯ ರಾಜಕೀಯದಲ್ಲಿ ಪ್ರಮುಖ ಪಾತ್ರ ವಹಿಸುತ್ತಿzರೆ.
ಚಿತ್ರರಂಗದಿಂದ ಚುನಾವಣಾ ರಣರಂಗವರೆಗೆ: ನಿಖಿಲ್ ಕುಮಾರಸ್ವಾಮಿ ಅವರು ತಮ್ಮ ವೃತ್ತಿಜೀವನವನ್ನು ಮೊದಲಿಗೆ ಚಿತ್ರರಂಗದಲ್ಲಿ ಪ್ರಾರಂಭಿಸಿದರು. ಜಾಗ್ವಾರ್ ಚಿತ್ರದ ಮೂಲಕ ಸಿನೆಮಾ ಲೋಕಕ್ಕೆ ಪಾದಾರ್ಪಣೆ ಮಾಡಿದ ಅವರು, ಯುವಕರ ಮಧ್ಯೆ ಕೆಲ ಮಟ್ಟಿಗೆ ಖ್ಯಾತಿ ಗಳಿಸಿದರು. ಆದರೆ ಅವರಿಗೆ ನಿಜವಾದ ಆಸಕ್ತಿ ಚಲನಚಿತ್ರವಲ್ಲ; ಬದಲಿಗೆ ಜನಸೇವೆ, ಸಾಮಾಜಿಕ ಜವಾಬ್ದಾರಿ ಮತ್ತು ರಾಜಕೀಯ ಎಂಬುದಾಗಿ ಅನೇಕ ಸಂದರ್ಶನಗಳಲ್ಲಿ ಅವರೇ ಸ್ವತಃ ಸ್ಪಷ್ಟವಾಗಿ ಹೇಳಿzರೆ.
ಸತತ ಮೂರು ಚುನಾವಣೆಯಲ್ಲಿ ಸ್ಪರ್ಧಿಸಿ ಸೋತರೂ, ಅವರು ರಾಜಕೀಯದಿಂದ ಹಿಂದೆ ಸರಿಯದೆ, ಪಕ್ಷ ಸಂಘಟನೆಯಲ್ಲಿ ಸಕ್ರಿಯರಾಗುವ ನಿರ್ಧಾರ ತೆಗೆದುಕೊಂಡರು. ಚುನಾವಣೆಗಳಲ್ಲಿ ಸೋಲು ಅನುಭವಿಸಿದರೂ, ನಿಖಿಲ್ ಕುಗ್ಗಿಲ್ಲ; ಬದಲಾಗಿ ಅವರು ಮತ್ತಷ್ಟು ಕ್ರಿಯಾಶೀಲರಾಗುವ ಮೂಲಕ ಸಮಾಜಸೇವೆ ಹಾಗೂ ಸಂಘಟನೆಯ ಕೆಲಸಗಳತ್ತ ಮುಖ ಮಾಡಿದರು. ಈ ಪಾಠಗಳು ಅವರನ್ನು ಇನ್ನಷ್ಟು ಪಾಸಿಟಿವ್ ಆಗಿಸಿ, ಭವಿಷ್ಯದ ನಾಯಕರಾಗಿ ತಯಾರಿಸುತ್ತಿವೆ. ಅವರ ಸಕ್ರಿಯ ರಾಜಕೀಯ ಜೀವನದ ಮುಖಪುಟ ತೆರೆದ ಈ ಸೋಲು ಅವರನ್ನು ಕಂಗೆಡಿಸದೆ, ಮತ್ತಷ್ಟು ಶಕ್ತಿಯುತ ನಾಯಕರಾಗಿ ರೂಪಿಸುತ್ತಿದೆ.
ಸಿನಿಮಾ ಮತ್ತು ರಾಜಕೀಯ ಎರಡೂ ಜನರ ಮನಸ್ಸು ಗೆಲ್ಲುವ ಕಲೆಯ ಮೇಲಿರುವ ಕ್ಷೇತ್ರಗಳು. ಆದರೆ ರಾಜಕೀಯದಲ್ಲಿ ನಿರಂತರ ಚಲನೆಯ ಜೊತೆಗೆ ನಿಭಾಯಿಸುವ ಸಾಮರ್ಥ್ಯವೂ ಬೇಕಾಗುತ್ತದೆ. ಈಗ ನಿಖಿಲ್ ಪುಟಿದೇಳುತ್ತಿzರೆ. ಆದರೆ ಅವರು ಶಾಶ್ವತವಾಗಿ ಗುರಿ ತಲುಪಬೇಕಾದರೆ ಧೈರ್ಯದಿಂದ ದಿಟ್ಟ ಹೆಜ್ಜೆಗಳ ಅಗತ್ಯವಿದೆ.
ಫಿನಿಕ್ಸ್‌ನಂತೆ ಮೇಲೆದ್ದ ನಿಖಿಲ್: ರಾಜಕೀಯಕ್ಕೆ ಎಂಟ್ರಿ ಕೊಡುತ್ತಿದ್ದಂತೆಯೇ ಸೋಲಿನ ಸರಮಾಲೆ ನಿಖಿಲ್ ಅವರನ್ನು ಸುತ್ತಿಕೊಂಡರೂ ಧೃತಿಗೆಡದ ಅವರು, ಫಿನಿಕ್ಸ್‌ನಂತೆ ಎದ್ದು ನಿಂತಿದ್ದಾರೆ.
ಅಪ್ಪ ಎಚ್.ಡಿ. ಕುಮಾರಸ್ವಾಮಿ, ತಾತ ಎಚ್.ಡಿ. ದೇವೇಗೌಡರ ಹೊರೆತು, ಅವರದೇ ಆದ ರಾಜಕೀಯ ಪಥವನ್ನು ನಿಖಿಲ್ ನಿರ್ಮಿಸಲು ಹೊರಟಿzರೆ.


ಪಕ್ಷದ ಸಧೃಢತೆಗೆ ಯುವ ಶಕ್ತಿ: ಜೆಡಿಎಸ್ ಪಕ್ಷದ ಹಳೆಯ ಶಕ್ತಿಗೆ ನಿಖಿಲ್‌ನಂತಹ ಯುವ ನೇತೃತ್ವದ ಅವಶ್ಯಕತೆ ಇದೆ. ದೇವೇಗೌಡರ ರಾಜಕೀಯ ಪರಂಪರೆಯ ಮುಂದುವರಿಕೆಯಾಗಿ ನಿಖಿಲ್ ಅವರು ಪ್ರಸ್ತುತ ಯುವ ಘಟಕದ ರಾಜಧ್ಯಕ್ಷರಾಗಿರುವುದು ಈ ದೃಷ್ಟಿಯಿಂದಲೇ ಮಹತ್ವದ ಬೆಳವಣಿಗೆಯಾಗಿದ್ದು ಮುಂದಿನ ದಿನಗಳಲ್ಲಿ ಅವರು ಪಕ್ಷದ ಚುಕ್ಕಾಣಿ ಹಿಡಿಯುವುದು ನಿಶ್ಚಿತವಾಗಿದೆ.
ಪಕ್ಷದ ಭವಿಷ್ಯ ಮತ್ತು ಯುವ ಶಕ್ತಿಯ ಜತೆಗೂಡಿಕೆ: ಯುವಜನತೆಗೆ ಕೇವಲ ಮೊಬೈಲ್ ಕರೆ ಮೂಲಕ ಪಕ್ಷದ ನಿಕಟತೆಯನ್ನು ತಲುಪಿಸಲು ನಿಖಿಲ್ ಮುಂದಾಗಿರುವ ಕ್ರಮವನ್ನು ಜೆಡಿಎಸ್‌ನ ಹೊಸ ಮಾದರಿಯ ರಾಜಕೀಯ ತಂತ್ರವನ್ನಾಗಿ ಪರಿಗಣಿಸ ಬಹುದು. ಆದರೆ ಈ ತಂತ್ರ ಸಮರ್ಥತೆಯಿಂದ ಜರಿಗೆ ಬರಬೇಕಾದರೆ, ಸಾಮಾಜಿಕ ಮತ್ತು ಭೌಗೋಳಿಕ ಪ್ರತ್ಯುತ್ತರಗಳನ್ನು ಆಳವಾಗಿ ಅರ್ಥಮಾಡಿಕೊಳ್ಳುವ ಕೌಶಲ್ಯ ಅಗತ್ಯವಾಗಿದ್ದು, ಅದರತ್ತ ನಿಖಿಲ್ ಗಮನಹರಿಸಿರುವುದು ವಿಶೇಷವಾಗಿದೆ.
ಫಿನಿಕ್ಸ್‌ನಂತೆ ಪುಟಿದೆದ್ದ ನಿಖಿಲ್ ಕುಮಾರಸ್ವಾಮಿಯ ಪ್ರವಾಸ ರಾಜಕೀಯದಲ್ಲಿ ನವ ಚೇತನ ಎಬ್ಬಿಸುವ ಪ್ರಯತ್ನವೂ ಹೌದು. ಆದರೆ ಈ ಚಲನೆಯಲ್ಲಿ ನಿಖಿಲ್ ಪಕ್ಷದ ಗಂಭೀರ ಸಮಸ್ಯೆಗಳಾದ ಸಂಘಟನೆಯ ಬಲಹೀನತೆ, ಗ್ರಾಮೀಣ ಜಲ ಹಾಗೂ ತಮ್ಮ ನಾಯಕತ್ವದ ಸ್ಪಷ್ಟತೆ ಎಂಬ ವಿಷಯಗಳತ್ತ ತ್ವರಿತವಾಗಿ ಗಮನಹರಿಸಬೇಕಿದೆ.
ನಾಯಕತ್ವಕ್ಕೆ ಹೊಸ ಶೈಲಿ: ನಿಖಿಲ್ ರಾಜಕೀಯದಲ್ಲಿ ಕೇವಲ ಕುಟುಂಬಪರಂಪರೆಯಿಂದಲೇ ಒತ್ತಾಸೆಯಾಗಿಲ್ಲ, ಅವರು ತಮ್ಮದೇ ಆದ ಶೈಲಿಯಲ್ಲಿ ಜನರ ಹೃದಯ ಗೆಲ್ಲುವ ಪ್ರಯತ್ನವನ್ನು ನಡೆಸುತ್ತಿzರೆ. ಆಕ್ರಮಣಕಾರಿ ಶೈಲಿಯ ಭಾಷಣಗಳು, ನೇರ ಜನಸಂಪರ್ಕ, ಸಾಮಾಜಿಕ ಮಾಧ್ಯಮದ ಪರಿಣಾಮಕಾರಿ ಬಳಕೆ ಇವೆಲ್ಲವೂ ಅವರನ್ನು ತಲೆಮಾರು ರಾಜಕಾರಣಿಗರಿಂದ ವಿಭಿನ್ನ ವ್ಯಕ್ತಿತ್ವವನ್ನಾಗಿ ಮಾಡಿವೆ.
ಚುನಾವಣೆಗಳ ಪಾಠಗಳು ಸೋಲಿನಿಂದ ಸಾಧನೆಯೆಡೆಗೆ: ಇದೊಂದು ಸುಲಭದ ಪಥವಲ್ಲ. ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ಬೃಹತ್ ಶಕ್ತಿಯ ನಡುವೆ, ಜೆಡಿಎಸ್ ಪಕ್ಷದ ಪುನಶ್ಚೇತನಕ್ಕೆ ನಿಖಿಲ್ ಅವರು ತಮ್ಮ ನಾಯಕತ್ವ, ತಂತ್ರ ಹಾಗೂ ನೈಜ ಸಮೀಪದ ರಾಜಕೀಯವನ್ನು ಬಳಸಿಕೊಳ್ಳಬೇಕಿದೆ. ಈ ಹಾದಿಯಲ್ಲಿ ಸವಾಲುಗಳು ಬಹಳ, ಆದರೆ ಅವಕಾಶಗಳೂ ಅಪಾರ.
ವ್ಯಕ್ತಿತ್ವದಿಂದ ವ್ಯೂಹದ ಕಡೆಗೆ: ನಿಖಿಲ್ ಕುಮಾರಸ್ವಾಮಿ ರಾಜಕೀಯ ಪ್ರವೇಶದ ಆರಂಭದಲ್ಲಿ ಸಿನಿಮಾ ಹಿನ್ನೆಲೆಯ ಯುವ ಮುಖವನ್ನೇ ಜನರು ಗಮನಿಸಿದರು. ಆದರೆ ಇದೀಗ ಅವರು ತಮ್ಮನ್ನು ಭಿನ್ನ ರಾಜಕೀಯ ಶೈಲಿಯ ಯುವ ನಾಯಕನಾಗಿ ಸ್ಥಾಪಿಸಲು ಪ್ರಯತ್ನಿಸು ತ್ತಿzರೆ. ಜೆಡಿಎಸ್ ಪಕ್ಷದ ಭವಿಷ್ಯ ವನ್ನು ತಮ್ಮ ಭುಜಗಳ ಮೇಲೆ ಹೊತ್ತಿರುವಂಥ ಭಾವನೆ ಅವರ ವಾಕ್‌ಚಾತುರ್ಯ, ಪ್ರವಾಸದ ಉತ್ಸಾಹ ಹಾಗೂ ಜನಜಗೃತಿ ಅಭಿಯಾನಗಳಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ.
ಮಿಸ್ ಕಾಲ್ ಅಭಿಯಾನದ ಸದ್ದು : ನಿಖಿಲ್ ಕುಮಾರಸ್ವಾಮಿ ಆರಂಭಿಸಿರುವ ಮಿಸ್ ಕಾಲ್ ಅಭಿಯಾನವು ರಾಜ್ಯದಾದ್ಯಂತ ಯುವಜನತೆಯ ನಡುವೆ ನಿಖಿಲ್ ಅವರ ಜನಪ್ರೀಯತೆಯನ್ನು ಮತ್ತಷ್ಟು ವೃದ್ಧಿಸಿದೆ. ಪ್ರತಿ ಜಿಯಲ್ಲಿ ಅವರ ಸಕ್ರಿಯ ಹಾಜರಾತಿ, ಸ್ಥಳೀಯ ಸಮಸ್ಯೆಗಳ ಬಗ್ಗೆ ಮಾಹಿತಿಗೆ ಪ್ರಾಮುಖ್ಯತೆ ನೀಡುವ ಕ್ರಮಗಳು ಅವರನ್ನು ಸಾಮಾನ್ಯ ರಾಜಕಾರಣಿಗಳಿಂದ ವಿಭಿನ್ನಪಡಿಸುತ್ತವೆ.
ಜೆಡಿಎಸ್ ಪಕ್ಷವು ಕಳೆದ ಕೆಲವು ವರ್ಷಗಳಿಂದ ಹತ್ತು ಹಲವು ಸವಾಲುಗಳನ್ನು ಎದುರಿಸುತ್ತಿದೆ. ಪಕ್ಷದ ಸಾಂಪ್ರದಾಯಿಕ ಮತದಾರರ ಶಿಫ್ಟ್, ಸಂಘಟನೆಯೊಳಗಿನ ಬಿರುಕು, ಜಿ ಮಟ್ಟದ ನಾಯಕರ ಪಾಳಯ ಬದಲಾವಣೆ ಮುಂತಾದ ಸಮಸ್ಯೆ ಗಳು. ಈ ಹೊತ್ತಿನಲ್ಲಿ ನಿಖಿಲ್ ಕುಮಾರಸ್ವಾಮಿ ಅವರನ್ನು ಪಕ್ಷದ ಯುವ ಘಕದ ರಾಜಧ್ಯಕ್ಷರನ್ನಾಗಿ ನೇಮಕ ಮಾಡಿರುವುದು ಕೇವಲ ರಾಜಕೀಯ ಪಾರಂಪರ್ಯವಲ್ಲ, ಮುಂದಿನ ತಲೆಮಾರಿಗೆ ನಾಯಕತ್ವ ಒಪ್ಪಿಸುವ ನಿಟ್ಟಿನಲ್ಲಿ ಒಂದು ತಂತ್ರಜ್ಞ ನಿರ್ಧಾರವಾಗಿದೆ.
ಪಕ್ಷದ ವರಿಷ್ಠರಾದ ಮಾಜಿ ಪ್ರಧಾನಿ ದೇವೇಗೌಡ ಮತ್ತು ಮಾಜಿ ಸಿಎಂ ಕುಮಾರಸ್ವಾಮಿ ಅವರ ನಿಧಾರ ಬಹುತೇಕ ಯಶಸ್ಸು ಕಂಡಿದೆ. ನಿಖಿಲ್ ಅವರು ಮಿಸ್ ಕಾಲ್ ಅಭಿಯಾನದ ಮೂಲಕ ಲಕ್ಷಾಂತರ ಯುವಕರನ್ನು ಪಕ್ಷಕ್ಕೆ ಸೆಳೆಯುವಲ್ಲಿ ಯಶಸ್ವಿಯಾಗುತ್ತಿದ್ದಾರೆ.
ಪ್ರತಿ ಜಿಯಲ್ಲಿ ಪಕ್ಷದ ಬೂತ್ ಮಟ್ಟದ ಬಲವನ್ನು ಹೆಚ್ಚಿಸಲು ನಿಖಿಲ್ ನಡೆಸುತ್ತಿರುವ ಯಾತ್ರೆಗಳು ಹಾಗೂ ಸಭೆ- ಸಮಾವೇಶಗಳು, ನೇರವಾಗಿ ಜನರ ಸಮಸ್ಯೆಗಳನ್ನು ಆಲಿಸುವ ಅವರ ಶೈಲಿ, ನಿಖಿಲ್ ಕುಮಾರಸ್ವಾಮಿ ಅವರಿಗೆ ನಾಯಕತ್ವದ ನೈಜ ಮಲ್ಯವಿದೆ ಎಂಬ ಭಾವನೆ ಪಕ್ಷ ಮತ್ತು ಸಾರ್ವಜನಿಕರಲ್ಲಿ ಮೂಡಿಸುತ್ತಿವೆ.
ನಿಖಿಲ್ ಕುಮಾರಸ್ವಾಮಿ ಅರಲ್ಲಿ ಕಾಣುವ ನಾಯಕತ್ವ ಲಕ್ಷಣಗಳು: ಸಾವಧಾನಿ ಮತ್ತು ಶ್ರವಣಶಕ್ತಿ: ನಿಖಿಲ್ ಕುಮಾರಸ್ವಾಮಿ ಅವರು ಸಾರ್ವಜನಿಕ ಸಭೆಗಳಲ್ಲಿ ಮಾತನಾಡು ವಾಗ ಪ್ರತ್ಯುತ್ತರ ನೀಡುವ ಬದಲು ಕೇಳುವ ಹಾದಿಯನ್ನು ಹೆಚ್ಚು ಆಯ್ಕೆ ಮಾಡುತ್ತಾರೆ. ಇದು ತಲೆಮಾರು ರಾಜಕಾರಣಿಗಳಿಂದ ಭಿನ್ನವಾಗಿದೆ ಮತ್ತು ಎಲ್ಲರ ಗಮನಸೆಳೆಯಲಾರಂಭಿಸಿದೆ.
ಸಾಮಾಜಿಕ ಮಾಧ್ಯಮ ಚಟುವಟಿಕೆ: ಈ ಕಾಲದಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯತೆ ಪ್ರತಿಯೊಬ್ಬ ನಾಯಕನಿಗೆ ಅತ್ಯವಶ್ಯಕ. ಅಂತೆಯೇ ನಿಖಿಲ್ ಅವರು ಕೂಡ ಈ ಮೂಲಕ ತಮ್ಮ ಅಭಿಪ್ರಾಯ, ಕಾರ್ಯಕ್ರಮಗಳು ಹಾಗೂ ಜನ ಸಂಪರ್ಕವನ್ನು ಹೆಚ್ಚು ಸದೃಢ ಗೊಳಿಸುವತ್ತ ಗಮನಹರಿಸುತ್ತಿ ರುವುದು ಮತ್ತೊಂದು ವಿಶೇಷ.


ಸಂಘಟನಾತ್ಮಕ ಚಟುವಟಿಕೆ: ವಿಶೇಷವಾಗಿ ರಾಜಕೀಯ ಪಕ್ಷಗಳಿಗೆ ಸಂಘಟನೆಯೇ ಆಧಾರ ಸ್ಥಂಭವಿದ್ದಂತೆ. ಇದನ್ನರಿತ ನಿಖಿಲ್ ಕುಮಾರಸ್ವಾಮಿ ಅವರು ಕುಟುಂಬ ರಾಜಕೀಯದಿಂದ ಒಂದು ಹೆಜ್ಜೆ ಹೆರಗಿಟ್ಟು ಪಕ್ಷ ಸಂಘಟನೆಯಲ್ಲಿ ಸಕ್ರಿಯರಾಗುವ ಮೂಲಕ ಜಿಸ್ಥರದಿಂದ ಬೂತ್ ಮಟ್ಟದವರೆಗೆ ನಾಯಕರನ್ನು ಸಕ್ರಿಯಗೊಳಿಸಲು ನಿರಂತವಾಗಿ ವಿಶೇಷ ಸಭೆ, ತರಬೇತಿ ಶಿಬಿರಗಳು, ಯುವ ಸಮಾವೇಶಗಳ ಮೂಲಕ ಪಕ್ಷ ಸಂಘಟನೆಗೆ ಆದ್ಯತೆ ನೀಡಿದ್ದಾರೆ.
ನಿಖಿಲ್ ಅವರು ತಮ್ಮ ರಾಜಕೀಯ ಜೀವನದಲ್ಲಿ ಮುಂದೆ ಹೆಚ್ಚಿನ ಸವಾಲುಗಳನ್ನು ಎದುರಿಸ ಬೇಕಿದೆ. ಜೆಡಿಎಸ್‌ನ ಸಾಂಪ್ರದಾಯಿಕ ಮತಬುಟ್ಟಿಗೆ ರಾಷ್ಟ್ರೀಯ ಪಕ್ಷಗಳು ಕೈಹಾಕಿರುವುದರಿಂದ ಅದು ಬಹುತೇಕ ಇಳಿಕೆ ಕಂಡಿದೆ. ಕಾಂಗ್ರೆಸ್ ಮತ್ತು ಬಿಜೆಪಿಯ ಪ್ರಬಲ ಪ್ರಭಾವದ ನಡುವೆಯೇ ಜೆಡಿಎಸ್ ತನ್ನ ಪ್ರಭಾವ ಮತ್ತು ಅಸ್ಥಿತ್ವವವನ್ನು ಉಳಿಸಿಕೊಳ್ಳಬೇಕಿದೆ. ಈ ಸಂದರ್ಭದಲ್ಲಿ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಅವರ ಯುವ ಶಕ್ತಿ, ತಂತ್ರಜ್ಞ ಪ್ರಚಾರ ಶೈಲಿ ಹಾಗೂ ಜನಸಾಮಾನ್ಯರೊಂದಿಗೆ ನೇರ ಸಂಪರ್ಕವು ಪಕ್ಷದ ಪುನಶ್ಚೇತನಕ್ಕೆ ಮಾರ್ಗವಾಗಬಹುದು.
ರಾಜಕೀಯವೇ ರಾಜಕೀಯ ಎನ್ನುವ ಕಾಲ ಕೊನೆಗೊಳ್ಳುತ್ತಿದೆ. ಈಗಾಗಲೇ ಕಾಂಗ್ರೆಸ್ ಮತ್ತು ಬಿಜೆಪಿ ಒಂದೊಂದು ಧರ್ಮಗಳನ್ನು ತಮ್ಮ ಮತಬ್ಯಾಂಕ್ ಆಗಿ ಪರಿವರ್ತಿಸಿಕೊಂಡಿವೆ. ಧರ್ಮ ಮತ್ತು ಜಾತಿ ರಾಜಕೀಯ ಸಕ್ರಿಯವಾಗಿದ್ದು ಹಿಂದೆಂದಿಗಿಂತಲೂ ಪ್ರಭಲವಾಗಿದೆ.
ಆದರೆ ಈಗ ನಿಖಿಲ್ ಕುಮಾರಸ್ವಾಮಿ ಅವರು ರಾಜಕೀಯದಲ್ಲಿ ಧರ್ಮವನ್ನು ಹೊರಗಿಟ್ಟು ಅದಕ್ಕೆ ಹೊಸ ಚೈತನ್ಯ ನೀಡಬೇಕಿದೆ. ರಾಜಕೀಯ + ಸಮಾಜಸೇವೆ ಮತ್ತು ಅಭಿವೃದ್ಧಿ ಎನ್ನುವ ಸಂಯೋಜನೆಯು ಜನತೆಗೆ ಆಶಾವಾದ ನೀಡುತ್ತಿದೆ.
ನಿಖಿಲ್ ಕುಮಾರಸ್ವಾಮಿ ಈ ಹೊಸ ನುಡಿಗಟ್ಟಿಗೆ ಸಾಕ್ಷಿಯಾಗಬಲ್ಲ ನಾಯಕರಾಗಿದ್ದಾರೆ. ತಮಗೆ ಎದುರಾದ ಸೋಲನ್ನು ಪಾಠವನ್ನಾಗಿ ಪರಿವರ್ತಿಸಿಕೊಂಡು, ಪಕ್ಷದ ನವ ನಿರ್ಮಾಣದ ಯೋಧರಾಗಿರುವ ನಿಖಿಲ್ ಅವರ ಈ ಪ್ರಯಾಣ, ಜೆಡಿಎಸ್ ಪಕ್ಷಕ್ಕೆ ಮಾತ್ರವಲ್ಲ, ರಾಜ್ಯದ ರಾಜಕೀಯಕ್ಕೂ ಹೊಸ ಬೆಳಕು ನೀಡಬಲ್ಲದು.
ನಿಖಿಲ್ ಕುಮಾರಸ್ವಾಮಿ ಪಕ್ಷದ ಇಂದಿನ ನೆಲೆಯಲ್ಲಿ ಭವಿಷ್ಯದ ಆಶಾಕಿರಣ. ಅವರಲ್ಲಿ ಕಾಣಬಹುದಾದ ಸಂಘಟನಾತ್ಮಕ ಶಕ್ತಿ, ಸಾರ್ವಜನಿಕ ಸಂಪರ್ಕ, ಮತ್ತು ನೈಜ ಸಮರ್ಥತೆ ಜೆಡಿಎಸ್ ಪಕ್ಷವನ್ನು ಮತ್ತೊಮ್ಮೆ ನೂತನ ಶಕ್ತಿಯಿಂದ ಉದ್ದೀಪನಗೊಳಿಸುವ ಸಾಧ್ಯತೆಯನ್ನೂ ನೀಡುತ್ತದೆ. ಇದೀಗ ಅವರು ನಿಜವಾಗಿಯೂ ನಾಳೆ ಕಾಂಗ್ರೆಸ್ ಮತ್ತು ಬಿಜೆಪಿಯ ನಾಯಕರ ಮುಂದೆ ನಿಂತು ಪಕ್ಷವನ್ನು ಬಲಪಡಿಸಲು ಸಿದ್ಧರಾಗಬೇಕಾದ ಕಾಲ ಬಂದಿದೆ.
ನಿಖಿಲ್ ಕುಮಾರಸ್ವಾಮಿ ಇಂದು ಚಲನೆಯಲ್ಲಿರುವ ಯುವ ನಾಯಕ. ಆದರೆ ಈ ಚಲನೆಗೆ ದಿಕ್ಕು ಇರಲೇಬೇಕು. ಇಲ್ಲದಿದ್ದರೆ ಫಿನಿಕ್ಸ್ ಪಕ್ಷಿಯಂತೆ ಪುಟಿದೆಟ್ಟಿದ್ದು ಕೇವಲ ಶಾಸ್ತ್ರೀಯ ಚಲನೆಯ ಉದಾಹರಣೆಯಾಗಿ ಮಾತ್ರ ಉಳಿಯಲಿದೆ. ಈ ದೇಶದಲ್ಲಿ ರಾಜಕೀಯ ಭವಿಷ್ಯ ಆವೃತ್ತಿಯಲ್ಲಿ ಕಟ್ಟಲಾಗದು. ಆತ್ಮಾವಲೋಕನ, ಸಂಘಟನೆ, ಜನರ ನೈಜ ಸಮಸ್ಯೆಗಳ ಅರಿವು ಮತ್ತು ಪೂರಕ ದೃಷ್ಠಿಕೋನವೇ ನಿಖಿಲ್‌ರ ಪುಟಿದಾಟನ್ನು ನಿಜವಾದ ಹಾರಾಟವನ್ನಾಗಿ ಮಾಡಬಲ್ಲದು. ಈ ಸತ್ಯವನ್ನು ಅರಿತಿರುವ ಉತ್ಸಾಹಿ ಯುವಕ ನಿಖಿಲ್ ಕುಮಾರಸ್ವಾಮಿ ತಳ ಹಂತದಿಂದ ಜೆಡಿಎಸ್ ಪಕ್ಷವನ್ನು ಸಂಘಟಿಸುವಲ್ಲಿ ಕಾರ್ಯೋನ್ಮುಖರಾಗಿದ್ದು ಮಾತ್ರವಲ್ಲ ಈ ಕಾರ್ಯದಲ್ಲಿ ಅವರು ಒಂದೊಂದೇ ಹೆಜ್ಜೆ ಮೇಲೇರುವ ಮೂಲಕ ರಾಜಕೀಯ ವಲಯದಲ್ಲಿ ತೀರ್ವ ಚರ್ಚೆಗೆ ಗ್ರಾಸವಾಗಿದ್ದಾರೆ.