ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಜು.23: ಶಿವಮೊಗ್ಗಕ್ಕೆ ನಿಖಿಲ್ ಎಂಟ್ರಿ; ಜೆಡಿಎಸ್ ಬೃಹತ್ ಸಮಾವೇಶ…

Share Below Link

ಶಿವಮೊಗ್ಗ : ಜೆಡಿಎಸ್ ಪಕ್ಷವನ್ನು ಮತ್ತಷ್ಟು ಸದೃಢ ವಾಗಿ ಕಟ್ಟಲು, ಜನರೊಂದಿಗೆ ಜನತಾದಳ ಧ್ಯೇಯ ವಾಕ್ಯ ದೊಂದಿಗೆ ರಾಜದ್ಯಂತ ಪ್ರವಾ ಸ ಮಾಡುತ್ತಿರುವ ಜೆಡಿಎಸ್ ಯುವ ಘಟಕದ ರಾಜಧ್ಯಕ್ಷ ನಿಖಿಲ್ ಕುಮಾರ ಸ್ವಾಮಿ ಜು.೨೩ರಂದು ಜಿ ಪ್ರವಾಸ ಕೈಗೊಂಡಿzರೆ ಎಂದು ಜಿ ಜೆಡಿಎಸ್ ಅಧ್ಯಕ್ಷ ಕಡಿದಾಳ್ ಗೋಪಾಲ್ ತಿಳಿಸಿ ದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದ ರಾಜಕೀಯಕ್ಕೆ ಹೊಸ ಶಕ್ತಿ ತುಂಬಲು ಯುವ ಜನತಾದಳ ಇದೀಗ ಜನತೆಯ ಬಳಿಗೆ ತಲುಪುವ ದಿಟ್ಟ ಹೆಜ್ಜೆ ಇಟ್ಟಿದೆ. ಪಕ್ಷದ ಯುವ ಘಟಕ ದ ರಾಜಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಪ್ರಾರಂಭಿಸಿರುವ ರಾಜ್ಯ ಪ್ರವಾಸ ಮತ್ತು ‘ಮಿಸ್ ಕಾಲ್ ಅಭಿಯಾನ’ ಜೆಡಿಎಸ್ ಕಾರ್ಯ ಕರ್ತರಲ್ಲಿ ನಾವು ಚೈತನ್ಯ ಮೂಡಿ ಸಿದೆ ಎಂದರಲ್ಲದೆ, ನಿಖಿಲ್ ಕುಮಾರಸ್ವಾಮಿ ಅವರು ಈ ಪ್ರವಾಸದ ಮೂಲಕ ರಾಜ್ಯದ ವಿವಿಧ ಜಿಗಳ ಯುವ ಜನರ ಆತ್ಮೀಯ ಸಂಪರ್ಕ ಮತ್ತು ಯುವ ನಾಯಕತ್ವ ಬೆಳವಣಿಗೆಗೆ ಉತ್ತೇಜನ ನೀಡುತ್ತಿರುವುದು ಗಮನಾರ್ಹವಾ ಗಿದೆ. ಅವರು ಗ್ರಾಮೀಣ ಪ್ರದೇಶ ಗಳಿಂದ ನಗರ ಕೇಂದ್ರಗಳವರೆಗೆ ಪ್ರವಾಸ ಮಾಡಿ ಯುವಕರ ಸಮಸ್ಯೆ, ನಿರೀಕ್ಷೆ ಮತ್ತು ರಾಜಕೀಯ ತಿಳಿವಳಿಕೆಗೆ ಸ್ಪಂದಿಸುತ್ತಿzರೆ ಎಂದು ವಿವರಿಸಿದರು.
ಈ ಎ ಸಮಾವೇಶಗಳಲ್ಲಿ ಜೆಡಿಎಸ್ ಶಾಸಕರಾದ ಶಾರದಾ ಪೂರ್ಯಾನಾಯ್ಕ, ಸಿ.ಎಸ್. ಸುರೇಶ್ ಬಾಬು, ಭೋಜೇಗೌಡ, ಮಾಜಿ ಸಚಿವ ಬಂಡೆಪ್ಪ ಕಾಶೆಂ ಪೂರ ಸೇರಿದಂತೆ ರಾಜ್ಯ ಮುಖಂ ಡರು ಭಾಗವಹಿಸಲಿzರೆ ಎಂದರು.


ಜೆಡಿಎಸ್ ರಾಜ್ಯ ಉಪಾ ಧ್ಯಕ್ಷರೂ ಆದ ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಅವರು ಮಾತ ನಾಡಿ, ನಿಖಿಲ್ ಕುಮಾರಸ್ವಾಮಿ ಅವರು ಈಗಾಗಲೇ ೧೨ ಜಿಗಳಲ್ಲಿ ಪ್ರವಾಸ ಮಾಡಿದ್ದು, ಜು.೨೩ರಂದು ಜಿಗೆ ಆಗಮಿಸುವ ಅವರು ಜಿಯ ೩ ವಿಧಾನಸಭಾ ಕ್ಷೇತ್ರಗಳಲ್ಲಿ ಭೇಟಿ ನೀಡಿ ಪಕ್ಷ ಸಂಘಟನೆಯ ಬಗ್ಗೆ ಚರ್ಚೆ ನಡೆಸಲಿzರೆ ಎಂದರು.
ನಿಖಿಲ್ ಕುಮಾರಸ್ವಾಮಿ ಅವರು ಜು.೨೩ರಂದು ಬೆಳಿಗ್ಗೆ ೬ ಗಂಟೆಗೆ ಬೆಂಗಳೂರಿನಿಂದ ಹೊರಟು ಶಿವಮೊಗ್ಗ ಗ್ರಾಮಾಂತರ ಕ್ಷೇತ್ರಕ್ಕೆ ೧೦ ಗಂಟೆಗೆ ತಲುಪಿದ್ದು, ಕೈಮರ ಬಳಿ ಶಾಸಕಿ ಶಾರದಾ ಪೂರ್ಯಾನಾಯ್ಕ ಅವರ ನೇತೃತ್ವದಲ್ಲಿ ಯುವ ಜನತಾದಳದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಹಾಗೂ ಅಭಿಮಾನಿಗಳು ಅವರನ್ನು ಸ್ವಾಗತಿಸಿ zರೆ. ನಂತರ ೧೦.೩೦ಕ್ಕೆ ಮ ಪುರದ ಶ್ರೀ ಗುಡ್ಡದ ಮಶ್ವರ ಸಮುದಾಯದ ಭವನದಲ್ಲಿ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕಿ ಶಾರದಾ ಪೂರ್ಯಾನಾಯ್ಕ ಅವರ ಅಧ್ಯಕ್ಷತೆಯಲ್ಲಿ ನಡೆಯಲಿ ರುವ ಬೃಹತ್ ಸಮಾವೇಶದಲ್ಲಿ ಕಾರ್ಯಕರ್ತರ ಸಭೆ ಮತ್ತು ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಲಿzರೆ ಎಂದರು.
ನಂತರ ೨.೩೦ಕ್ಕೆ ಮಪು ದಿಂದ ಹೊರಟು ಶಿವಮೊಗ್ಗದ ಜೈಲ್ ರಸ್ತೆಯ ದೈವಜ್ಞ ಕಲ್ಯಾಣ ಮಂದಿರದಲ್ಲಿ ನಗರ ಜೆಡಿಎಸ್ ಘಟಕದಿಂದ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುವರು, ಸಭೆಯ ಅಧ್ಯಕ್ಷತೆಯನ್ನು ಮಾಜಿ ಶಾಸಕರು ಹಾಗೂ ಜೆಡಿಎಸ್ ರಾಜ್ಯ ಉಪಾ ಧ್ಯಕ್ಷರಾದ ತಾವು ವಹಿಸುವುದಾಗಿ ತಿಳಿಸಿದರು.
ಅಂದು ಸಂಜೆ ೫ ಗಂಟೆಗೆ ಶಿವಮೊಗ್ಗದಿಂದ ಹೊರಟು ೫.೩೦ಕ್ಕೆ ಭದ್ರಾವತಿಯಲ್ಲಿ ಜೆಡಿಎಸ್ ನಾಯಕಿ ಶ್ರೀಮತಿ ಶಾರದಾ ಅಪ್ಪಾಜಿಗೌಡ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಿರುವ ಜೆಡಿಎಸ್ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಕಾರ್ಯಕರ್ತರನ್ನುzಶಿಸಿ ಭಾಷಣ ಮಾಡಲಿzರೆ ಎಂದರ ಲ್ಲದೆ, ಈ ಮೂರೂ ಕ್ಷೇತ್ರಗಳಲ್ಲಿ ನಡೆಯಲಿರುವ ಬೃಹತ್ ಸಮಾ ವೇಶದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಪಕ್ಷದ ನಾಯಕರು, ಕಾರ್ಯ ಕರ್ತರು ಮತ್ತು ಅಭಿಮಾನಿಗಳು ಹಾಗೂ ಸಾರ್ವಜನಿಕರು ಪಾಲ್ಗೊಳ್ಳ ಲಿzರೆ ಎಂದರು.
ಜೆಡಿಎಸ್ ಯುವ ಘಟಕದ ಜಿಧ್ಯಕ್ಷ ಮಧು ಕುಮಾರ್ ಅವರು ಮಾತನಾಡಿ, ಈ ಅಭಿ ಯಾನ ನಿಖಿಲ್ ಕುಮಾರಸ್ವಾಮಿ ಅವರ ರಾಜಕೀಯ ದೃಷ್ಟಿಕೋನ ಮತ್ತು ಪಕ್ಷವನ್ನು ಯುವಕರ ಪಕ್ಷವಾಗಿ ರೂಪಿಸುವ ಸಂಕಲ್ಪವನ್ನು ಪ್ರತಿಬಿಂಬಿಸುತ್ತಿದೆ. ರಾಜ್ಯದ ಮುಂದಿನ ಚುನಾವಣೆಗೆ ಯುವ ಜನತಾದಳ ತಯಾರಾಗುತ್ತಿರುವ ಸೂಚನೆಯೂ ಇದಾಗಿದೆ ಎಂದರು.
‘ಮಿಸ್ ಕಾಲ್’ ಅಭಿಯಾನ ನವೀನ ತಂತ್ರeನ ಬಳಕೆ: ಈ ಅಭಿಯಾನದಲ್ಲಿ, ಜನರು ಸರಳವಾಗಿ ಒಂದು ನಂಬರಿಗೆ ಮಿಸ್ ಕಾಲ್ ನೀಡುವುದರ ಮೂಲಕ ಯುವ ಜನತಾದಳದ ಸದಸ್ಯರಾಗಬಹುದು. ಇದು ಡಿಜಿಟಲ್ ಯುಗದಲ್ಲಿ ಪಕ್ಷವು ಯುವಜನರನ್ನೂ, ತಂತ್ರeನದ ಬಳಕೆದಾರರನ್ನೂ ತನ್ನತ್ತ ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ ಎಂದರಲ್ಲದೆ, ಪ್ರವಾಸದ ವೇಳೆ ನಿಖಿಲ್ ಕುಮಾರಸ್ವಾಮಿ ತಮ್ಮ ಭಾಷಣದಲ್ಲಿ ಯುವಜನತೆಗೆ ಒಂದು ಸ್ಪಷ್ಟ ಸಂದೇಶ ನೀಡು ತ್ತಿದ್ದು, ಪಕ್ಷದಲ್ಲಿ ಹೊಸ ಹೊಸ ಬದಲಾವಣೆ ತರುವ ಮೂಲಕ ರಾಜಕೀಯ ಶುದ್ಧವಾಗಲಿ, ಅವಕಾಶ ಯುವಜನರಿಗೆ ಸಿಗಲಿ ಎಂಬ ಆಶಯದೊಂದಿಗೆ ದಿಟ್ಟತನ, ನಾಯಕತ್ವ ಹಾಗೂ ಜನಸಾಮಾನ್ಯರ ಸಮಸ್ಯೆಗಳ ಅರಿವು ಸ್ಪಷ್ಟವಾಗುತ್ತಿದೆ. ಜನರ ಬೆಂಬಲದ ಚಟುವಟಿಕೆಗಳು, ಸಾಮಾಜಿಕ ಜಲತಾಣಗಳಲ್ಲಿ ಅಭಿಯಾನಕ್ಕೆ ಸಿಕ್ಕುತ್ತಿರುವ ಪ್ರತಿಕ್ರಿಯೆ ಇದನ್ನು ದೃಢಪಡಿಸುತ್ತವೆ ಎಂದರು.
ಯುವ ಜನತಾದಳದ ಈ ಚಟುವಟಿಕೆಗಳು ಕೇವಲ ರಾಜಕೀಯ ನಡೆಯಲ್ಲ; ಇದು ಕರ್ನಾಟಕದ ಯುವಜನತೆಗೆ ಭವಿಷ್ಯದ ನಾಯಕತ್ವಕ್ಕಾಗಿ ಒಂದು ವೇದಿಕೆ ನಿರ್ಮಿಸುವ ಪ್ರಯತ್ನ. ನಿಖಿಲ್ ಕುಮಾರ ಸ್ವಾಮಿ ಅವರ ಜವಾಬ್ದಾರಿಯುತ ನಡೆ ಮತ್ತು ಅಭಿಯಾನಗಳು ರಾಜ್ಯ ರಾಜಕೀಯದಲ್ಲಿ ಹೊಸ ಕ್ರಾಂತಿ ತರಲಿದೆ ಎಂದು ಜೆಡಿಎಸ್ ಯುವ ಘಟಕದ ಜಿಧ್ಯಕ್ಷ ಮಧು ಕುಮಾರ್ ನುಡಿದರು.
ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ರಾಜ್ಯ ಕಾರ್ಯದರ್ಶಿ ರಾಕೇಶ್ ಡಿಸೋಜ, ಜಿ ಘಟಕದ ಕಾರ್ಯಾಧ್ಯಕ್ಷ ಕೆ.ಎನ್ . ರಾಮಕೃಷ್ಣ, ಮಹಾ ಪ್ರಧಾನ ಕಾರ್‍ಯದರ್ಶಿ ತ್ಯಾಗರಾಜ್, ಪ್ರಧಾನ ಕಾರ್‍ಯದರ್ಶಿ ಹೆಚ್.ಎಂ. ಸಂಗಯ್ಯ, ಮಹಿಳಾ ಘಟಕದ ಜಿಧ್ಯಕ್ಷೆ ಗೀತಾ ಸತೀಶ್, ಯುವ ಘಟಕದ ಜಿ ಕಾರ್‍ಯಾ ಧ್ಯಕ್ಷ ಎಸ್. ಎಲ್.ನಿಖಿಲ್, ಪ್ರಧಾನ ಕಾರ್‍ಯದರ್ಶಿ ಪ್ರೇಮ್ ಕುಮಾರ್, ಶಿವಮೊಗ್ಗ ನಗರ ಜೆಡಿಎಸ್ ಘಟಕದ ಅಧ್ಯಕ್ಷ ದೀಪಕ್ ಸಿಂಗ್, ಪ್ರಮುಖ ರಾದ ನಾಗೇಶ್, ಅಬ್ದುಲ್ ವಾಜಿದ್, ಸಂಜಯ್ ಕಶ್ಯಪ್, ನರಸಿಂಹ ಗಂಧದಮನೆ, ಜಯಣ್ಣ, ಲೋಹಿತ್, ಯೋಗೇಶ್ ಇನ್ನಿತರರು ಉಪಸ್ಥಿತರಿದ್ದರು.