ಮಲೆನಾಡಿನ ಪ್ರತಿಷ್ಠಿತ ನಂಜಪ್ಪ ಲೈಫ್‌ಕೇರ್‌ನಲ್ಲಿ ಅಪರೂಪದ ಯಶಸ್ವಿ ಮೆದುಳಿನ ಶಸ್ತ್ರಚಿಕಿತ್ಸೆ…
ಶಿವಮೊಗ್ಗ : ನಗರದ ಪ್ರತಿಷ್ಠಿತ ಆಸ್ಪತ್ರೆಯಾದ ನಂಜಪ್ಪ ಲೈಫ್‌ಕೇರ್‌ನಲ್ಲಿ ಅಪರೂಪದ ಮೆದುಳಿನ ಶಸ್ತ್ರಚಿಕಿತ್ಸೆಯನ್ನು ಸುಧಾರಿತ ವಿಧಾನದಲ್ಲಿ ಯಶಸ್ವಿಯಾಗಿ ನಿರ್ವಹಿಸಲಾಗಿದೆ ಎಂದು ಆಸ್ಪತ್ರೆಯ ತಜ್ಞ ವೈದ್ಯೆ ಡಾ|| ನಿಶಿತ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಸ್ತ್ರಚಿಕಿತ್ಸೆಯ ಪೂರ್ಣವಿವರವನ್ನು ಪ್ರಾತ್ಯಕ್ಷತೆಯ ಮೂಲಕ ವಿವರಿಸಿ, ಇದೊಂದು ಅಪರೂಪದ ಮತ್ತು ಮಲೆನಾಡು ಭಾಗದಲ್ಲಿ ಮೊದಲ ಬಾರಿಗೆ ನಂಜಪ್ಪ ಆಸ್ಪತ್ರೆಯಿಂದ ಮಾಡಿರುವ ಯಶಸ್ವಿ ಶಸ್ತ್ರಚಿಕಿತ್ಸೆಯಾಗಿದೆ ಎಂದರು.
ಇಪ್ಪತ್ತೊಂದು ವರ್ಷದ ಯುವತಿಯೊಬ್ಬಳು ತಲೆನೋವಿನ ಕಾರಣ ಹೇಳಿ ಆಸ್ಪತ್ರೆಗೆ ಬಂದಿzಗ, ಆಕೆಯ ಮೆದುಳನ್ನು ಎಂಆರ್‌ಐ ಸ್ಕ್ಯಾನ್ ಮಾಡಿದಾಗ ಆಕೆಯ ಮೆದುಳಿನ ಎಡಭಾಗದ ರಕ್ತನಾಳದಲ್ಲಿ ಬಲೂನ್ ತರಹ ಊತ ಕಂಡು ಬಂದಿತು. ಇದಕ್ಕೆ ವೈದ್ಯಕೀಯ ಭಾಷೆಯಲ್ಲಿ `ಡಿಸ್ಸೆಕ್ಟಿಂಗ್ ಅನ್ಯೂರಿಸಮ್ ಕಂಡು ಬಂದಿತು. ಇದೊಂದು ಅಪಾಯಕಾರಿ ಊತ ಆಗಿರುತ್ತದೆ. ಮಾಮೂಲಿಯಾದರೆ ಮೆದುಳನ್ನು ಓಪನ್ ಸರ್ಜರಿ ಮಾಡಬೇಕಾಗುತ್ತದೆ. ಆದರೆ ಈಗಿನ ಸುಧಾರಿತ ವಿಧಾನದಲ್ಲಿ ಈ ಆಪರೇಷನ್ ಮಾಡುವ ಚಾಲೆಂಜನ್ನು ನಾವು ತೆಗೆದುಕೊಂಡೆವು ಎಂದು ವಿವರಿಸಿದರು
ಈ ಮೆದುಳಿನ ಚಿಕಿತ್ಸೆಯನ್ನು ಫ್ರೋ ಡೈವರ್ಟರ್ ಬಳಸಿ ಪ್ರಮುಖ ರಕ್ತನಾಳ ಪುನರ್ ನಿರ್ಮಾಣ ಮಾಡಬೇಕಾಯಿತು. ಅರವಳಿಕೆ ತಜ್ಞರ ಸಹಕಾರದೊಂದಿಗೆ ನಮ್ಮ ತಂಡವು ಮೆದುಳಿನ ಪ್ರಮುಖ ರಕ್ತನಾಳ ತಲುಪಲು ತೊಡೆಯಲ್ಲಿ ಸಣ್ಣ ಸೂಜಿಗಾತ್ರದ ತೆಳುವಾದ ಟ್ಯೂಬನ್ನು ಬಳಸಿ, ಅದನ್ನು ಮೆದುಳಿಗೆ ತಲುಪಿಸಿ ಅಲ್ಲಿ ಊತವಿರುವ ರಕ್ತನಾಳಕ್ಕೆ ರಕ್ತ ಸಂಚರಿಸುವುದನ್ನು ನಿಲ್ಲಿಸಲಾಯಿತು. ಇದೊಂದು ಚಾಲೆಜಿಂಗ್ ಶಸ್ತ್ರಚಿಕಿತ್ಸೆಯಾಗಿತ್ತು ಎಂದರು.
ರೋಗಿಯು ಈಗ ಆರೋಗ್ಯವಾಗಿzರೆ. ಈ ವಿಧಾನದಿಂದ ಕಷ್ಟಕರ ಊತಗಳನ್ನು ಚಿಕಿತ್ಸೆ ಮಾಡಲು ತುಂಬಾ ಸಹಾಯವಾಗುತ್ತದೆ. ದೀರ್ಘಕಾಲಿನ ರಕ್ಷಣೆಯಾಗಿರುತ್ತದೆ. ಮತ್ತು ಒಮ್ಮೆ ಯಶಸ್ವಿ ಚಿಕಿತ್ಸೆ ನಡೆಸಿದ ನಂತರ ಮತ್ತೆ ಊತ ಇರುವುದಿಲ್ಲ. ರೋಗಿ ಆಪರೇಷನ್ ಆದ ಮರುದಿನವೇ ಬಿಡುಗಡೆಯಾಗಬಹುದು. ಇದು ಅತ್ಯುತ್ತಮ ವಿಧಾನವಾಗಿದ್ದು, ಒಂದು ಯುವತಿಯ ಜೀವ ಉಳಿಸಿದ ಸಣ್ಣ ರಂಧ್ರದ ಚಿಕಿತ್ಸೆಯಾಗಿದೆ ಎಂದರು.

ಸಾಮಾನ್ಯವಾಗಿ ಈ ರೀತಿಯ ಶಸ್ತ್ರಚಿಕಿತ್ಸೆಗೆ ಏಳೆಂಟು ಲಕ್ಷ ರೂ. ಖರ್ಚಾಗುತ್ತದೆ. ಬೆಂಗಳೂರು, ಬೆಳಗಾವಿಯಂತಹ ನಗರದಲ್ಲಿ ಮಾತ್ರ ಈ ಸೌಲಭ್ಯವಿತ್ತು. ಮಲೆನಾಡು ಭಾಗದಲ್ಲಿ ಇರಲಿಲ್ಲ. ನಾವು ಇದನ್ನು ಮಾಡಿzವೆ ಇಂತಹ ಕಾಯಿಲೆಗೂ ಸರ್ಕಾರದಿಂದ ಸಹಾಯಧನದ ಅನುಮತಿ ಬೇಕಾಗುತ್ತದೆ ಮತ್ತು ಎ ರೀತಿಯ ಆರೋಗ್ಯ ವಿಮೆಯ ಪಟ್ಟಿಗೆ ಈ ಕಾಯಿಲೆಯನ್ನು ಕೂಡ ಸೇರಿಸಬೇಕು ಎಂಬುದು ನಮ್ಮ ಆಗ್ರಹವಾಗಿದೆ. ಹಾಗಾದಾಗ ಬಿಪಿಎಲ್ ಕಾರ್ಡ್ ಸೇರಿದಂತೆ ಎ ರೀತಿಯ ಆರೋಗ್ಯ ಸೌಲಭ್ಯದ ಸಹಾಯ ಪಡೆಯಲು ಅನುಕೂಲವಾಗುತ್ತದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಅರವಳಿಕೆ ತಜ್ಞ ಡಾ|| ಪ್ರವೀಣ್ ಕುಮಾರ್, ಪಿಆರ್‌ಓ ತ್ರಿವೇಣಿಶೆಟ್ಟಿ ಉಪಸ್ಥಿತರಿದ್ದರು.

