ರಸ್ತೆ ಸುರಕ್ಷತೆ ಹಾಗೂ ಸಂಚಾರಿ ನಿಯಮ ಪಾಲಿಸಿ: ಎಸ್ಪಿ
ಶಿವಮೊಗ್ಗ : ರಸ್ತೆ ನಿಯಮಗಳನ್ನು ಪ್ರತಿಯೊಬ್ಬರು ಕಡ್ಡಾಯವಾಗಿ ಪಾಲಿಸಲೇಬೇಕು, ಈ ಮೂಲಕ ರಸ್ತೆ ಅಪಘಾತಗಳನ್ನು ತಪ್ಪಿಸಬಹುದು ಎಂದು ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ತಿಳಿಸಿದರು.
ನಗರದ ಉಷಾ ನರ್ಸಿಂಗ್ ಹೋಮ್ ಬಳಿ ಅಕ್ಕಮಹಾದೇವಿ ವೃತ್ತದಲ್ಲಿ ಸಿಗ್ನಲ್ ಲೈಟ್ ಅಳವಡಿಕೆಗೆ ಚಾಲನೆ ನೀಡಿ ಮಾತನಾಡಿದ ಅವರು, ರಸ್ತೆ ಅಪಘಾತದಿಂದಾಗಿ ಸಾಕಷ್ಟು ಜನ ರಸ್ತೆಯಲ್ಲಿ ಪ್ರಾಣ ಬಿಡುತ್ತಿzರೆ ಎಂದು ಆತಂಕ ವ್ಯಕ್ತಪಡಿಸಿದ ಅವರು, ವಾಹನವನ್ನು ವೇಗವಾಗಿ ಚಲಿಸುವುದು, ಹೆಲ್ಮೆಟ್ ಹಾಕದೇ , ಸೀಟ್ ಬೆಲ್ಟ್ ಧರಿಸದೆ ವಾಹನ ಚಲಿಸುವುದು ಮತ್ತು ಮಧ್ಯಪಾನ ಮಾಡಿ ವಾಹನ ಚಲಾಯಿಸು ವುದರಿಂದ ಅಪಘಾತಗಳ ಪ್ರಮಾಣ ಹೆಚ್ಚುತ್ತಿದೆ ಎಂದರು.

ಜೀವಕ್ಕಿಂತ ಅಮೂಲ್ಯವಾದ ವಸ್ತು ಬೇರೆ ಇಲ್ಲ, ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ರಸ್ತೆ ನಿಯಮ ಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲೇಬೇಕು ಎಂದರು.
ಮಾಜಿ ಕಾರ್ಪೊರೇಟರ್ ಹೆಚ್.ಸಿ. ಯೋಗೇಶ್ ಅವರು ಮಾತನಾಡಿ, ಪೋಲಿಸ್ ಇಲಾಖೆ ಸಿಬ್ಬಂದಿಗಳಿಗೆ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಸಂಪೂರ್ಣ ಬೆಂಬಲ ನೀಡಿದ್ದು ಇದರಿಂದ ಬಹಳ ಉತ್ತಮವಾದ ಕಾರ್ಯ ನಡೆಯುತ್ತಿದೆ ಎಂದು ಪೊಲೀಸ್ ಇಲಾಖೆಯನ್ನು ಶ್ಲಾಘಿಸಿದರು.
ಇದೇ ಸಂದರ್ಭದಲ್ಲಿ ನಾಗರೀಕರ ಪರವಾಗಿ ಬಳ್ಳೇಕೆರೆ ಸಂತೋಷ ಅವರು ಜಿ ಪೊಲೀಸ್ ಇಲಾಖೆಗೆ ಹಾಗೂ ಸಂಚಾರಿ ಪೊಲೀಸ್ ಸಿಬ್ಬಂದಿಗಳಿಗೆ ಅಭಿನಂದನೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಶಿವಮೊಗ್ಗ ಜಿ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ ವಿಜಯಕುಮಾರ್, ಸಂಚಾರಿವೃತ್ತ ನಿರೀಕ್ಷಕರಾದ ದೇವರಾಜ್, ತಿರುಮಲೇಶ್, ನವೀನ್ ಮಠಪತಿ ಹಾಗೂ ಪತ್ರಿಕಾ ಛಾಯಾಗ್ರಾಹಕ ಕೆ.ಆರ್. ಸೋಮನಾಥ್, ಪ್ರಮುಖರಾದ ದಿನೇಶ್ ಶೆಟ್, ರಾಜೇಂದ್ರ, ಹರೀಶ್, ಗಿರಿರಾಜ್, ಗೋಪಾಲ ಇನ್ನಿತರರು ಉಪಸ್ಥಿತರಿದ್ದರು.
