ಜಿಲ್ಲಾ ಸುದ್ದಿತಾಜಾ ಸುದ್ದಿ

ಸಮಷ್ಟಿಯ ಒಳಿತೇ ಬ್ರಾಹ್ಮಣ ಪ್ರeಯ ಆಶಯ: ಅಶ್ವಿನಿಕುಮಾರ್

Share Below Link

xಸಾಗರ : ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಒಳಿತನ್ನು ಬಯಸುವುದೇ ಬ್ರಾಹ್ಮಣ ಪ್ರeಯ ಆಶಯ ಎಂದು ಇಲ್ಲಿನ ಶ್ರೀ ಶೃಂಗೇರಿ ಶಂಕರ ಮಠದ ಧರ್ಮಾಧಿಕಾರಿ ಅಶ್ವಿನಿಕುಮಾರ್ ಹೇಳಿದರು.
ಪಟ್ಟಣದ ಶ್ರೀ ಶೃಂಗೇರಿ ಶಂಕರ ಮಠದಲ್ಲಿ ಶ್ರೀ ಶೃಂಗೇರಿ ಶಂಕರ ಮಠ ಮತ್ತು ವಿಪ್ರ ವೈದಿಕ ಪರಿಷತ್ ಹಾಗೂ ಜೋಷಿ ಫೌಂಡೇಷನ್ ನಿಂದ ಏರ್ಪಡಿಸಿದ್ದ ಕೀರ್ತಿಶೇಷ ವಿದ್ವಾಂಸರು-ಪುರೋಹಿತರ ಸ್ಮರಣಾರ್ಥ ಪ್ರಸ್ತುತ ವಿದ್ವಾಂಸ- ಪುರೋಹಿತರ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಸುಮಾರು ಒಂದೆರಡು ತಲೆಮಾರಿನ ಹಿಂದಿನ ವೈದಿಕ ವಿದ್ವಾಂಸರು- ಪುರೋಹಿತರು ಹೇಗೆ ವೈದಿಕ ಧರ್ಮ, ಪರಂಪರೆಯನ್ನು ಪೋಷಿಸಿಕೊಂಡು ಬಂದರು ಎಂಬುದನ್ನು ನೆನಪಿಸಿಕೊಳ್ಳಬೇಕು. ಅಂಥವರು ನಡೆದುಕೊಂಡು ಬಂದ ಮಾರ್ಗ ಮುಂದಿನ ಜನಾಂಗಕ್ಕೆ ದಾರಿದೀಪವಾಗುತ್ತದೆ ಎಂದರು.
ಬ್ರಾಹ್ಮಣರು ಬಹುಜನ ಪ್ರಿಯರು ಎಂಬ ಲೋಕರೂಢಿಯ ಮಾತಿದೆ. ಈ ಸಮಾಜ ಎಲ್ಲರ ಒಳಿತನ್ನೂ ಬಯಸುತ್ತದೆ. ಎಲ್ಲರೂ eನ ಸಂಪನ್ನರಾಗಬೇಕೆಂಬುದು ಸನಾತನ ಧರ್ಮದ ಆಶಯ. ಭಾರತದ ಪ್ರಗತಿ ಲೌಕಿಕದ ಜೊತೆ ಆಧ್ಯಾತ್ಮಿಕವಾಗಿ ಆಗಬೇಕು. ವೇದೋಪನಿಷತ್ತುಗಳಲ್ಲಿ ಋತ್ವಿಜರು ಭಾರತದ ರಾಯಭಾರಿ ಗಳು. ಸನಾತನ ಧರ್ಮದ ಸಂಸ್ಕತಿಯನ್ನು ವಿಸ್ತರಿಸುವ ಮೂಲಕ ಅದನ್ನು ಸಂರಕ್ಷಿಸುತ್ತಿzರೆ. ಪೌರೋಹಿತ್ಯ ಕೇವಲ ವೃತ್ತಿಯಲ್ಲ, ಅದೊಂದು ಸಂಸ್ಕತಿ. ಸಂಸ್ಕತದ eನದ ಮೂಲಕ ಮಂತ್ರದ ಅರ್ಥ ವನ್ನು ಕಲಿಯಬೇಕು ಎಂದರು.
ಜೋಷಿ ಫೌಂಡೇಷನ್‌ನ ಅಧ್ಯಕ್ಷ ದಿನೇಶಕುಮಾರ್ ಎನ್. ಜೋಷಿ ಮಾತನಾಡಿ, ಆಧ್ಯಾತ್ಮಿಕ ಸಂಸ್ಕೃತಿಯ ನೆಲೆಗಟ್ಟಿನಲ್ಲಿ ವಿಶ್ವದಲ್ಲಿ ಭಾರತ ಗುರುತಿಸಿಕೊಂಡಿದೆ. ಸಾಮಾಜಿಕಕ್ಕೂ ಪಾರಮಾರ್ಥಿಕಕ್ಕೂ ಸಂಪರ್ಕ ಕಲ್ಪಿಸಿ ಸನ್ಮಾರ್ಗದಲ್ಲಿ ನಡೆಸುವ ಜವಾಬ್ದಾರಿ ಬ್ರಾಹ್ಮಣ ರದು. ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಾಹ್ಮಣ ಸಮುದಾಯದ ಕೊಡುಗೆ ಅಪಾರವಾಗಿದೆ. ಸನಾತನ ಧರ್ಮ ವನ್ನು ಬೆಳೆಸಿದವರು ಸ್ವಾಮಿ ವಿವೇಕಾ ನಂದರು. ಹಿಂದೆ ಪುರೋಹಿತರು, ಪಂಡಿತರಿಗೆ ರಾಜಶ್ರಯವಿತ್ತು. ತಮ್ಮ ಆಚಾರ, ವಿಚಾರ, ತತ್ವ, ಸಿದ್ಧಾಂತಗಳ ಬ್ರಾಹ್ಮಣ್ಯದ ಮಲ್ಯ ಗಳನ್ನು ಬ್ರಾಹ್ಮಣ ಸಮುದಾಯ ಅಳವಡಿಸಿಕೊಳ್ಳಬೇಕು ಎಂದರು.
ತಾಲ್ಲೂಕು ಬ್ರಾಹ್ಮಣ ಮಹಾ ಸಭಾ ಅಧ್ಯಕ್ಷ ರವೀಶಕುಮಾರ್, ವಿಪ್ರ ವೈದಿಕ ಪರಿಷತ್ ನಿರ್ದೇಶಕ ರಾಘವೇಂದ್ರ ಭಟ್ ಮಾತನಾಡಿದರು.
ಈ ಸಂದರ್ಭದಲ್ಲಿ ಕೀರ್ತಿಶೇಷರಾದ ವೇದಮೂರ್ತಿ ಗೋಳಗೋಡು ಶೇಷ ಭಟ್ಟರು, ವೇದಮೂರ್ತಿ ಕೆಳದಿ ಶ್ರೀನಿವಾಸ ಭಟ್ಟರು, ವೇದಮೂರ್ತಿ ಸೂರ್ಯ ನಾರಾಯಣ ಜೋಯ್ಸ್, ವೇದಮೂರ್ತಿ ಚಂದ್ರಶೇಖರ ಜೋಯ್ಸ್, ವೇದಮೂರ್ತಿ ಕೃಷ್ಣಮೂರ್ತಿ ಜೋಯ್ಸ್, ವೇದಮೂರ್ತಿ ಯು.ಎಸ್. ಗೋಪಾಲರಾವ್, ವೇದಮೂರ್ತಿ ಅಗಡಿ ನಾಗೇಶ್ ಭಟ್ಟರು, ವೇದಮೂರ್ತಿ ಸೀತಾರಾಮ ಭಟ್ಟರು ಇವರ ಸ್ಮರಣಾರ್ಥ `ವೈದಿಕ ಪ್ರಯೋಗ ನಿಷ್ಣಾತ ಬಾಲಚಂದ್ರ ಜೋಯ್ಸ್, ನಾರಾಯಣ ರಾಮಚಂದ್ರ ಭಟ್, ಮಣಿಕಲ್ ಗಣೇಶ್ ಭಟ್ಟರು, ಶಂಕರ ನಾರಾಯಣ ಭಟ್ಟರು, ಚೇತನ್ ಜೋಯ್ಸ್, ಗುರುರಾಜ ಕಪುರ, ವಿದ್ವಾನ್ ಗಜನನ ಭಟ್ ರೇವಣಕಟ್ಟಾ, ಗಜನನ ಜೋಯ್ಸ್ ಅವರನ್ನು ಅಭಿನಂದಿಸಿ ಸನ್ಮಾನಿಸಲಾಯಿತು.
ವೇದಮೂರ್ತಿ ಲಕ್ಷ್ಮೀನಾರಾಯಣ ಭಟ್ ಹುಳೇಗಾರು ಸನ್ಮಾನಿತರನ್ನು ಶಾಲು ಹೊದೆಸಿ ಅಭಿನಂದಿಸಿದರು. ಜ್ಯೋತಿಷಿ ವೇದಮೂರ್ತಿ ಸದಾಶಿವ ಜೋಯ್ಸ್ ಅವರು ಸನ್ಮಾನಿತರನ್ನು ಅಭಿನಂದಿಸಿ ಮಾತನಾಡಿದರು.
ವಿಪ್ರ ವೈದಿಕ ಪರಿಷತ್ ಅಧ್ಯಕ್ಷ ನವೀನ್ ಜೋಯ್ಸ್ ಅಧ್ಯಕ್ಷತೆ ವಹಿಸಿದ್ದರು. ವಾಣಿ ಚಂದ್ರಶೇಖರ ಸಂಗಡಿಗರು ಪ್ರಾರ್ಥಿಸಿದರು. ಮ.ಸ. ನಂಜುಂಡಸ್ವಾಮಿ ಸ್ವಾಗತಿಸಿದರು. ಮಂಜುನಾಥ ಭಟ್ ವಂದಿಸಿದರು. ಕೌಶಿಕ್ ಕಾನುಗೋಡು ಮತ್ತು ಚಿದಂಬರ್ ಎಚ್.ಟಿ. ನಿರೂಪಿಸಿದರು.