ಅನ್ನದಾತರಿಗೆ ಭೂಮಿಹಕ್ಕು ಕೊಡಿಸುವಲ್ಲಿ ವಿಫಲರಾದ ಸಂಸದ-ಸಚಿವರು: ತೀನಾ ಆಕ್ರೋಶ
ಶಿವಮೊಗ್ಗ : ರೈತರಿಗೆ ಭೂಮಿಹಕ್ಕು ಕೊಡಿಸುವಲ್ಲಿ ಸಂಸದ ಬಿ.ವೈ. ರಾಘವೇಂದ್ರ, ಸಚಿವ ಮಧು ಬಂಗಾರಪ್ಪ ಇಬ್ಬರೂ ವಿಫಲರಾಗಿzರೆ ಎಂದು ಮಲೆನಾಡು ಹೋರಾಟ ಸಮಿತಿಯ ಸಂಚಾಲಕ ತೀ.ನ. ಶ್ರೀನಿವಾಸ್ ಸುದ್ದಿಗೋಷ್ಟಿಯಲ್ಲಿ ದೂರಿದರು.

ಶರಾವತಿ, ತುಂಗಾ, ಭದ್ರಾ, ವರಾಹಿ, ಚಕ್ರಾ, ಸಾವೇಹಕ್ಲು, ಅಂಬ್ಲಿಗೊಳ ಮುಂತಾದವುಗಳ ಅಣೆಕಟ್ಟು ನಿರ್ಮಾಣಕ್ಕೆ ಜಿಯ ರೈತರು ತ್ಯಾಗ ಮಾಡಿzರೆ. ಈ ಎ ಯೋಜನೆಗಳಲ್ಲಿ ಮುಳುಗಡೆಯಾದವರಿಗೆ ೬೦ ವರ್ಷಗಳ ಹಿಂದೆಯೇ ಭೂಮಿ ಮಂಜೂರು ಮಾಡಲಾಗಿತ್ತು. ಆದರೆ ಈಗ ಹಕ್ಕುಪತ್ರಗಳನ್ನು ಇವರಿಗೆ ಕೊಡುವುದು ಇರಲಿ, ಕೊಟ್ಟಿರುವ ಹಕ್ಕುಪತ್ರಗಳನ್ನೇ ಕಸಿದುಕೊಳ್ಳುತ್ತಿzರೆ ಎಂದು ಆರೋಪಿಸಿದರು.
ಹಿಂದಿನ ಸರ್ಕಾರದ ಅವಧಿಯಲ್ಲಿ ರೈತವಿರೋಧಿ ತೀರ್ಪುಗಳು ನ್ಯಾಯಾಲಯದಿಂದ ಬಂದಾಗ ಸರ್ಕಾರ ನ್ಯಾಯಾಲಯದಲ್ಲಿ ಸಮರ್ಥವಾಗಿ ವಾದ ಮಂಡಿಸಲಿಲ್ಲ. ಮೇಲ್ಮನವಿಯನ್ನು ಸಲ್ಲಿಸಲಿಲ್ಲ. ಈಗಿನ ಸರ್ಕಾರ ಶರಾವತಿ ಸಂತ್ರಸ್ತರ ಪ್ರಕರಣದಲ್ಲಿ ಸುಪ್ರಿಂಕೋರ್ಟ್ಗೆ ಮಧ್ಯಂತರ ಅರ್ಜಿ ಸಲ್ಲಿಸಿದ್ದು ಬಿಟ್ಟರೆ, ಭೂಮಿಹಕ್ಕಿನ ಸಮಸ್ಯೆಯನ್ನು ಬಗೆಹರಿಸಲು ಯಾವ ಕ್ರಮವನ್ನು ಕೈಗೊಂಡಿಲ್ಲ. ಬಿಜೆಪಿಯಾಗಲೀ, ಕಾಂಗ್ರೆಸ್ ಆಗಲಿ, ಜೆಡಿಎಸ್ ಆಗಲಿ ಯಾವ ಸರ್ಕಾರಗಳು ಸಂತ್ರಸ್ತರ ಸಮಸ್ಯೆಯನ್ನು ಬಗೆಹರಿಸಿಲ್ಲ. ಎ ಪಕ್ಷದ ಶಾಸಕರು, ಜನಪ್ರತಿನಿಧಿಗಳು, ರೈತರಿಗೆ ಭೂಮಿಹಕ್ಕು ಕೊಡಿಸುವಲ್ಲಿ ಸಂಪೂರ್ಣವಿಫಲರಾಗಿzರೆ ಎಂದರು.
ಶರಾವತಿ ಸಂತ್ರಸ್ತರ ಸಮಸ್ಯೆಯನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರ ಅಧಿಕಾರಿಗಳು ಪರಸ್ಪರ ಕುಳಿತು ಮಾತನಾಡಿ ಎಂದು ಸುಪ್ರೀಂಕೋರ್ಟ್ ಆದೇಶ ಮಾಡಿದ್ದರೂ ಕೂಡ ಸಂತ್ರಸ್ಥರ ಪೂರ್ಣ ಸಮಸ್ಯೆಯನ್ನು ಬಗೆಹರಿಸಲು ಕ್ರಮಕೈಗೊಂಡಿಲ್ಲ. ಅರಣ್ಯ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ತೊಘಲಕ್ ದರ್ಬಾರು ಮಾಡುತ್ತಿzರೆ. ಇಷ್ಟಬಂದಂತ್ತೆ ವರ್ತಿಸುತ್ತಿzರೆ ಎಂದು ದೂರಿದರು.
ಹಾಗಾಗಿ ರೈತರು, ಪ್ರತಿನಿತ್ಯ ಅಲೆದಾಡುವಂತಹ ಪರಿಸ್ಥಿತಿ ಬಂದಿದೆ. ಈಗ ಮತ್ತೆ ನೋಟೀಸ್ ತೆಗೆದುಕೊಳ್ಳುವಂತಹ ಸ್ಥಿತಿ ಎದುರಾಗಿದೆ. ಯಾವ ಕಾನೂನುಗಳು ರೈತರನ್ನು ಕಾಪಾಡಿಲ್ಲ. ರೈತರ ಸಾಗುವಳಿ ಭೂಮಿಗಳನ್ನು ಅರಣ್ಯಭೂಮಿ ಎಂದು ನಮೂದಿಸಲಾಗುತ್ತಿದೆ. ಅಷ್ಟೇ ಅಲ್ಲ, ಕೊಟ್ಟ ಹಕ್ಕುಪತ್ರಗಳನ್ನು ವಜಮಾಡಲಾಗುತ್ತಿದೆ. ಒಟ್ಟಾರೆ ಈ ಎ ಜನಪ್ರತಿನಿಧಿಗಳು ರೈತರ ಪಾಲಿಗೆ ಸತ್ತಂತ್ತಾಗಿzರೆ. ಇನ್ನಾದರೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮುಳುಗಡೆ ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.
ಈ ಹಿನ್ನಲೆಯಲ್ಲಿ ಮಲೆನಾಡು ರೈತ ಹೋರಾಟ ಸಮಿತಿಯ ಮತ್ತೆ ತನ್ನ ಹೋರಾಟವನ್ನು ಜಿಯಲ್ಲಿ ಮುಂದುವರಿಸುತ್ತದೆ. ಈ ಹೋರಾಟ ಶಿಕಾರಿಪುರದಿಂದಲೇ ಆರಂಭವಾಗುತ್ತದೆ. ಆ ತಾಲ್ಲೂಕಿನಲ್ಲಿಯೇ ಸುಮಾರು ೨೫ ಸಾವಿರ ಸಂತ್ರಸ್ತರಿzರೆ. ವಿಜಯೇಂದ್ರ, ಗೋಪಾಲಕೃಷ್ಣ ಬೇಳೂರು ಸೇರಿದಂತೆ ಯಾರೂ ಕೂಡ ರೈತರ ನೆರವಿಗೆ ಬಂದಿಲ್ಲ. ಹಾಗಾಗಿ ಹೋರಾಟ ಅನಿವಾರ್ಯ ಎಂದರು.
ಈ ಸಂದರ್ಭದಲ್ಲಿ ಪ್ರಮುಖರಾದ ಷಣ್ಮುಖ, ಪ್ರವೀಣ್ ಬ್ಯಾಡನಹಳ್ಳಿ, ಸರ್ವತ್ತೋಮ, ಸುಬ್ಬಪ್ಪ ಮುಂತಾದವರಿದ್ದರು.
