ಉದ್ಯೋಗಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಚಾರ್ಟೆಡ್ ಅಕೌಂಟೆಂಟ್ ಪದವಿ ಪಡೆದ ಅನ್ನದಾತನ ಪುತ್ರಿ…

Share Below Link

ಶಿಕಾರಿಪುರ : ತಾಲೂಕಿನ ಬೆಲವಂತನಕೊಪ್ಪದ ಪಾರ್ವತಮ್ಮ ಹಾಗೂ ಶಿವಯೋಗಪ್ಪ ದಂಪತಿಯ ಪುತ್ರಿ ಎಸ್.ಎಚ್. ಪಲ್ಲವಿ ಅವರು ಭಾರತದ ಚಾರ್ಟೆಡ್ ಅಕೌಂಟೆಂಟ್ ಸಂಸ್ಥೆಯಿಂದ ಪದವಿ ಪಡೆದಿರುತ್ತಾಳೆ.
ಅಪ್ಪಟ ರೈತನ ಪುತ್ರಿ ಪಲ್ಲವಿ ಶಿವಮೊಗ್ಗದ ಎಜುರೇಟ್ ಕಾಲೇಜ್ ಆಫ್ ಮ್ಯಾನೇಜ್ ಮೆಂಟ್‌ನಲ್ಲಿ ಬಿ.ಕಾಂ ಪದವಿ ಪಡೆದು ಆರ್ಟಿಕಲ್ ಶಿಪನ್ನು ಬೆಂಗಳೂರಿನS P R N & ASSOCIATES, Charterd Acvountantsನಲ್ಲಿ ಪೂರ್ಣಗೊಳಿಸಿzಳೆ. ಗ್ರಾಮೀಣ ಪ್ರತಿಭೆ ಪಲ್ಲವಿಯ ಸಾಧನೆಗೆ ಇಲ್ಲಿನ ಪ್ರತಿಷ್ಠಿತ ಶಿವ ಸಹಕಾರಿ ಬ್ಯಾಂಕ್ ಆಡಳಿತ ಮಂಡಳಿ ಸದಸ್ಯರು ಸಿಬ್ಬಂದಿ ವರ್ಗದ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಬ್ಯಾಂಕ್ ಅಧ್ಯಕ್ಷ ಮಹದೇವ ಪಾಟೀಲ್, ಉಪಾಧ್ಯಕ್ಷೆ ಲೀಲಾವತಿ ನಿರ್ದೇಶಕ ಎಲ್.ಗಣೇಶ್, ಪರಮೇಶ್ವರಪ್ಪ ಮಳೂರು, ಮುಖ್ಯ ಪ್ರಬಂಧಕ ಕೆ.ಆರ್ ಬಸವರಾಜಪ್ಪ ಮತ್ತಿತರರು ಹಾಜರಿದ್ದರು.