ರಾಜ್ಯ ಸರ್ಕಾರದ ವಿರುದ್ಧ ಜೆಡಿಎಸ್ನಿಂದ ಬೃಹತ್ ಪ್ರತಿಭಟನೆ…
ಶಿವಮೊಗ್ಗ: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದ ಸತತ ವೈಫಲ್ಯ ಗಳ ಬಗ್ಗೆ ಜನಜಗೃತಿ ಮೂಡಿಸಲು ಶಿವಮೊಗ್ಗ ನಗರ ಜೆಡಿಎಸ್ ವತಿ ಯಿಂದ ಜು.೫ರ ನಾಳೆ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದೆ.
ರಾಜ್ಯ ಸರ್ಕಾರ ಮಿತಿಮೀರಿದ ಭ್ರಷ್ಟಾಚಾರ, ಸ್ವಜನಪಕ್ಷಪಾತ, ಎ ಇಲಾಖೆಯಲ್ಲೂ ತಾಂಡವ ವಾ ಡುತ್ತಿರುವ ಲಂಚಗುಳಿತನ, ಸ್ವಪಕ್ಷೀ ಯ ಶಾಸಕರಿಂದಲೇ ವಸತಿ ಇಲಾಖೆ ಯಲ್ಲಿನ ಬ್ರಹ್ಮಾಂಡ ಭ್ರಷ್ಟಾಚಾರದ ಆರೋಪ, ಆರ್ಥಿಕ ದಿವಾಳಿತನದಿ ಂದಾಗಿ ಅಭಿವೃದ್ಧಿ ಕಾರ್ಯಗಳು ಶೂನ್ಯವಾಗಿದೆ ಎಂದು ಆರೋಪಿಸಿ ಈ ಪ್ರತಿಭಟನಾ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದೆ.
ನಾಳೆ ಬೆಳಿಗ್ಗೆ ೧೧ ಗಂಟೆಗೆ ಜಿ ಜೆಡಿಎಸ್ ಕಾರ್ಯಾಲಯದಿಂದ ಪ್ರತಿಭಟನಾ ಮೆರವಣಿಗೆ ಹೊರಟು ನೆಹರೂ ರಸ್ತೆ, ಅಮೀರ್ ಅಹ್ಮದ್ ವೃತ್ತ, ಸೀನಪ್ಪಶೆಟ್ಟಿ ವೃತ್ತ, ಮಹಾ ವೀರ ವೃತ್ತದ ಮೂಲಕ ಜಿಧಿಕಾರಿಗಳ ಕಛೇರಿ ತಲುಪಿ ಮನವಿ ಸಲ್ಲಿಸಲಾಗುವುದು.
ಈ ಪ್ರತಿಭಟನಾ ಮೆರವಣಿಗೆ ಯಲ್ಲಿ ಗ್ರಾಮಾಂತರ ಕ್ಷೇತ್ರದ ಶಾಸಕ ಶಾರದಾ ಪೂರ್ಯಾನಾಯ್ಕ್, ಮಾಜಿ ಶಾಸಕ ಕೆ.ಎಬಿ. ಪ್ರಸನ್ನಕುಮಾರ್, ಜಿ ಜೆಡಿಎಸ್ ಅಧ್ಯಕ್ಷ ಕಡಿದಾಳ್ ಗೋಪಾಲ್ ಸೇರಿದಂತೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಲಿzರೆ ಎಂದು ಶಿವಮೊಗ್ಗ ನಗರ ಜೆಡಿಎಸ್ ಅಧ್ಯಕ್ಷ ದೀಪಕ್ಸಿಂಗ್ ತಿಳಿಸಿzರೆ.
