ತಾಜಾ ಸುದ್ದಿ

ವರ್ಷದ ನಂತರ ತಾಯಿ ಮಡಿಲು ಸೇರಿದ ಪುತ್ರ…

Share Below Link

ಹೊಸನಗರ : ಕಳೆದೊಂದು ವರ್ಷದಿಂದ ಕಾಣೆ ಯಾಗಿದ್ದ ಮಗ ಇದೀಗ ಮತ್ತೆ ತಾಯಿ ಮಡಿಲು ಸೇರಿದ ಅಪರೂಪದ ಪ್ರಸಂಗ ನಗರದಲ್ಲಿ ವರದಿಯಾಗಿದೆ.
ರಾಯಚೂರಿನ ಮಸ್ಕಿ ತಾಲೂ ಕಿನ ಯುವಕ ದಾವುದ್ (೨೦) ವರ್ಷದ ಹಿಂದೆ ಮನೆ ಬಿಟ್ಟು ಬಂದಿದ್ದ, ಹೊಸನಗರ ತಾಲೂಕಿನ ಬಿದನೂರು ನಗರದ ಸಮೀಪ ಬುಧವಾರ ಈತ ಪತ್ತೆಯಾಗಿದ್ದು ಕೆಲ ಗಂಟೆಯಲ್ಲಿ ತಾಯಿಯ ಮಡಿ ಲು ಸೇರಿದ್ದು, ಆ ಕುಟುಂಬದಲ್ಲಿ ಸಂತಸ ಮೂಡಿಸಿದೆ.
ನಗರ ಸಮೀಪದ ನುಲಿಗೇರಿ ಯಲ್ಲಿ ದಾವುದ್ ಬಯಾರಿಕೆ ತಣಿಸಿ ಕೊಳ್ಳಲು ಚರಂಡಿ ನೀರು ಕುಡಿ ಯುತ್ತಿದ್ದ. ಈ ವೇಳೆ ಸ್ಥಳೀಯ ಯಕ್ಷಗಾನ ಕಲಾವಿದರೊಬ್ಬರು ಗಮನಿಸಿzರೆ. ಕೂಡಲೇ ಅವನಿಗೆ ಉಟೊಪಚಾರ ಮಾಡಿಸಿ, ಬಟ್ಟೆ ನೀಡಿzರೆ. ಪೂರ್ವಾಪರ ವಿಚಾರಿ ಸಿದಾಗ ಸುಮ್ಮನೆ ಗುಣಗುತ್ತಿದ್ದ ಯುವಕ ರಾಯಚೂರು, ಮಸ್ಕಿ ಎಂದು ಹೇಳಿzನೆ. ಕೂಡಲೇ ಈ ಯುವಕನ ವಿಡಿಯೋ ಮಾಡಿ ಪರಿಚಯದವರು ಇದ್ದರೆ ಮಾಹಿತಿ ಕೊಡಿ ಎಂದು ಸಾಮಾಜಿಕ ಜಲ ತಾಣದಲ್ಲಿ ಹರಿಬಿಟ್ಟಿzರೆ.
ನೂಲಿಗ್ಗೇರಿ, ದುಬಾರತಟ್ಟಿ ಯುವಕರ ಸಹಕಾರ ಮತ್ತು ಜಲ ತಾಣದ ಗೆಳೆಯರ ಸ್ಪಂದನೆಯಿಂದ ಕೆಲವೇ ಗಂಟೆಯೊಳಗೆ ಈತನನ್ನು ರಾಯಚೂರು ಜಿಯ ತೀರ್ಥ ಭಾವಿ ಗ್ರಾಮದ ಹುಸೇನಾವಿ ಅವರ ಪುತ್ರ ಎಂದು ಗುರುತಿಸಲಾಯಿತು. ನಂತರ ನಗರ ಠಾಣೆ ಎ ಎಸ್ ಐ ಕುಮಾರ್ ಅವರ ಸಹಕಾರದಿಂದ ಮಸ್ಕಿ ಪೊಲೀಸ್ ಠಾಣೆಗೆ ಮಾಹಿತಿ ರವಾನಿಸಿ ಯುವಕನ ತಾಯಿ ಯನ್ನು ಸಂಪರ್ಕಿಸಿ ಅವರನ್ನು ನಗರಕ್ಕೆ ಬರಲು ತಿಳಿಸಲಾಯಿತು.
ಹುಸೇನಾಬಿ ಮತ್ತು ಸಂಬಂಧಿಕರು ಅಲ್ಲಿಂದ ರಾತ್ರಿಯೇ ಹೊರಟು ಗುರುವಾರ ಬೆಳಿಗ್ಗೆ ೬ ಗಂಟೆಗೆ ನಗರಕ್ಕೆ ಬಂದರು, ನಂತರ ಪೊಲೀಸರ ಸಮ್ಮುಖದಲ್ಲಿ ವಿಚಾರಿಸಿ ದಾವುದ್ ನನ್ನು ಅವರೊಂದಿಗೆ ಕಳುಹಿಸಿಕೊಡ ಲಾಯಿತು.
ನುಲಿಗೇರಿ ಮತ್ತು ದಬ್ಬಾರ ತಟ್ಟಿ ಯುವಕರ ತಂಡ ರಾತ್ರಿ ಸರ್ಕಾರಿ ಆಸ್ಪತ್ರೆಯಲ್ಲಿ ದಾವುದ್ ನ ಆರೋಗ್ಯ ತಪಾಸಣೆ ಮಾಡಿಸಿ, ಆತನಿಗೆ ಊಟೋಪಚಾರ ಮಾಡಿಸಿ ಬೆಳಿಗ್ಗೆವರೆಗೂ ಕಾದು ಆತನನ್ನು ತಾಯಿಯ ಮಡಿಲು ಸೇರಿಸಿzರೆ. ಇವರ ಈ ಕಾರ್ಯ ಪ್ರಶಂಸೆಗೆ ಪಾತ್ರವಾಗಿದೆ.
ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಂತ್ರಸ್ತ ಯುವಕನ ತಾಯಿ ಹುಸೇನಾಭಿ ಅವರು, ಕಳೆ ದೊಂದು ವರ್ಷದಿಂದ ಮಗನಿಗಾಗಿ ರಾಜ್ಯದೆಡೆ ಹಾಗೂ ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲೂ ಹುಡು ಕಾಟ ನಡೆಸಿzವು. ಗಂಡನನ್ನು ಕಳೆದುಕೊಂಡು ೧೨ ವರ್ಷವಾಗಿದೆ. ಇರುವ ಒಬ್ಬನೇ ಮಗನಿಗಾಗಿ ನಿತ್ಯವೂ ದೇವರಲ್ಲಿ ಪ್ರಾರ್ಥಿಸುತ್ತಿz, ಆ ದೇವರು ಕೊನೆಗೂ ನಗರದ ಯುವಕರ ಮೂಲಕ ನನ್ನ ಮಗನ ನ್ನು ಹುಡುಕಿಕೊಟ್ಟ, ನಿಮಗೆಲ್ಲರಿಗೂ ಧನ್ಯವಾದಗಳು ಎಂದು ಸಂತೋಷವನ್ನು ಹಂಚಿಕೊಂಡರು.
ಈ ಕಾರ್ಯದಲ್ಲಿ ಕಾರ್ತಿಕ ಗೌಡ ಮಲ್ನಾಡ್, ಸುಪ್ರೀತ್ ಡಿಸೋಜ, ಸತೀಶ್ ಶೆಟ್ಟಿ, ಹಿದಾಯತ್, ಅಬೂಬಕ್ಕರ್, ನವೀನ್, ಹಂಝಾ, ಹರೀಶ್ ವಕ್ರತುಂಡ, ಆದರ್ಶ, ಚೇತನ್, ಫಯಾಜ್, ಅಶೋಕ, ನಗರ ಮತ್ತು ಮಸ್ಕಿ ಪೊಲೀಸರು ಸಹಕಾರ ನೀಡಿದ್ದರು.