ಶಿವಮೊಗ್ಗದಲ್ಲಿ ಸಾಹಿತಿಗಳು, ಲೇಖಕರ ಸಭೆ; ಡಿ. ಮಂಜುನಾಥ್‌ಗೆ ನೋಟೀಸ್: ಖಂಡನೆ
ಶಿವಮೊಗ್ಗ : ಕನ್ನಡ ಸಾಹಿತ್ಯ ಪರಿಷತ್ತು ಶಿವಮೊಗ್ಗ ಜಿಧ್ಯಕ್ಷ ಡಿ. ಮಂಜುನಾಥ್ ಅವರ ಪ್ರಾಥಮಿಕ ಸದಸ್ಯತ್ವ ಅಮಾನತು ಮಾಡುವುದಾಗಿ ನೊಟೀಸ್ ನೀಡಿರುವುದು ಮತ್ತು ಕೇಂದ್ರ ಕಸಾಪ ಅಧ್ಯಕ್ಷರು ತಮ್ಮ ಎ ಅಧಿಕಾರವನ್ನು ಕೇಂದ್ರೀಕರಿಸಿಕೊಳ್ಳುವ ರೀತಿ ಬೈಲಾ ತಿದ್ದುಪಡಿ ಮಾಡಲು ಮುಂದಾಗಿ ರುವುದನ್ನು ಶಿವಮೊಗ್ಗ ಲೇಖಕರು, ಸಾಹಿತಿಗಳು ಹಾಗೂ ಕನ್ನಡ ಸಾಹಿತ್ಯ ಪರಿಷತ್ ಹಿತೈಷಿಗಳು ತೀವ್ರವಾಗಿ ಖಂಡಿಸಿzರೆ.
ನಗರದ ಪತ್ರಿಕಾ ಭವನದಲ್ಲಿ ಆಯೋ ಜಿಸಿದ್ದ ಸಮಾಲೋಚನಾ ಸಭೆ ಯಲ್ಲಿ ಈ ಕುರಿತು ಹಲವರು ಮಾತನಾಡಿದರು. ರಂಗಕರ್ಮಿ ಹೊನ್ನಾಳಿ ಚಂದ್ರಶೇಖರ್ ಅವರು ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ ಸರ್ವ ಸದಸ್ಯರ ಸಭೆಯಲ್ಲಿ ಬೈಲಾ ತಿದ್ದುಪಡಿಸಿಗೆ ಪ್ರಸ್ತಾವನೆ ಮಂಡಿಸಲಾಗಿದೆ. ಈ ತಿದ್ದುಪಡಿಯಲ್ಲಿ ಬಹಳಷ್ಟು ಅಧಿಕಾರವನ್ನು ಕೇಂದ್ರ ಕಸಾಪ ಕಾರ್ಯಕಾರಿ ಸಮಿತಿಗೆ ಕೊಡುವ ಬದಲಾಗಿ ಕೇಂದ್ರ ಕಸಾಪ ಅಧ್ಯಕ್ಷರಿಗೆ ನೀಡಲಾಗಿದೆ. ಇದು ಒಬ್ಬನೇ ವ್ಯಕ್ತಿಗೆ ಅಧಿಕಾರವನ್ನು ಕೊಡುವ ಮೂಲಕ ಅವರನ್ನು ಸರ್ವಾಧಿಕಾರಿ ಮಾಡುವ ಹುನ್ನಾರ ಎಂದರು.
ಕನ್ನಡ ಸಾಹಿತ್ಯ ಪರಿಷತನಲ್ಲಿ ನಾಲ್ಕುವರೆ ಲಕ್ಷ ಆಜೀವ ಸದಸ್ಯರಿzರೆ. ಆದರೆ ಇದೇ ತಿಂಗಳು ನಡೆಯಲಿರುವ ಸರ್ವಸದಸ್ಯರ ಸಭೆಗೆ ಕೇವಲ ೩೦೦ ಸೀಟುಗಳಿರುವ ಸಭಾಂಗಣ ನಿಗದಿ ಮಾಡಲಾಗಿದೆ. ಅತಿ ಹೆಚ್ಚು ಸದಸ್ಯರಿರುವ ಬೆಂಗಳೂರಿನ ಬದಲು ಸುಲಭವಾಗಿ ಎಲ್ಲರೂ ತಲುಪಲು ಅಸಾಧ್ಯವಾಗಿರುವ ಬಳ್ಳಾರಿ ಜಿ ಸಂಡೂರು ತಾಲೂಕಿನ ನಂದಿಹಳ್ಳಿಯಲ್ಲಿರುವ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಇದು ಸರ್ವ ಸದಸ್ಯರ ಸಭೆಯಿಂದ ಅಜೀವ ಸದಸ್ಯರನ್ನು ದೂರವಿಡುವ ಹುನ್ನಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕುವೆಂಪು ವಿವಿ ಸಿಂಡಿಕೇಟ್ ಸದಸ್ಯ ಕೆ.ಪಿ. ಶ್ರೀಪಾಲ್ ಅವರು ಮಾತನಾಡಿ, ಡಿ. ಮಂಜುನಾಥ್ ಅವರಿಗೆ ಕ್ಷುಲ್ಲಕ ಕಾರಣ ಗಳನ್ನು ನೀಡಿ ನೊಟೀಸ್ ನೀಡಲಾಗಿದೆ. ಅಲ್ಲದೇ ಬೈಲಾ ತಿದ್ದುಪಡಿಯೂ ಸಹ ಕೇಂದ್ರ ಸಮಿತಿ ಅಧ್ಯಕ್ಷರಿಗೆ ಸರ್ವಾಧಿಕಾರವನ್ನು ನೀಡುತ್ತದೆ. ಇದು ಪ್ರಜತಂತ್ರ ವಿರೋಧಿ. ಇವೆಲ್ಲವನ್ನೂ ನ್ಯಾಯಾಲಯ ದಲ್ಲಿ ಪ್ರಶ್ನಿಸಲಾಗುವುದು ಎಂದರು.
ಹಿರಿಯ ಸಮಾಜವಾದಿ ಪುಟ್ಟಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯೆ ಅಕ್ಷತಾ ಹುಂಚದಕಟ್ಟೆ, ಶಿವಮೊಗ್ಗ ಜಿ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರಾಗಿದ್ದ ಪ್ರೋ. ಜಿ.ಕೆ. ರಮೇಶ್, ಸಾಹಿತಿಗಳಾದ ಡಾ. ಶಾಂತರಾಮಪ್ರಭು, ಡಾ. ಶೇಖರ್ ಗೌಳೇರ್, ಡಾ. ಹೆಚ್.ಟಿ. ಕಷ್ಣಮೂರ್ತಿ, ಎಂ. ನವೀನ್ ಕುಮಾರ್, ಎಂ. ನವೀನ್ ಕುಮಾರ್, ಮಂಜುನಾಥ ಕಾಮತ್, ಟಿ.ಕೆ. ರಮೇಶ್ ಶೆಟ್ಟಿ, ಸಜಶಂಕರ ಹರಳೀಮಠ, ಅನಿತ ಸೂರ್ಯ, ಪ್ರೊ| ಸತ್ಯನಾರಾಯಣ, ರಾಕೇಶ್ ಡಿಸೋಜ ಸೇರಿದಂತೆ ಶಿವಮೊಗ್ಗ ಜಿಯ ಹಲವೆಡೆಯಿಂದ ಆಗಮಿಸಿದ ನೂರಾರು ಸಾಹಿತಿಗಳು, ಲೇಖಕರು ಇದ್ದರು.
