ಪೊಲೀಸರ ಮೇಲೆ ಕಲ್ಲು ತೂರಿದ ದುಷ್ಕರ್ಮಿಗಳ ವಿರುದ್ಧ ಬಿಜೆಪಿ ಯುವ ಮೋರ್ಛಾ ಪ್ರತಿಭಟನೆ
ಶಿವಮೊಗ್ಗ: ಮೈಸೂರಿನಲ್ಲಿ ಪೊಲೀಸ್ ಠಾಣೆ, ಪೊಲೀಸರು ಹಾಗೂ ಪೊಲೀಸ್ ವಾಹನಗಳ ಮೇಲೆ ಕಲ್ಲು ತೂರಿ ದಾಳಿ ಮಾಡಿದ ದುಷ್ಕರ್ಮಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಇಂದು ಶಿವಮೊಗ್ಗ ಜಿ ಬಿಜೆಪಿ ಯುವ ಮೋರ್ಚಾ ವತಿಯಿಂದ ಜಿ ರಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಜಿ ಕಾರ್ಯದರ್ಶಿ ಹರಿಕೃಷ್ಣ ಅವರು, ಸಿಎಂ ತವರು ಜಿ ಮೈಸೂರಿ ನಲ್ಲಿ ಯುವಕನೊಬ್ಬ ಸಾಮಾಜಿಕ ಜಲತಾಣದಲ್ಲಿ ದೆಹಲಿಯಲ್ಲಿ ಬಿಜೆಪಿ ಗೆಲುವು ಸಾಧಿಸಿದ ಹಿನ್ನಲೆಯಲ್ಲಿ ಹಾಕಿದ ಪೋಸ್ಟ್ಗೆ ಉದ್ವಿಗ್ನ ವಾತಾವರಣ ಉಂಟಾಗಿದ್ದು, ನಿನ್ನೆ ರಾತ್ರಿ ಠಾಣೆ ಮೇಲೆ ದಾಳಿ ನಡೆಸಲಾ ಗಿದೆ. ಪೋಸ್ಟ್ ಹಾಕಿದ ಯುವಕನನ್ನು ಪೊಲೀಸರು ಈಗಾಗಲೇ ಬಂಧಿಸಿ zರೆ. ತನಿಖೆ ನಡೆಯುತ್ತಿದೆ. ಆದರೂ ಕೂಡ ಒಂದು ಕೋಮಿನ ಕೆಲವು ಯುವಕರು ಪೊಲೀಸರ ಮೇಲೆ ದಾಳಿ ಮಾಡಿzರೆ ಎಂದು ದೂರಿದರು.

ಸಮಾಜವನ್ನು ರಕ್ಷಣೆ ಮಾಡುವ ಪೊಲೀಸರಿಗೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ರಕ್ಷಣೆ ಇಲ್ಲದಂತಾಗಿದೆ. ಪೊಲೀಸರಿಗೆ ರಕ್ಷಣೆ ಇಲ್ಲದ ಮೇಲೆ ಅವರು ಸಾರ್ವಜನಿಕರನ್ನು ಹೇಗೆ ರಕ್ಷಿಸುತ್ತಾರೆ ಎನ್ನುವುದು ಜನಸಾಮಾನ್ಯರ ಪ್ರಶ್ನೆಯಾಗಿದ್ದು, ಗಲಭೆ ಸೃಷ್ಟಿಸಿ ಸಾರ್ವಜನಿಕರಲ್ಲಿ ಭಯದ ವಾತಾವರಣ ನಿರ್ಮಿಸಿದ ಗೂಂಡಾಗಳನ್ನು ಕೂಡಲೇ ಬಂಧಿಸಿ ಕಠಿಣ ಕಾನೂನು ಕ್ರಮ ಜರುಗಿಸ ಬೇಕೆಂದು ಅವರು ಆಗ್ರಹಿಸಿದರು.
ಪೊಲೀಸರಿಗೆ ಬಿಜೆಪಿ ಯುವ ಮೋರ್ಚಾ ರಕ್ಷಣೆ ನೀಡುತ್ತದೆ. ನಿಮ್ಮೊಂದಿಗೆ ನಾವಿzವೆ. ಹೆದರುವ ಅಗತ್ಯವಿಲ್ಲ. ನಿಮ್ಮ ಕರ್ತವ್ಯ ನೀವು ನಿರ್ವಹಿಸಿ ಎಂದು ಹೇಳಿದರು.
ಯುವ ಮೋರ್ಚಾ ಪ್ರಮುಖರಾದ ಪ್ರಶಾಂತ್ ಕುಕ್ಕೆ, ದರ್ಶನ್, ರಾಹುಲ್ ಬಿದರೆ, ದೀನ ದಯಾಳ್, ಮೋಹನ್ ರೆಡ್ಡಿ, ಮಾಲತೇಶ್, ರಶ್ಮಿ ಶ್ರೀನಿವಾಸ್, ಸುರೇಖಾ ಮುರಳೀಧರ್, ಚೈತ್ರಾ ನಾಯಕ್, ಸುರೇಖಾ ಪಾಲಾಕ್ಷಪ್ಪ, ಹರೀಶ್ ಮತ್ತಿತರರು ಇದ್ದರು.
