ಉಡುಗಣಿ ಸರ್ಕಾರಿ ಉರ್ದು ಶಾಲೆಗೆ ಶೇ.೯೫.೪೫ ಫಲಿತಾಂಶ…
ಶಿಕಾರಿಪುರ : ಈ ಬಾರಿಯ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ತಾಲೂಕಿನ ಉಡುಗಣಿ ಸರ್ಕಾರಿ ಉರ್ದು ಪ್ರೌಢ ಶಾಲೆಗೆ ಶೇ.೯೫.೪೫ ಫಲಿತಾಂಶ ಲಭಿಸಿದ್ದು, ವಿದ್ಯಾರ್ಥಿನಿ ತಹರಿನ್ ತಾಜ್ ೫೮೫ ಅಂಕಗಳಿಸಿ ಉತ್ತಮ ಸಾಧನೆ ಮೂಲಕ ಪ್ರಥಮ ಸ್ಥಾನಗಳಿಸಿzರೆ.
ಈ ಬಾರಿ ಉಡುಗಣಿ ಗ್ರಾಮದ ಸರ್ಕಾರಿ ಉರ್ದು ಪ್ರೌಢ ಶಾಲೆ ಯಲ್ಲಿನ ೨೨ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ೧೩ ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ ಯಲ್ಲಿ, ೬ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಹಾಗೂ ಇಬ್ಬರು ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿ ಯಲ್ಲಿ ಉತ್ತೀರ್ಣರಾಗಿ ಶೇ.೯೫.೪೫ ಫಲಿತಾಂಶ ಶಾಲೆಗೆ ಲಭಿಸಿದೆ.
ಶಾಲೆಯ ತಹರಿನ್ ತಾಜ್ ೫೮೫ ಅಂಕಗಳಿಸಿ ಶೇ.೯೩.೬ ಪ್ರಥಮ ಸ್ಥಾನಗಳಿಸಿzರೆ. ಗ್ರಾಮದ ಮೊಹಮ್ಮದ್ ರಫೀ ಹಾಗೂ ಖಲೀದಾ ಖಾನಂ ರವರ ಪುತ್ರಿ ತಹರೀನ್ ತಾಜ್ ಹಾಗೂ ಎಲ್ಲ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಮುಖ್ಯ ಶಿಕ್ಷಕ ವಸಂತ ಚಕ್ರಸಾಲಿ ಸಹಿತ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಸಲೀಮುಖಾನ್, ಸದಸ್ಯರು ಶಿಕ್ಷಕ ಮಾರುತಿ ಹಾಗೂ ಸಿಬ್ಬಂದಿ ವರ್ಗ ಗ್ರಾಮಸ್ಥರು ಅಭಿನಂದಿಸಿzರೆ.