ಜಿಲ್ಲಾ ಸುದ್ದಿತಾಜಾ ಸುದ್ದಿ

೫೫ನೇ ರಾಷ್ಟ್ರೀಯ ನೃತ್ಯೋತ್ಸವ…

Share Below Link

ಚನ್ನರಾಯಪಟ್ಟಣ:ಭಾರತೀಯ ಸಂಸ್ಕೃತಿಯ ಭರತನಾಟ್ಯ ಕಲೆಯನ್ನು ವಜ್ರಕ್ಕೆ ಹೋಲಿಸಿ, ಅಕಾಡೆಮಿ ಅಯೋಜನ ಕಾರ್ಯದರ್ಶಿ ಡಾ. ಸ್ವಾತಿಯವರು ಶಾಸ್ತ್ರೀಯ ಕಲೆಗಳ ಹೋರಾಟಗಾರ್ತಿ ಎಂದು ಶ್ರೀಕ್ಷೇತ್ರದ ಶ್ರವಣಬೆಳಗೊಳದ ಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮಿಜಿ ಅವರು ಬಿರುದು ನೀಡಿ ಬಣ್ಣಿಸಿದರು.
ಹಾಸನ ಜಿಯ ಚನ್ನರಾಯಪಟ್ಟಣದ ನ್ಯಾಷನಲ್ ಕ್ಲಾಸಿಕಲ್ ಡ್ಯಾನ್ಸ್ ಅಕಾಡೆಮಿ ಹಾಗು ಶ್ರೀ ಕ್ಷೇತ್ರ ಜೈನ ಮಠ ಶ್ರವಣಬೆಳಗೊಳ ಇವರ ಆಶ್ರಯ ದಲ್ಲಿ ನಡೆದ ೫೫ನೇ ರಾಷ್ಟ್ರೀಯ ನೃತ್ಯೋತ್ಸವ ಉದ್ಘಾಟಿಸಿ ಮಾತನಾಡಿದ ಪೂಜ್ಯರು, ಗ್ರಾಮೀಣ ಪ್ರದೇಶಗಳಲ್ಲಿರುವ ಹಲವಾರು ಪ್ರತಿಭಾವಂತ ವಿದ್ಯಾರ್ಥಿಗಳನ್ನು ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಉದ್ದೇಶದಿಂದ ಈ ನೃತ್ಯ ಅಕಾಡೆಮಿ ಉತ್ತಮ ಕಾರ್ಯ ನಿರ್ವಹಿಸಿಕೊಂಡು ಬರುತ್ತಿದೆ. ವಿಶ್ವದಾದ್ಯಂತ ಸಾವಿರಾರು ಜನ ಕಲಾವಿದರ ಸದಸ್ಯತ್ವವನ್ನು ಹೊಂದಿರುವ ಈ ಅಕಾಡೆಮಿ ವತಿಯಿಂದ ಭಾರತೀಯ ಸಂಸ್ಕೃತಿಯಲ್ಲಿ ಒಂದಾದ ೮ ಶಾಸ್ತ್ರೀಯ ನೃತ್ಯಗಳನ್ನು ಒಂದೆ ವೇದಿಕೆಯಲ್ಲಿ ನೋಡುವಂತಹ ಕಾರ್ಯಕ್ರಮ ಹಾಗೂ ರಾಷ್ಟ್ರೀಯ ನೃತ್ಯೋತ್ಸವವನ್ನು ಭಾರತದ ಪ್ರಖ್ಯಾತ ಮಂದಿರಗಳಲ್ಲಿ ಹಾಗೂ ವಿಶೇಷ ಸ್ಥಾನಮಾನವುಳ್ಳ ಪ್ರವಾಸೋದ್ಯಮ ಜಿಗಳಲ್ಲಿ ರಾಷ್ಟ್ರೀಯ ನೃತ್ಯಗಳನ್ನು ಮಾಡಿಸುವು ದರ ಮೂಲಕ ಸಾಂಸ್ಕೃತಿಕ ಕಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಈ ವರಿಗೆ ಅಂತರಾಷ್ಟ್ರೀಯ ಮಲೇಶಿಯಾ ಸೇರಿದಂತೆ ಭಾರತ ದೇಶದ ತಿರುಪತಿ ಗುಜರಾತ್, ಮಹಾರಾಷ್ಟ್ರ, ಶಿರಡಿ, ಮಂತ್ರಾಲಯ, ಧರ್ಮಸ್ಥಳ, ಹೊರನಾಡು, ಗೋವಾ, ಹೈದರಾಬಾದ್, ಚೆನ್ನೈ, ಮೈಸೂರ್, ತಂಜವೂರ್, ಬೆಳಗಾಂ, ಬೇಲೂರು, ಕಾರವಾರ, ಊಟಿ, ಶಿರಸಿ, ಹಾಸನ, ಬೆಂಗಳೂರು, ಮಂಡ್ಯ, ಇನ್ನು ಇತರೆ ಭಾಗಗಳಲ್ಲಿ ೫೪ ರಾಷ್ಟ್ರೀಯ ನೃತ್ಯೋವಗಳನ್ನು ಮಾಡುತ್ತಿರುವ ಬಗ್ಗೆ ತಿಳಿದು ಬಂದಿದ್ದು ಇನ್ನೂ ಮುಂದೆಯೂ ರಾಷ್ಟ್ರೀಯ ನೃತ್ಯೋತ್ಸವ ಶತಕ ಗಳಿಸಲಿ ಎಂದು ಡಾ. ಸ್ವಾತಿ ಅವರಿಗೆ ಶ್ರೀಗಳು ಹಾರೈಸಿದರು.
ಡಾ. ಯುವರಾಜ್ ಅವರು ಮಾತನಾಡಿ ರಾಜ್ಯ ಹಾಗೂ ವಿವಿಧೆಡೆಗಳಲ್ಲಿ ಮೂಲಕ ಈವರಿಗೆ ೧೦,೦೦೦ಕ್ಕೂ ಹೆಚ್ಚು ಕಲಿಯುವ, ಕಲಿಯುತ್ತಿರುವ, ಕಲಿತಿರುವ ಪ್ರತಿಭಾವಂತ ನೃತ್ಯ ಕಲಾವಿದರಿಗೆ ವೇದಿಕೆ ಕಲ್ಪಿಸಿಕೊಡುತ್ತಿರುವುದು ಬಹಳ ಸಂತಸ ತಂದಿದೆ ಎಂದರು.
ಪೋಲಿಸ್ ಇಲಾಖೆಯ ಗಣೇಶ್ ಅವರು ಮಾತನಾಡಿ ಶಾಸ್ತ್ರೀಯ ಸಂಗೀತ ಸಾಹಿತ್ಯ, ಹಾಗೂ ನೃತ್ಯೋತ್ಸವ ಒಂದು ಅಮರ ಕಲೆಯಾಗಿದ್ದು, ಇಂತಹ ಅಕಾಡೆಮಿ ಮಾಡಿಕೊಂಡು ಬರುತ್ತಿದ್ದು ಪ್ರತಿ ನೃತ್ಯೋತ್ಸವದಲ್ಲೂ ೪ ವರ್ಷದಿಂದ ೬೦ ವರ್ಷ ವಯಸ್ಸಿನ ಕಲಾವಿದರು ಕಾರ್ಯಕ್ರಮದಲ್ಲಿ ಭಾಗವಹಿಸು ತ್ತಾರೆ ಅಲ್ಲದೆ ನಮ್ಮ ಅಕಾಡೆಮಿ ಕೋವಿಡ್ ಸಂದರ್ಭದಲ್ಲಿ ನಿರಂತರವಾಗಿ ಆನ್ಲೈನ್ ಮೂಲಕ ನೃತ್ಯ ಪ್ರದರ್ಶಿಸಿ ಇಂಟರ್ ನ್ಯಾಷನಲ್ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲೆ ಮಾಡಿರುವುದು ರಾಷ್ಟ್ರೀಯ ಮಟ್ಟದಲ್ಲಿ ಹೆಗ್ಗಳಿಕೆ ಪಡೆದಿದೆ ಎಂದರು.
ಸಮಾಜ ಸೇವಕ ರಮೇಶ್ ಮಾತನಾಡಿ ಈ ನೃತ್ಯೋತ್ಸವದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಉದ್ದೇಶ ಅಕಾಡೆಮಿ ಮಾಡಿಕೊಂಡು ಬರುತ್ತಿರುವುದು ಸಂತೋಷ ಸಂಗತಿ ಎಂದರು.
ಚನ್ನರಾಯಪಟ್ಟಣ ಅಕಾಡೆಮಿ ಕಾರ್ಯದರ್ಶಿ ಡಾ. ಸ್ವಾತಿ ಭಾರದ್ವಾಜ್ ಅವರು ಮಾತನಾಡಿ ಅಂತರರಾಷ್ಟ್ರೀಯ ಪ್ರವಾಸಿ ತಾಣವಾದ ಶ್ರವಣಬೆಳಗೊಳದಲ್ಲಿ ನೃತ್ಯೋತ್ಸವದಲ್ಲಿ ವಿಶ್ವದಾದ್ಯಂತ ೨೦೦ ಕ್ಕೂ ಹೆಚ್ಚು ಕಲಾವಿದರು ಶ್ರೀ ಕ್ಷೇತ್ರ ಶ್ರವಣಬೆಳಗೊಳಕ್ಕೆ ಆಗಮಿಸಿ ಭಾಗವಸಿಹಿzರೆ ಎಂದ ಅವರು ೧೦೦ ನೇ ರಾಷ್ಟ್ರೀಯ ನೃತ್ಯೋತ್ಸವ ಕಾರ್ಯಕ್ರಮ ಮಾಡಲು ಹಾರೈಸಿ ಎಂದು ಶ್ರೀಗಳವರಲ್ಲಿ ಡಾ. ಸ್ವಾತಿ ಅವರು ಪ್ರಾರ್ಥಿಸಿದರು.
ಅಭಿನವ ಚಾರುಕೀರ್ತಿ, ಶ್ರೀ, ಚಂದ್ರಶೇಖರ್ ಗುರೂಜಿ, ಡಾಕ್ಟರ್ ಯುವರಾಜ್, ಕಾವೇರಿ ನದಿ ಸ್ವಚ್ಚತಾ ಆಂದೋಲನ ಸಮಿತಿ ಅಧ್ಯಕ್ಷ ಎಂ.ಎನ್. ಕುಮಾರಸ್ವಾಮಿ, ಸಮಾಜ ಸೇವಕ ಪ್ರಕಾಶ್, ರಮೇಶ್, ಹೊನ್ನೇನಹಳ್ಳಿ ಜಗದೀಶ್ ಇನ್ನಿತರರಿದ್ದರು.