ಇತರೆಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ನಾಡಪ್ರಭು ಕೆಂಪೇಗೌಡರ ೫೧೪ನೇ ಜಯಂತಿ ಕಾರ್ಯಕ್ರಮ

Share Below Link

ಹೊನ್ನಾಳಿ: ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇ ಗೌಡರ ೫೧೪ನೇ ಜಯಂತಿ ಕಾರ್ಯಕ್ರಮವನ್ನು ಹೊನ್ನಾಳಿಯ ತಾಲೂಕು ಆಡಳಿತ ಕಚೇರಿ ಸಭಾಂ ಗಣದಲ್ಲಿ ಇಂದು ವಿಜೃಂಭಣೆ ಯಿಂದ ಆಚರಿಸಲಾಯಿತು.
ಶಿಶುಕಲ್ಯಾಣ ಅಭಿವೃದ್ಧಿ ಅಧಿಕಾರಿ ಶ್ರೀ ಮಹಾಂತ ಸ್ವಾಮಿ ಇವರು ಪ್ರಾಸ್ತಾವಿಕ ಮಾತನಾಡಿ ಕೆಂಪೇಗೌಡರು ಕೇವಲ ಒಂದು ಜತಿಗೆ ಸೀಮಿತ ರಲ್ಲ ಅವರು ಇಡೀ ನಾಡಿಗೆ ಸೀಮಿತವಾಗಿ ತಮ್ಮ ಆಡ ಳಿತವನ್ನು ನಡೆಸಿದರು ಎಂಬುದಕ್ಕೆ ಇಂದು ಬೆಳೆಯುತ್ತಿರುವ ಬೆಂಗ ಳೂರು ಸಾಕ್ಷಿ ಎಂದು ನುಡಿದರು.
೨೦೧೭ ರಿಂದ ಕರ್ನಾಟಕ ಘನ ಸರ್ಕಾರವು ಕೆಂಪೇಗೌಡರ ಜಯಂತಿಯನ್ನು ಎ ತಾಲೂಕು ಮಟ್ಟದಲ್ಲಿ ಹೋಬಳಿ ಮಟ್ಟದಲ್ಲಿ ಆಚರಿಸಬೇಕೆಂಬ ಆದೇಶವನ್ನು ಹೊರಡಿಸಿದ್ದರ ಪ್ರಯುಕ್ತ ಅಂದಿ ನಿಂದ ಇಂದಿನವರೆಗೂ ಕರ್ನಾಟಕ ಆದ್ಯಂತ ಈ ಒಂದು ಜಯಂತಿ ಯನ್ನು ಸಡಗರದಿಂದ ಆಚರಿಸ ಲಾಗುತ್ತಿದೆ ಎಂದು ತಿಳಿಸಿದರು.


ನಂತರ ಮಾತನಾಡಿದ ತಾಪಂ ಯ ಮುಖ್ಯ ಕಾರ್ಯ ನಿರ್ವಹ ಣಾಧಿಕಾರಿ ರಾಮಭೋವಿಯ ವರು ಇಂದು ನಾವು ೫೧೪ನೇ ಜಯಂತಿ ಆಚರಿಸುತ್ತಿದ್ದು ಕೇವಲ ಜಯಂತಿ ಆಚರಿಸಿದರೆ ಸಾಲದು ಈ ಜಯಂತಿಯನ್ನು ಆಚರಿಸುವ ಉದ್ದೇಶ ಏನು ಎಂಬುದನ್ನು ನಾವು ಎಲ್ಲರೂ ತಿಳಿದುಕೊಳ್ಳಬೇಕು ಎಂದು ಹೇಳಿದರು.
ಕೆಂಪೇಗೌಡರು ಯೆಲಹಂಕ ಪ್ರಭುಗಳಾಗಿ ತಮ್ಮ ಒಂದು ಕರ್ತ ವ್ಯವನ್ನು ಆರಂಭಿಸಿ ಅವರ ಆಸೆಯ ಂತೆ ಬೃಹತ್ ಆದ ನಗರವನ್ನು ಬೆಳೆ ಸಬೇಕು ಎಂಬ ಮಹಾ ದಾಶೆಯ ನ್ನು ಹೊಂದಿದ್ದರು ಅವರ ಇಚ್ಛೆ ಯಂತೆ ಬೆಂಗಳೂರು ನಗರ ಅವರು ಅನಿಸಿದ್ದಷ್ಟು ಇನ್ನು ವಿಸ್ತಾರವಾಗಿ ಬೆಳೆದಿದೆ ಎಂಬುದೇ ಸಾಕ್ಷಿ ಎಂದರು.
ನಾವು ಅವರಷ್ಟು ಕೆಲಸ ಮಾ ಡಲು ಸಾಧ್ಯವಾಗದೇ ಹೋದರು ಅವರು ಹೇಳಿಕೊಟ್ಟ ಮಾರ್ಗದಲ್ಲಿ ನಡೆದರೆ ಸಾಕು ಅಷ್ಟನ್ನು ಮಾತ್ರ ನಮ್ಮ ಜೀವನದಲ್ಲಿ ಅಳವಡಿಸಿ ಕೊಳ್ಳೋಣ ಎಂದರು ಕಾರ್ಯ ಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕು ದಂಡಾಧಿಕಾರಿ ಹಾಗೂ ತ ಹಶಿಲ್ದಾರ್ ತಿರುಪತಿ ಪಾಟೀಲ್ ರವರು ಮಾತನಾಡುತ್ತಾ ೧೫ನೇ ಶತಮಾನ ನಮ್ಮ ನಾಡಿನ ಸುವರ್ಣ ಈಗ ಅಂದು ವಿಜಯನಗರ ಸಾಮ್ರಾಜ್ಯದ ದಕ್ಷ ರಾಜರುಗಳಲ್ಲಿ ಶ್ರೀ ಕೃಷ್ಣದೇವರಾಯ ಅಗ್ರಮಾ ನ್ಯರು ಅಂದಿನ ವಿಜಯನಗರದ ರಾಜಧಾನಿಯಾಗಿದ್ದ ಹಂಪಿಯ ಬೀದಿ ಬೀದಿಗಳಲ್ಲಿ ಮುತ್ತು ರತ್ನಗ ಳನ್ನು ಸೇರಿನಿಂದ ಅಳೆದುಕೊಡು ತ್ತಿದ್ದರು ಎಂದರೆ ವಿಜಯನಗರ ಸಾಮ್ರಾಜ್ಯದ ವೈಭವ ಹೇಗಿತ್ತು ಎಂಬುದರ ಬಗ್ಗೆ ನಾವೆಲ್ಲರೂ ಚಿಂತಿಸಬೇಕಾಗಿದೆ ಎಂದರು.
ಶ್ರೀ ಕೃಷ್ಣದೇವರಾಯರಿಂದ ಆಳಲ್ಪಡುತ್ತಿದ್ದ ವಿಜಯನಗರಕ್ಕೆ ಸಾಮಂತರಾಗಿ ಬೆಂಬಲಕ್ಕೆ ನಿಂತು ಅದರ ಅಭಿವೃದ್ಧಿಗೆ ಶ್ರಮಿಸಿದವರು ಹಲವಾರು ರಾಜಮನೆತನದವರು ಇದ್ದ ರೂ ಸಹ ಅವರಲ್ಲಿ ಪ್ರಮುಖರೆ ಂದರೆ ಯಲಹಂಕ ನಾಡಪ್ರಭು ಕೆಂಪೇಗೌಡರ ವಂಶಸ್ಥರು ರಾಜ ಧರ್ಮದ ಪ್ರಕಾರ ಕೆಂಪನ ನಂಜೇ ಗೌಡರು ವಿಜಯನಗರಕ್ಕೆ ಭೇಟಿ ಕೊಟ್ಟಾಗಲ್ಲ ತಂದೆಯೊಂದಿಗೆ ಹೋ ಗುತ್ತಿದ್ದ ಕೆಂಪೇಗೌಡರು ಹಂಪಿಯ ಬೀದಿಗಳಲ್ಲಿ ಸ್ನೇಹಿತರೊಡನೆ ಓಡಾಡಿ ಹಂಪಿಯ ಸಮೃದ್ಧಿ ಮತ್ತು ಸೌಂದರ್ಯವನ್ನು ನೋಡಿ ಆನಂ ದಿಸುತ್ತಿದ್ದರು ನಮ್ಮ ಯಲಹಂಕ ವನ್ನು ಸಹ ಇದೇ ರೀತಿ ಕಟ್ಟಬೇಕು ಎಂದು ಈ ನಾಡನ್ನು ಆಳುವ ಸಂದರ್ಭ ಒದಗಿ ಬಂದರೆ ದಿಕ್ ದಿ ಗಂತದವರೆಗೂ ನಾಡನ್ನು ವಿಸ್ತರಿ ಸುವುದರ ಜೊತೆಗೆ ಅದನ್ನು ಸುಖ ಶಾಂತಿ ಸಮೃದ್ಧಿಯ ತಾಣವನ್ನಾಗಿ ಸಬೇಕೆಂದು ಹಂಬಲಿಸಿದರು ಮುಂದೆ ತಂದೆಯ ಮರಣ ನಂತರ ತಂದೆಯ ಸ್ಥಾನದಲ್ಲಿ ನಿಂತು ರಾಜ್ಯ ಆಡಳಿತದ ಜವಾಬ್ದಾರಿ ಹೊತ್ತು ಕೊಂಡರು ನಿಷ್ಠೆಯಿಂದ ಯುದ್ಧ ದಲ್ಲಿ ವಿಜಯನಗರದ ಅರಸರಿಗೆ ಹೆಗಲಣೆಯಾಗಿ ನಿಂತು ಹೋ ರಾಡಿ ಜಯವನ್ನು ತಂದುಕೊಡು ವುದರ ಜೊತೆಗೆ ಸಾಮ್ರಾಜ್ಯದ ಸಮೃದ್ದಿಗೆ ಕಾರಣರಾದರು.


ಕೆಂಪೇ ಗೌಡರಲ್ಲಿ ಜತಿ ಭೇದ ಇರಲಿಲ್ಲ ಅವರು ಪಕ್ಷಾತೀತವಾಗಿ ಇದ್ದರು ಯಾವುದೇ ಪಕ್ಷ ಪಂಗಡಕ್ಕೆ ಹೊಂದಿ ಕೊಂಡವರಾಗಿರಲಿಲ್ಲ ಸೃಷ್ಟಿಯಲ್ಲಿ ಸರ್ವರೂ ಸಮಾನರು ಎಂಬ ತತ್ವ ವನ್ನು ನೀಡುವುದಕ್ಕೆ ಕೆಂಪೇಗೌಡರು ಪ್ರಕೃತಿಯಲ್ಲಿ ಸಮತೋಲನ ಇರಬೇಕಾದರೆ ಮಾನವ ಸೃಷ್ಟಿಯ ಜೊತೆ ಜೀವ ಸಂಕಲಗಳು ಸಹ ಜೀವವೈವಿಧ್ಯಗಳು ಸಾಮರ್ಥ್ಯ ಹೊಂದಿರಬೇಕೆಂದು ತಿಳಿದಿದ್ದರು ಅದಕ್ಕಾಗಿ ನಗರ ಮಧ್ಯೆಗಳಲ್ಲಿ ಹಲವಾರು ಕೆರೆಗಳನ್ನ ಕಟ್ಟಿಸಿದರು ಹಲವಾರು ದೇವಾಲಯಗಳನ್ನು ನಿರ್ಮಿಸಿದರು.
ಹಾಳಾಗುತ್ತಿರುವ ದೇವಾಲ್ಯ ಗಳ ಜೀರ್ಣೋzರ ಕೈಗೊಂ ಡರು. ಬೆಂಗಳೂರಿನ ಗವಿ ಗಂಗಾ ಧರೇಶ್ವರ ದೇವಾಲಯದ ಮತ್ತು ಅದರ ಆವರಣದಲ್ಲಿ ಏಕಶಿಲೆ ಯಲ್ಲಿ ನಿರ್ಮಿಸಿರುವ ಬೃಹತ್ ಗಾತ್ರದ ಸೂರ್ಯಪಾನ ಮತ್ತು ಚಂದ್ರಪಾನ ಫಲಕಗಳು ಶಿವನ ಢಮರು ಮತ್ತು ತ್ರಿಶೂಲಗಳು ಬೆಂಗಳೂರಿನ ಶಿಲ್ಪಕಲಾ ವೈಭವ ಮತ್ತು ಸಾಂಸ್ಕೃತಿಕ ಮೆರವಂತಿಗೆ ಸಾಕ್ಷಿಯಾಗಿದೆ ಇದು ಕೆಂಪೇಗೌಡರ ಕಲಾ ವೈಪುಣ್ಯತೆಗೆ ಭಕ್ತಿಗೆ ಸಾಕ್ಷಿ ಯಾಗಿದೆ ಎಂದು ಹೇಳಬಹುದು ಇಂತಹ ಮಹಾತ್ಮನ ಜಯಂತಿಯ ನ್ನು ಆಚರಿಸಬೇಕಾಗಿದ್ದು ಕೇವಲ ಒಬ್ಬರಲ್ಲ ನಾಡಿನ ಪ್ರತಿಯೊಬ್ಬ ರಿಗೂ ಸಂಭ್ರಮದ ಸಂಗತಿಯಾ ಗಿದೆ ಎಂದರು.
ಶಿಶು ಕಲ್ಯಾಣ ಅಭಿವೃದ್ಧಿ ಅಧಿಕಾರಿ ಮಹಾಂತಸ್ವಾಮಿಯವರು ಸ್ವಾಗತಿಸಿ ಹೊಂದಿಸಿದರು ಈ ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಮುದ್ದನ ಗೌಡ ರೇಷ್ಮೆ ಇಲಾಖೆಯ ಜಗ ದೀಶ್ ಗ್ರೇಡ್ ೨ ತಹಸೀಲ್ದಾರ್ ಸುರೇಶ್ ಡಿ ಎಂ ಸರ್ವೇ ಇಲಾಖೆ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.