ಕ್ರೈಂಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಚಂದ್ರಶೇಖರ್ ಕುಟುಂಬಕ್ಕೆ ೫೦ ಲಕ್ಷ ಪರಿಹಾರ ನೀಡಿ…

Share Below Link

ಶಿವಮೊಗ್ಗ : ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಚಂದ್ರಶೇಖರ್ ಅವರ ಆತ್ಮಹತ್ಯೆ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು, ಸಚಿವ ನಾಗೇಂದ್ರ ಅವರ ರಾಜೀನಾಮೆ ಪಡೆಯಬೇಕು ಮತ್ತು ಮೃತ ಕುಟುಂಬಕ್ಕೆ ೫೦ ಲಕ್ಷ ರೂ. ಪರಿಹಾರ ನೀಡಬೇಕು ಎಂದು ಮಾಜಿ ಉಪಮುಖ್ಯಮಂತ್ರಿ ರಾಷ್ಟ್ರಭಕ್ತ ಬಳಗದ ಕೆ.ಎಸ್ . ಈಶ್ವರಪ್ಪ ಸುದ್ದಿಗೋಷ್ಟಿಯಲ್ಲಿ ಒತ್ತಾಯಿಸಿದರು.
ನಿಗಮದ ಅಧಿಕಾರಿ ಚಂದ್ರಶೇಖರ್ ಅವರು ಒಬ್ಬ ಪ್ರಾಮಾಣಿಕರು ಆಗಿದ್ದರು. ರಾಜ್ಯ ಸರ್ಕಾರದ ಭ್ರಷ್ಟಚಾರವನ್ನು ಬಯಲಿಗೆಳೆಯಲು ತಮ್ಮ ಪ್ರಾಣವನ್ನೇ ನೀಡಿದ್ದಾರೆ. ಒಬ್ಬ ಅಧಿಕಾರಿ ಹೀಗೆ ಆತ್ಮಹತ್ಯೆ ಮಾಡಿ ಕೊಳ್ಳುತ್ತಿರುವುದು ಅತ್ಯಂತ ದುರ್ದೈವದ ಸಂಗತಿ ಎಂದರು.


ಇಂದು ಮೃತ ಚಂದ್ರಶೇಖರ್ ಅವರ ಮನೆಗೆ ನಾನು ಹೋಗಿದ್ದೆ. ಕುಟುಂಬದವರ ದುಃಖ ಕಂಡು ಮನನೊಂದಿದ್ದೇನೆ. ಅದು ಅತ್ಯಂತ ಕಡು ಬಡತನದ ಕುಟುಂಬವಾಗಿದೆ. ಚಂದ್ರಶೇಖರ್ ಸಾಲ ಕೂಡ ಮಾಡಿದ್ದರು. ಅವರ ಕಷ್ಟ ನೋಡ ಲಾಗದೇ ೩ ಲಕ್ಷ ರೂ. ನೀಡಿದ್ದೇನೆ. ಸರ್ಕಾರ ಕೂಡ ೫೦ ಲಕ್ಷ ರೂ.ಗಳನ್ನು ಮಾನವೀಯತೆಯ ದೃಷ್ಠಿಯಿಂದ ಕೊಡಬೇಕು. ಒಂದು ಪಕ್ಷ ಸರ್ಕಾರ ಕೊಡದೇ ಹೋದರೆ ನಮ್ಮ ರಾಷ್ಟ್ರಭಕ್ತಬಳಗದ ವತಿಯಿಂದ ಹಣ ಸಂಗ್ರಹಿಸಿ ನೀಡುತ್ತೇವೆ ಎಂದರು.
ರಾಜ್ಯಸರ್ಕಾರ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಗೃಹಸಚಿವ ಪರಮೇಶ್ವರ್ ಈ ಕೇಸ್‌ನ್ನು ನನ್ನ ಕೇಸಿಗೆ ಹೋಲಿಕೆ ಮಾಡಿ ಇದೇ ಬೇರೆ, ಅದೇ ಬೇರೆ ಎಂದಿದ್ದಾರೆ. ಅದು ಹೇಗೆ ಬೇರೆಯಾಗುತ್ತದೆ. ನನ್ನ ಬಗ್ಗೆ ಈ ರೀತಿಯ ಆರೋಪ ಬಂದಾಗ ನಾನು ತಕ್ಷಣ ರಾಜೀನಾಮೆ ನೀಡಲಿಲ್ಲವೇ. ಸಚಿವ ನಾಗೇಂದ್ರ ಎಂಬ ಹೆಸರು ಡೆತ್‌ನೋಟ್‌ಲ್ಲಿ ಇಲ್ಲದಿದ್ದರೆ ಏನ್ ಆಯಿತು. ಸಂಬಂಧ ಪಟ್ಟ ಸಚಿವರು ಮಖಿಕವಾಗಿ ಹೇಳಿದ್ದಾರೆ ಎಂದು ಡೆತ್‌ನೋಟ್‌ನಲ್ಲಿ ತಿಳಿಸಿದ್ದಾ ರಲ್ಲವೇ, ಅದು ನಾಗೇಂದ್ರ ಎಂದು ಅರ್ಥ ವಲ್ಲವೇ. ಈ ಬಂಡತನ ಏಕೆ? ಈ ದ್ವಂದ್ವ ನಿಲುವು ಏಕೆ ಎಂದು ಸರ್ಕಾರವನ್ನು ಪ್ರಶ್ನೆ ಮಾಡಿದರು.
ಪ್ರಾಮಾಣಿಕ ಅಧಿಕಾರಿಗಳು ಈ ರೀತಿ ಆತ್ಮಹತ್ಯೆ ಮಾಡಿಕೊಳ್ಳೇ ಬೇಕೇ? ಬರೆದಿಟ್ಟೇ ಸಾಯಬೇಕೇ? ಈ ಸರ್ಕಾರ ಹೇಗೆ ಭಂಡತನದಿಂದ ವರ್ತಿಸುತ್ತದೆ. ಈ ಘಟನೆಯನ್ನು ಸಿಬಿಐಗೆ ನೀಡಿದರೆ ನ್ಯಾಯ ಸಿಗಲು ಸಾಧ್ಯ ಎಂದರು.
ರಾಜ್ಯ ಸರ್ಕಾರದಲ್ಲಿ ಪೊಲೀ ಸರಿಗೆ ರಕ್ಷಣೆ ಇಲ್ಲ, ಚನ್ನಗಿರಿಯಲ್ಲಿ ನಡೆದ ಘಟನೆಯನ್ನು ನೋಡಿದರೆ ಇದು ಅರ್ಥವಾಗುತ್ತದೆ. ಘಟನೆ ನಡೆದ ೭ ನಿಮಿಷದ ಒಳಗೆ ಮುಸ್ಲಿಂ ಯುವಕ ಹೃದಯಘಾತದಿಂದ ಸತ್ತಿದ್ದಾನೆ. ಆದರೆ ಸಾವಿರಾರು ಮುಸ್ಲಿಂರು ಮೆರವಣಿಗೆ ಯಲ್ಲಿ ಭಾಗವಹಿಸಿ ಠಾಣೆಯನ್ನು ಧ್ವಂಸ ಮಾಡಿದ್ದಾರೆ. ನಮ್ಮ ಹಿಂದುಗಳು ಇವರನ್ನು ನೋಡಿ ಕಲಿಯಬೇಕಾಗಿದೆ. ನಾನು ಒಳ್ಳೆಯದಕ್ಕೆ ಮೆರವಣಿಗೆ ಮಾಡಿದರೆ, ಮುಸ್ಲಿಂ ಗೂಂಡಾಗಳು ಇಲ್ಲಸಲ್ಲದ್ದಕ್ಕೆ ಮೆರವಣಿಗೆ ಮಾಡುತ್ತಾರೆ ಎಂದು ದೂರಿದರು.
ಕಾಂಗ್ರೆಸ್ ಸರ್ಕಾರದಲ್ಲಿ ಮಾತ್ರ ಇಂತಹ ಘಟನೆಗಳು ನಡೆಯಲು ಸಾಧ್ಯ. ಮಂಗಳೂರಿನ ರಸ್ತೆಯ ಮೇಲೆಯೇ ನಮಾಜ್ ಮಾಡುತ್ತಾರೆ. ನಮಾಜ್ ಮಾಡಿದವರ ವಿರುದ್ಧ ಪೊಲೀಸರು ಕೇಸು ದಾಖಲಿಸಿ ಕೊಂಡರೇ ಆ ಪೊಲೀಸ್‌ನನ್ನು ಕಡ್ಡಾಯ ರಜದ ಮೇಲೆ ಕಳುಹಿಸು ತ್ತಾರೆ. ಲವ್ ಜಿಹಾದ್ ಹೆಸರಿನಲ್ಲಿ ನಮ್ಮ ಹಿಂದು ಹೆಣ್ಣುಮಕ್ಕಳು ತಮ್ಮ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿ ದ್ದಾರೆ. ಇಂತಹ ಬೇಕಾದಷ್ಟು ಉದಾಹರ ಣೆಗಳು ನನ್ನ ಕಣ್ಣಮುಂದೆಯೇ ನಡೆದಿವೆ ಎಂದರು.
ಶಿವಮೊಗ್ಗವು ಸೇರಿದಂತೆ ರಾಜ್ಯದ ಎಲ್ಲೆಡೆ ಮಟ್ಕಾ,ಜೂಜು, ಕೊಲೆ, ಸುಲಿಗೆಗಳು ನಡೆಯುತ್ತಲೇ ಇವೆ. ಅನೇಕ ಕಡೆ ಪೊಲೀಸರು ಶಾಮಿಲಾಗಿ ರುತ್ತಾರೆ. ರಾಜ್ಯ ಸರ್ಕಾರ ಮಾತ್ರ ತನಗೇನು ಗೊತ್ತಿಲ್ಲದಿದಂತೆ ವರ್ತಿಸುತ್ತಿದೆ ಎಂದು ದೂರಿದರು.
ನೈರುತ್ಯ ಪದವೀಧರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ರಘುಪತಿಭಟ್ ಗೆದ್ದೇ ಗೆಲ್ಲುತ್ತಾರೆ ಎಂದರು.
ರಾಷ್ಟ್ರಭಕ್ತ ಬಳಗದ ಪ್ರಮುಖ ರಾದ ಇ. ವಿಶ್ವಾಸ್, ಶಂಕರ್ ಗನ್ನಿ, ಕಾಚಿನಕಟ್ಟೆ ಸತ್ಯನಾರಾಯಣ, ಮಹಾಲಿಂಗಶಾಸ್ತ್ರಿ, ಜಧವ್, ಭೂಪಾಲ್, ಬಾಲು, ಮೋಹನ್ ಇದ್ದರು.

This image has an empty alt attribute; its file name is Arya-coll.gif