ತಾಜಾ ಸುದ್ದಿರಾಜಕೀಯ

ಜಕ್‌ವೆಲ್‌ನಿಂದ ೫ ಕರೆಗಳು ತುಂಬಲಿವೆ:ಎಂಪಿಆರ್

Share Below Link

ಹೊನ್ನಾಳಿ : ಬೆನಕಹಳ್ಳಿ ಏತ ನೀರಾವರಿ ಯೋಜನೆಯು ೫೮ ಕೋಟಿ ರೂಪಾಯಿ ವೆಚ್ಚದ ಯೋ ಜನೆ ಇದಾಗಿದ್ದು, ಈ ಮೂಲಕ ೨೪ ತುಂಬಲಿವೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ಮಂಗಳವಾರ ತಾಲೂಕಿನ ಹಿರೇಗೋಣಿಗೆರೆ ಗ್ರಾಮದ ಬಳಿ ನಿರ್ಮಾಣವಾಗುತ್ತಿರುವ ಜಕ್ ವೆಲ್ ಕಾಮಗಾರಿ ವೀಕ್ಷಣೆ ಮಾಡಿ ಅವರು ಮಾತನಾಡಿದರು.
ಬೆನಕಹಳ್ಳಿ ಏತ ನೀರಾವರಿ ಯೋಜನೆ ಮೂಲಕ ಎರಡು ಕಡೆ ಜಕ್‌ವೆಲ್ ನಿರ್ಮಾಣ ಮಾಡ ಲಾಗುತ್ತಿದ್ದು ಒಂದು ಕಮ್ಮಾರಘಟ್ಟೆ ಬಳಿ ಮತ್ತೊಂದು ಹಿರೇಗೋಣಿ ಗೆರೆ ಬಳಿ ಜಕ್ ವೆಲ್ ನಿರ್ಮಾಣ ಮಾಡಲಾಗುತ್ತಿದೆ ಎಂದರು.
ಕಮ್ಮಾರಘಟ್ಟೆ ಬಳಿ ನಿರ್ಮಾ ಣವಾಗುತ್ತಿರುವ ಜಕ್‌ವೆಲ್‌ನಿಂದ ೧೫ ಕೆರೆಗಳನ್ನು ತುಂಬಿಸಲಾಗು ವುದು ಎಂದ ರೇಣುಕಾಚಾರ್ಯ ಹಿರೇಗೋಣಿಗೆ ಬಳಿ ನಿರ್ಮಾಣ ವಾಗುತ್ತಿರುವ ಜಕ್‌ವೆಲ್ ನಿಂದ ೫ ಕರೆಗಳು ತುಂಬಲಿವೆ ಎಂದರು.
ಕೆರೆಗಳು ತುಂಬುವುದರಿಂದ ಬೋರ್‌ವೆಲ್‌ಗಳಲ್ಲಿ ಅಂತರ್ ಜಲದ ಮಟ್ಟ ಎಚ್ಚಲಿದೆ ಎಂದ ರೇಣುಕಾಚಾರ್ಯ ೨೦೧೮ ಚುನಾ ವಣಾ ಪೂರ್ವದಲ್ಲಿ ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನ ಕೆರೆಗ ಳನ್ನು ತುಂಬಿಸುವುದಾಗಿ ಮಾತು ಕೊಟ್ಟಿದ್ದು ಇದೀಗ ಮಾತು ಕೊಟ್ಟ ಂತೆ ನಡೆದು ಕೊಂಡಿದ್ದೇನೆಂದರು.


ನನ್ನ ಅಧಿಕಾರಾವಧಿಯಲ್ಲಿ ಅಭಿವೃದ್ದಿಯೇ ಮೂಲಕ ಮಂತ್ರ ಎಂದು ಕೆಲಸ ಮಾಡಿದ್ದು ಹೊನ್ನಾಳಿ ನ್ಯಾಮತಿ ಅವಳಿ ತಾಲೂ ಕಿನ ಸಮಗ್ರ ಅಭಿವೃದ್ದಿ ಮಾಡಿದ್ದೇ ನೆಂದರು.
ವಿವಿಧ ಕಾಮಗಾರಿಗಳ ವೀಕ್ಷಣೆ : ಹಿರೇಗೋಣಿಗೆರೆ ಗ್ರಾಮದಲ್ಲಿ ಜಕ್‌ವೆಲ್ ನಿರ್ಮಾಣ ಕಾಮಗಾರಿ ವೀಕ್ಷಿಸಿ ಮಾತನಾಡಿದ ರೇಣುಕಾ ಚಾರ್ಯ, ಗ್ರಾಮದಲ್ಲಿ ಕೆರೆ ದುರಸ್ಥಿ ಕಾಮಗಾರಿ ೧ ಕೋಟಿ, ಗ್ರಾಮದಲ್ಲಿ ಕೆರೆ ಕೋಡಿ ದುರಸ್ಥಿ ಕಾಮಗಾರಿ ೫೦ ಹಿರೇಗೋಣಿಗೆರೆ ಸೇರಿದಂತೆ ಇತರೆ ಎಂಟು ಗ್ರಾಮಗಳಿಗೆ ಬಹು ಗ್ರಾಮ ಕುಡಿಯುವ ನೀರಿನ ಯೋಜನೆ ೭.೭೫ ಕೋಟಿ, ಸುವರ್ಣ ಗ್ರಾಮ ಯೋಜನೆಯಡಿ ಗ್ರಾಮದ ಅಭಿವೃದ್ದಿ ೧.೧೦ ಕೋಟಿ, ಗ್ರಾಮದಲ್ಲಿ ಸಿಸಿ ರಸ್ತೆಗಳ ನಿರ್ಮಾಣ ೧.೮೦ ಕೋಟಿ, ಜಲ ಜೀವನ್ ಮೀಷನ್ ಕಾಮಗಾರಿ ೫೦ ಲಕ್ಷ, ಶಾಲಾಕೊಠಡಿಗಳ ನಿರ್ಮಾಣ ೩೫ ಲಕ್ಷ, ಅಂಗನ ವಾಡಿ ಕೇಂದ್ರ ೨೫ ಲಕ್ಷ, ಜಗಜೀ ವನ್ ರಾವ್ ಭವನ ೧೦ ಲಕ್ಷ, ಹೊಸ ಆಯುರ್ವೆಧಿಕ್ ಆಸ್ಪತ್ರೆ ೨೦ ಲಕ್ಷ, ಪಶು ವೈದ್ಯಕೀಯ ಆಸ್ಪತ್ರೆ ಕಟ್ಟಡ ೧೫ ಲಕ್ಷ, ಸೇರಿದಂತೆ ೧೪ .೭೩ ಕೋಟಿ ರೂಪಾಯಿ ವೆಚ್ಚದಲ್ಲಿ ಗ್ರಾಮವನ್ನು ಅಭಿವೃದ್ದಿ ಮಾಡ ಲಾಗಿದೆ ಎಂದರು.
ಈ ಸಂದರ್ಭ ಮುಖಂಡರಾದ ಪ್ರಭು, ಬರಮಣ್ಣ, ಬಸವರಾಜ್, ಮಂಜುನಾಥ್, ರಮೇಶ್, ಸಿದ್ದಣ್ಣ, ಪ್ರಕಾಶ್ ಇದ್ದರು.