ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ರೈತರಿಗೆ ಬೆಳೆ ವಿಮೆ ಯೋಜನೆಯಡಿ ೪೩೫ ಕೋಟಿ ರೂ. ಬಿಡುಗಡೆ: ಬಿವೈಆರ್

Share Below Link

ಶಿವಮೊಗ್ಗ : ಬೆಳೆ ವಿಮೆ ಯೋಜನೆಯಡಿಯಲ್ಲಿ ಜಿಯ ರೈತರಿಗೆ ಸುಮಾರು ೪೩೫ ಕೋಟಿ ರೂ. ಬಿಡುಗಡೆಯಾಗ ಲಿದ್ದು, ೫೦,೩೮೦ ರೈತರಿಗೆ ಎಕರೆಗೆ ೨೫ ಸಾವಿರ ರೂ.ಗಳಾದರೂ ವಿಮೆ ಪರಿಹಾರ ಸಿಗಲಿದೆ ಎಂದು ಸಂಸದ ರಾಘವೇಂದ್ರ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ೨೦೨೩- ೨೪ರ ಬೆಳೆ ವಿಮೆಗಾಗಿ ಜಿಯಲ್ಲಿ ಸುಮಾರು ೫೦,೩೮೩ ರೈತರು ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಅಗ್ರಿಕಲ್ಚರ್ ಇನ್ಶುರೆನ್ಸ್ ಕಂಪನಿಗೆ ಇದರ ಜವಾಬ್ದಾರಿ ನೀಡಲಾಗಿತತು. ಕಳೆದ ವರ್ಷ ಬರಗಾಲ ಬಂದಿತ್ತು. ಸುಮಾರು ೮೭ ಸಾವಿರ ಎಕರೆ ಜಮೀನಿನಲ್ಲಿ ಬೆಳೆಯೇ ಇರಲಿಲ್ಲ. ೪೪೫ ಕೋಟಿ ರೂ. ಪರಿಹಾರ ನೀಡಬೇಕಿತ್ತು. ಇದರಲ್ಲಿ ರೈತರು ಸುಮಾರು ೨೨.೫೦ ಕೋಟಿ ರೂ. ವಿಮೆ ಕಟ್ಟಿzರೆ ಎಂದು ತಿಳಿಸಿದರು.
ಜಿಯಲ್ಲಿ ಅಡಿಕೆ ಬೆಳೆಯೇ ಹೆಚ್ಚು ನಷ್ಟ ಉಂಟಾಗಿದೆ. ಇದರ ಜೊತೆಗೆ ಶುಂಠಿ, ಮಾವು ಮೆಣಸು ಕೂಡ ಸೇರಿದೆ. ಆದರೆ, ಸುಮಾರು ೪೮೬೧೯ ಅಡಿಕೆ ಬೆಳೆಗಾರರು ವಿಮೆಗಾಗಿ ಅರ್ಜಿ ಹಾಕಿzರೆ. ಸುಮಾರು ೮೪ ಸಾವಿರ ಎಕರೆ ಪ್ರದೇಶದಲ್ಲಿ ಅಡಕೆ ಬೆಳೆ ನಷ್ಟವಾಗಿದೆ. ೪೪೫ ಕೋಟಿ ರೂ.ಗಳಲ್ಲಿ ೪೩೫ ಕೋಟಿ ರೂ. ಅಡಿಕೆ ಬೆಳೆಗೆ ಪರಿಹಾರ ಸಿಗಲಿದೆ. ಇನ್ನು ೮-೧೦ ದಿನಗಳಲ್ಲಿ ರೈತರ ಖಾತೆಗೆ ಹಣ ಜಮಾ ಆಗುತ್ತದೆ ಎಂದು ಮಾಹಿತಿ ನೀಡಿದರು.