ಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ದ್ವಿತೀಯ ಪಿಯು ಪೂರಕ – ಸಿಇಟಿ ಪರೀಕ್ಷೆ ಸುಗಮವಾಗಿ ನಡೆಸಲು ಕ್ರಮ:ಡಿಸಿ

Share Below Link

ಶಿವಮೊಗ್ಗ : ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಹಾಗೂ ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶ ಕ್ಕಾಗಿ ಸಿಇಟಿ ಪರೀಕ್ಷೆಯನ್ನು ಸುಗ ಮವಾಗಿ ನಡೆಸಲು ಎ ಮುನ್ನೆ ಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಜಿಧಿಕಾರಿ ಆರ್.ಸೆಲ್ವಮಣಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅವರು ಗುರುವಾರ ಜಿಧಿಕಾರಿ ಕಚೇರಿಯಲ್ಲಿ ಈ ಕುರಿತು ವಿವಿಧ ಇಲಾಖೆಗಳ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿ ದರು.
ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಮೇ ೨೩ರಿಂದ ಜೂನ್ ೩ರವರೆಗೆ ಜಿಯ ಒಟ್ಟು ೮ ಪರೀಕ್ಷಾ ಕೇಂದ್ರಗಳಲ್ಲಿ ನಡೆಯ ಲಿದ್ದು, ೩೩೧೨ ವಿದ್ಯಾರ್ಥಿಗಳು ಹಾಜರಾಗಲಿzರೆ. ಶಿವಮೊಗ್ಗ ದಲ್ಲಿ ಎರಡು ಹಾಗೂ ಭದ್ರಾವತಿ, ತೀರ್ಥಹಳ್ಳಿ, ಹೊಸನಗರ, ಸಾಗ ರ, ಶಿಕಾರಿಪುರ ಮತ್ತು ಸೊರಬ ದಲ್ಲಿ ತಲಾ ಒಂದು ಕೇಂದ್ರದಲ್ಲಿ ಪರೀಕ್ಷೆ ನಡೆಯಲಿದೆ. ಪ್ರಶ್ನೆ ಪತ್ರಿಕೆಗಳನ್ನು ವಿತರಿಸಲು ಒಟ್ಟು ೬ ಮಾರ್ಗಗಳನ್ನು ಗುರುತಿಸಲಾಗಿದೆ.


ಪ್ರಶ್ನೆ ಪತ್ರಿಕೆಗಳನ್ನು ಸಾಗಾಟ ಮಾಡಲು ತ್ರಿಸದಸ್ಯ ಸಮಿತಿಯನ್ನು ರಚಿಸಲಾಗಿದ್ದು, ಪ್ರಶ್ನೆ ಪತ್ರಿಕೆ ಸಾಗಾಟ ವಾಹನಕ್ಕೆ ಸೂಕ್ತ ಪೊಲೀ ಸ್ ಭದ್ರತೆಯನ್ನು ಒದಗಿಸಬೇಕು. ಈ ವಾಹನಕ್ಕೆ ಜಿಪಿಎಸ್ ಅಳವಡಿಸಿ ನಿಗಾ ವಹಿಸಲು ವ್ಯವಸ್ಥೆ ಮಾಡ ಬೇಕು. ಇದೇ ರೀತಿ ಪರೀಕ್ಷಾ ಕೇಂದ್ರಕ್ಕೆ ಸೂಕ್ತ ಬಂದೋಬಸ್ತು ಒದಗಿಸಲು ಕ್ರಮ ಕೈಗೊಳ್ಳಬೇಕು. ಮುಖ್ಯ ಅಧೀಕ್ಷಕರು ಹಾಗೂ ಉತ್ತರ ಪತ್ರಿಕೆ ಪಾಲಕರನ್ನು ಈಗಾಗಲೇ ನೇಮಿಸಲಾಗಿದ್ದು, ಪರೀಕ್ಷಾ ಕೇಂದ್ರದ ಸುತ್ತಮುತ್ತ ೨೦೦ಮೀಟರ್ ವ್ಯಾಪ್ತಿಯಲ್ಲಿ ೧೪೪ಸೆಕ್ಷನ್ ಜರಿಗೊಳಿಸಿ ಆದೇಶಿ ಸಲಾಗಿದೆ ಎಂದು ಅವರು ಹೇಳಿ ದರು.
ಪರೀಕ್ಷಾ ಸಮಯದಲ್ಲಿ ಯಾ ವುದೇ ವಿದ್ಯುತ್ ವ್ಯತ್ಯಯ ವಾಗದಂತೆ ಎಚ್ಚರಿಕೆ ವಹಿಸಬೇಕು. ಪರೀಕ್ಷಾ ಕೇಂದ್ರಗಳನ್ನು ಸರಿಯಾಗಿ ಸ್ಯಾನಿಟೈಸ್ ಮಾಡಲು ಮಹಾ ನಗರ ಪಾಲಿಕೆ ಹಾಗೂ ಆರೋಗ್ಯ ಇಲಾಖೆ ಕ್ರಮ ಕೈಗೊಳ್ಳಬೇಕು. ಖಜನೆಯಲ್ಲಿ ಪ್ರಶ್ನೆ ಪತ್ರಿಕೆಗಳನ್ನು ಠೇವಣಿ ಇರಿಸುವ ಹಾಗೂ ವಿತರಿ ಸುವ ಪ್ರಕ್ರಿಯೆ ನಡೆಯುವ ಸ್ಥಳದಲ್ಲಿ ೨೪ಗಂಟೆ ಕಾಲ ಸಿಸಿಟಿವಿ ವ್ಯವಸ್ಥೆಯನ್ನು ಖಾತ್ರಿಪಡಿಸಬೇಕು ಎಂದು ಹೇಳಿದರು.


ಸಿಇಟಿ ಪರೀಕ್ಷೆ:೨೦೨೩ನೇ ಸಾಲಿನ ಇಂಜಿನಿಯರಿಂಗ್, ಕೃಷಿ ವಿeನ ಮುಂತಾದ ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿಗೆ ಸಾಮಾನ್ಯ ಪ್ರವೇಶ ಪರೀಕ್ಷೆ ಮೇ ೨೦ ಮತ್ತು ೨೧ರಂದು ನಡೆ ಯಲಿದೆ. ಪರೀಕ್ಷೆ ಬೆಳಿಗ್ಗೆ ೧೦.೩೦ ರಿಂದ ೧೧.೫೦ರವರೆಗೆ ಹಾಗೂ ಮಧ್ಯಾಹ್ನ ೨.೩೦ರಿಂದ ೩.೫೦ರ ವರೆಗೆ ನಡೆಯಲಿದೆ. ಶಿವಮೊಗ್ಗ, ಭದ್ರಾವತಿ ಮತ್ತು ಸಾಗರ ತಾಲೂಕಿ ನಲ್ಲಿ ಒಟ್ಟು ೧೯ ಪರೀಕ್ಷಾ ಕೇಂದ್ರ ಗಳನ್ನು ಗುರುತಿಸಲಾಗಿದೆ. ಪರೀಕ್ಷೆ ಯಲ್ಲಿ ಯಾವುದೇ ಅಕ್ರಮಕ್ಕೆ ಅವ ಕಾಶವಾಗದಂತೆ ಸುಸೂತ್ರವಾಗಿ ನಡೆಸಲು ಎಲ್ಲರೂ ಸಹಕರಿ ಸಬೇಕು ಎಂದು ಅವರು ಹೇಳಿ ದರು.
ಅಪರ ಜಿಧಿಕಾರಿ ಎಸ್. ಎಸ್.ಬಿರಾದಾರ್, ಹೆಚ್ಚುವರಿ ಪೊಲೀಸ್ ವರಿಷಧಿಕಾರಿ ಅನಿಲ್ ಕುಮಾರ್ ಭೂಮರಡ್ಡಿ ಸೇರಿದಂತೆ ಜಿಮಟ್ಟದ ಹಿರಿಯ ಅಧಿಕಾರಿ ಗಳು ಸಭೆಯಲ್ಲಿ ಹಾಜರಿದ್ದರು.