ಜಿಲ್ಲಾ ಸುದ್ದಿತಾಜಾ ಸುದ್ದಿ

ಸೆ.೧೮ರಿಂದ ೨೫ರವರೆಗೆ ಸಂಗೀತ ಕಾರ್‍ಯಕ್ರಮ…

Share Below Link

ಶಿವಮೊಗ್ಗ: ಶ್ರೀ ವಿದ್ಯಾಗಣ ಪತಿ ಸೇವಾ ಸಂಘದ ವತಿಯಿಂದ ಈ ಬಾರಿ ೭೬ನೇ ಗಣೇಶೋತ್ಸ ವವನ್ನು ಸೆ.೧೮ರಿಂದ ೨೫ರವರೆಗೆ ಸಂಭ್ರಮ, ಸಡಗರ ಹಾಗೂ ಸಂಗಿ ತ ಕಾರ್ಯಕ್ರಮಗಳ ಮೂಲಕ ಆಚರಿಸಲಾಗುವುದು ಎಂದು ಸೇವಾ ಸಂಘದ ಕಾರ್ಯದರ್ಶಿ ಹೆಚ್.ಆರ್. ಸುಬ್ರಹ್ಮಣ್ಯ ಶಾಸ್ತ್ರಿ ಸುದ್ದಿಗೋಷ್ಟಿಯಲ್ಲಿ ಹೇಳಿದರು.
ನಗರದ ಪ್ರತಿಷ್ಠಿತ ಶ್ರೀ ವಿದ್ಯಾಗಣಪತಿ ಸೇವಾ ಸಂಘವು ಕಳೆದ ೭೫ ವರ್ಷಗಳನ್ನು ಪೂರೈಸಿ ದ್ದು, ಅಮೃತ ಮಹೋತ್ಸವದ ಅಂಗವಾಗಿ ೭೫ ಕಾರ್ಯಕ್ರಮಗ ಳನ್ನು ಯಶಸ್ವಿಯಾಗಿ ಪೂರೈಸಿ ಈಗ ೭೬ನೇ ವರ್ಷದ ಗಣೇಶೋತ್ಸವ ವನ್ನು ಆಚರಿಸಲು ಸಿದ್ಧರಾಗಿದ್ದೇವೆ ಎಂದರು.


ಸೆ.೧೮ರಂದು ಗಣಪತಿ ಪ್ರತಿಷ್ಠಾಪನೆ ಮಾಡಲಾಗುವುದು. ೧೯ರಿಂದ ೨೫ರ ವರೆಗೆ ನಗರದ ಕೋಟೆ ಮಾರಿಕಾಂಬಾ ದೇವ ಸ್ಥಾನದ ಸಭಾಭವನದಲ್ಲಿ ಪ್ರತಿದಿನ ಸಂಜೆ ೫.೩೦ರಿಂದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಈ ಕಾರ್ಯ ಕ್ರಮದಲ್ಲಿ ಸಂಗೀತ ದಿಗ್ಗಜರು ಭಾಗವಹಿಸಲಿದ್ದಾರೆ ಎಂದರು.
೧೯ರಂದು ಸಂಜೆ ೫.೩೦ಕ್ಕೆ ಹರಕೋಡು ವೀಣಾ ಮಾಧವ ಅವರಿಂದ ಸ್ಯಾಕ್ಸೋಫೋನ್, ೬-೩೦ಕ್ಕೆ ಪದ್ಮಶ್ರೀ ಹರಿಪ್ರಸಾದ್ ಚೌರಾಸಿಯಾ ಅಣ್ಣನ ಮಗ ಪಂಡಿತ್ ರಾಕೇಶ್ ಚೌರಾಸಿಯಾ, ಹಿಂದೂಸ್ಥಾನಿ ಕೊಳಲು ವಾದನ ಆಯೋಜಿಸಲಾಗಿದೆ.
೨೦ರಂದು ರೇಣುಕಾ ಆರ್. ಕಾರಂತ್, ಧಾತ್ರಿಕುಮಾರ್ ಅವರಿಂದ ಹಿಂದೂಸ್ತಾನಿ ಗಾಯನ, ೨೧ರಂದು ಸೌಮ್ಯ ಕೇಶವ, ಹೊಸಹಳ್ಳಿ ಕಾರ್ತಿಕ್ ಅವರಿಂದ ಹಾಡುಗಾರಿಕೆ, ೨೨ರಂದು ಸುಜತಾ ಚಿದಂಬರ, ಚೆನ್ನೈನ ವಸುಧಾ ರವಿ ಅವರಿಂದ ಹಾಡುಗಾರಿಕೆ, ೨೩ರಂದು ವಾಣಿ ಮತ್ತು ನಿಹಾರಿಕಾ ಅವರಿಂದ ಯುಗಳ ವೀಣಾ ವಾದನ, ವೈ.ಜಿ. ಶ್ರೀಲತಾ ಅವರಿಂದ ವೀಣಾ ವಾದನ ಆಯೋಜಿಸಲಾಗಿದೆ ಎಂದರು.
೨೪ರಂದು ಪೂಜಿತ್ ತೇಜಸ್ವಿ, ಚೆನ್ನೈನ ವಿವೇಕ್ ಸದಾಶಿವಂ ಅವ ರಿಂದ ಹಾಡುಗಾರಿಕೆ., ೨೫ರಂದು ಪಿ. ಚಂದ್ರಜ್ಯೋತಿ ಮತ್ತು ಮೇಧಾ ಮಂಜುನಾಥ್ ಅವರಿಂದ ಹಾಡುಗಾರಿಕೆ ಇರುತ್ತದೆ. ಈ ಎಲ್ಲಾ ಕಾರ್ಯಕ್ರಮಗಳಲ್ಲೂ ಪಿಟೀಲು, ಮೃದಂಗ, ಘಟಂ ಸೇರಿದಂತೆ ಪಕ್ಕವಾದ್ಯಗಳು ಇರುತ್ತವೆ ಎಂದರು.
ಸಮಿತಿಯ ಅಧ್ಯಕ್ಷ ಪ್ರೊ| ಹೆಚ್.ಆರ್. ಶಂಕರನಾರಾಯಣ ಶಾಸ್ತ್ರಿ ಮಾತನಾಡಿ, ೨೬ರಂದು ಸಂಜೆ ೬.೩೦ಕ್ಕೆ ರಾಜಬೀದಿ ಉತ್ಸ ವದ ಮೂಲಕ ಗಣಪತಿಯನ್ನು ವಿಸರ್ಜನೆ ಮಾಡಲಾಗುವುದು. ಶ್ರೀ ವಿದ್ಯಾ ಗಣಪತಿ ಸೇವಾ ಸಂಘ ವು ಕಳೆದ ೭೫ ವರ್ಷಗಳಿಂದ ಸಂಗೀ ತ ಕಾರ್ಯಕ್ರಮಗಳ ಮೂಲಕ ಸಾರ್ವಜನಿಕ ಗಣಪತಿಯನ್ನು ಪ್ರತಿಷ್ಠಾಪಿಸಿ ವಿಸರ್ಜನೆ ಮಾಡಲಾ ಗುತ್ತಿದೆ.
ಈ ಎಲ್ಲಾ ಕಾರ್ಯಕ್ರಮ ಗಳಿಗೆ ಶಿವಮೊಗ್ಗದ ಸಂಗೀತಾ ಸಕ್ತರು ಹಾಗೂ ಭಕ್ತರು ತಮ್ಮ ತನುಮನ ಧನಗಳಿಂದ ನಮಗೆ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ಕೋಟೆ ಮಾರಿಕಾಂಬಾ ದೇವ ಸ್ಥಾನದ ಸಮಿತಿಯವರು ಕೂಡ ನಮಗೆ ಪ್ರೋತ್ಸಾಹ ನೀಡಿದ್ದಾರೆ. ಎಲ್ಲರಿಗೂ ನಮ್ಮ ಕೃತಜ್ಞತೆಗಳು ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ಪದಾಧಿಕಾರಿಗಳಾದ ಶ್ರೀಕಂಠ ಜೋಯಿಸ್, ಎಸ್.ಜಿ.ಆನಂದ, ಹೆಚ್.ಡಿ. ಮೋಹನ ಶಾಸ್ತ್ರಿ, ಡಿ.ಎಸ್. ನಟರಾಜ್ ಇದ್ದರು.